ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದು ತಮ್ಮ ಭಾಷಣವನ್ನು ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳನ್ನು ಓದುವ ಮೂಲಕ ಆರಂಭ ಮಾಡಿದರು.
ರಾಜ್ಯ ಬಜೆಟ್‌ನಲ್ಲಿ ಕೃಷಿಕರಿಗೆ ಯೋಜನೆಗಳನ್ನು ಘೋಷಣೆ ಮಾಡಿದ ರಾಜ್ಯದ ಸರ್ಕಾರ ರೈತರಿಗೆ ಪ್ರಸಕ್ತ ವರ್ಷದಿಂದಲೇ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿಯನ್ನು ₹3 ಲಕ್ಷಗಳಿಂದ ₹ 5 ಲಕ್ಷಗಳಿಗೆ ಹೆಚ್ಚಳ ಮಾಡಲಾಗಿದೆ.
2023-24ನೇ ಸಾಲಿನ ಆಯವ್ಯಯದ ಪ್ರಮುಖಾಂಶಗಳು;
ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ₹25,000 ಕೋಟಿಗಳಷ್ಟು ಸಾಲ ವಿತರಣೆ ಕ್ರಮ.
ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮುಂತಾದ ಪರಿಕರಗಳಿಗೆ ₹ 962 ಕೋಟಿ ವೆಚ್ಚ
ನೀರಾವರಿ ಪಂಪ್‌ಸೆಟ್‌ಗಳಿಗೆ ₹ 52,590 ಕೋಟಿ ವಿದ್ಯುತ್ ಸಹಾಯ ಧನ
ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ ₹180 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆಯಡಿ ಭದ್ರತೆ
ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ಭೂಸಿರಿ ಎಂಬ ನೂತನ ಯೋಜನೆಯಡಿ 2023-24ನೇ ಸಾಲಿನಿಂದ ₹ 10 ಸಾವಿರಗಳ ಹೆಚ್ಚುವರಿ ಸಹಾಯ ಧನ
ಕೃಷಿ ಯಾಂತ್ರೀಕರಣವನ್ನು ಉತ್ತೇಜಿಸಲು ₹ 2,037 ಕೋಟಿ
ಫಸಲ್ ಭೀಮಾ ಯೋಜನೆಯಡಿ 86 ಲಕ್ಷ ರೈತರ ಬೆಳೆ ವಿಮೆಗಾಗಿ ₹ 4,900 ಕೋಟಿ ಪ್ರೀಮಿಯಂ ಪಾವತಿ
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ, ರಾಗಿ, ಜೋಳ, ಹೆಸರು ಕಾಳು ಮತ್ತು ತೊಗರಿ ಮುಂತಾದ ಆಹಾರ ಧಾನ್ಯಗಳ ಖರೀದಿಗಾಗಿ ₹ 6,650 ಕೋಟಿ
ರೈತ ಶಕ್ತಿ ಯೋಜನೆ; ಕಳೆದ ವರ್ಷ ಘೋಷಿಸಿದ ಡೀಸೆಲ್ ಸಬ್ಸಿಡಿ ಗೆ ₹ 400 ಕೋಟಿ ಅನುದಾನ
ಬೆಳೆಗಳ ಸಂಸ್ಕರಣೆ, ಶೇಖರಣೆಗಾಗಿ 10.45 ಲಕ್ಷ ಫಲಾನುಭವಿಗಳಿಗೆ ₹175 ಕೋಟಿ ನೆರವು
ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಗೆ ₹ 5,245 ಕೋಟಿ ವೆಚ್ಚ
ರೈತ ವಿದ್ಯಾನಿಧಿ ಯೋಜನೆಯಡಿಯಲ್ಲಿ 10.32 ಲಕ್ಷ ವಿದ್ಯಾರ್ಥಿಗಳಿಗೆ ₹125 ಕೋಟಿ ನೀಡಲಾಗಿದೆ.
ಕೃಷಿ ಮತ್ತು ತೋಟಗಾರಿಕೆಯಲ್ಲಿ ಹನಿ ನೀರಾವರಿಗಾಗಿ ₹2,900 ಕೋಟಿಗೆ ಮಾರುಕಟ್ಟೆ ನೆರವು
185 ನಗರ ಹಾಗೂ ಪಟ್ಟಣಗಳಲ್ಲಿ ₹6,820 ಕೋಟಿ ವೆಚ್ಚದಲ್ಲಿ 7.21 ಲಕ್ಷ ಮನೆಗಳಿಗೆ ನಳ ಸಂಪರ್ಕ
ಮಹಿಳಾ ಉದ್ದಿಮೆದಾರರಿಗೆ 2 ಕೋಟಿ ರೂ. ವರೆಗೆ 4% ಬಡ್ಡಿದರ ಸಾಲ ಸೌಲಭ್ಯ ₹5 ಕೋಟಿಗೆ ಹೆಚ್ಚಳ
ʻಪೌರ ಆಸರೆ ಯೋಜನೆʼಯಡಿ 5,000 ಪೌರಕಾರ್ಮಿಕರಿಗೆ ₹300 ಕೋಟಿ ವೆಚ್ಚದಲ್ಲಿ ಮನೆ ನಿರ್ಮಾಣ
ಎಸ್ಕಾಂಗಳಿಗೆ ₹13,743 ಕೋಟಿ ಅನುದಾನ
ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಯೋಜನೆಯಡಿ ₹2000 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ
ಪಶ್ಚಿಮ ಘಟ್ಟ ವ್ಯಾಪ್ತಿಯ ಜಿಲ್ಲೆಗಳಲ್ಲಿ 500 ಕಾಲು ಸಂಕಗಳ ನಿರ್ಮಾಣ – ಕಾಮಗಾರಿಗಳಿಗಾಗಿ ₹250 ಕೋಟಿ
ಕೊಡಗು ಜಿಲ್ಲೆಯ ಮುಖ್ಯರಸ್ತೆ ಅಭಿವೃದ್ಧಿಗೆ ₹100 ಕೋಟಿ ವಿಶೇಷ ಅನುದಾನ
ಕಿರು ಬಂದರುಗಳ ಅಭಿವೃದ್ಧಿಗೆ ₹597 ಕೋಟಿ ವೆಚ್ಚದಲ್ಲಿ 12 ಹೊಸ ಯೋಜನೆಗಳು ಆರಂಭ
ರಾಜ್ಯದ ಹಣಕಾಸು ಪರಿಸ್ಥಿತಿ ಸದೃಢವಾಗಿದ್ದು ರಾಜಸ್ವ ಸಂಗ್ರಹ ಹೆಚ್ಚಳವಾಗಿದೆ. ಜಿ ಎಸ್ ಟಿ ಸಂಗ್ರಹ ಶೇ 26ರಷ್ಟು ವೃದ್ಧಿಯಾಗಿದೆ. ಮುದ್ರಣ ಹಾಗೂ ನೋಂದಣಿ ಶುಲ್ಕ ಸಂಗ್ರಹವೂ ಹೆಚ್ಚಾಗಿದೆ. ತೆರಿಗೆ ಸಂಗ್ರಹ ಶೇ 20ರಷ್ಟು ಹೆಚ್ಚಾಗಿದೆ. 2023-24ನೇ ಸಾಲಿನಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರವು ರಾಜ್ಯದ ತೆರಿಗೆ ಪಾಲನ್ನು ಹೆಚ್ಚಿಸಿದೆ.