ರೈತ ಪ್ರತಿಭಟನೆ : ರಸ್ತೆಗೆ ಹಾಕಲಾಗಿದ್ದ ಮೊಳೆ ತೆರವುಗೊಳಿಸುತ್ತಿರುವ ಪೊಲೀಸರು

ಜಾಗತಿಕ ಮಟ್ಟದಲ್ಲಿ ರೈತರ ಹೋರಾಟ ಚರ್ಚೆಯಾಗುತ್ತದ್ದಂತೆ ಮುಜುಗರ ತಪ್ಪಿಸಿಕೊಳ್ಳಲು ಮುಂದಾದ ಕೇಂದ್ರ ಸರಕಾರ ಮತ್ತು ಪೊಲೀಸರು

ನವದೆಹಲಿ ಫೆ 4 : ಕೃಷಿಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಸುತ್ತ ಹಾಕಿರುವ ತಂತಿ ಬೇಲೆ, ತಡೆಗೋಡೆಗೆ ದೇಶ, ವಿದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು, ಗಮನಾರ್ಹ ಬೆಳವಣಿಗೆಯೊಂದರಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಗಾಜಿಪುರ ಗಡಿಯಲ್ಲಿ ಬ್ಯಾರಿಕೇಡ್‌ಗಳ ಬಳಿ ರಸ್ತೆಯಲ್ಲಿ ಸ್ಥಾಪಿಸಲಾದ ಮೊಳೆಗಳನ್ನು ಪೊಲೀಸರು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಈ ಕುರಿತು ಎಎನ್‌ಐ ಸುದ್ದಿ ಸಂಸ್ಥೆ ತಾಜಾ ವಿಡಿಯೋ ವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಿದೆ. ದೆಹಲಿ-ಉತ್ತರ ಪ್ರದೇಶದ ಗಾಜಿಪುರ ಸೇರಿದಂತೆ ದೆಹಲಿ-ಹರಿಯಾಣದ ಟಿಕ್ರಿ ಗಡಿ ಪ್ರದೇಶಗಳಲ್ಲಿ ಬ್ಯಾರಿಕೇಡ್ ಬಳಿ ರಸ್ತೆಗಳಲ್ಲಿ ಮೊಳೆಗಳನ್ನು ಲಗತ್ತಿಸಲಾಗಿತ್ತು.

ಇದನ್ನೂ ಓದಿ : ರೈತರ ಪ್ರತಿಭಟನೆ ಹತ್ತಿಕ್ಕಲು ಕಾಂಕ್ರೀಟ್ ಗೊಡೆ ನಿರ್ಮಿಸುತ್ತಿರುವ ಮೋದಿ ಸರ್ಕಾರ

ರೈತರ ಸಂಚಾರವನ್ನು ತಡೆಯುವ ನಿಟ್ಟಿನಲ್ಲಿ ಬೃಹತ್ ಬ್ಯಾರಿಕೇಡ್, ಮುಳ್ಳುಗಳ ತಂತಿ ಹಾಗೂ ಸಿಮೆಂಟ್ ಬ್ಯಾರಿಕೇಡ್‌ಗಳನ್ನು ರಸ್ತೆಗಳಲ್ಲಿ ಸ್ಥಾಪಿಸಲಾಗಿತ್ತು. ಪ್ರತಿಭಟನೆಯ ಸುತ್ತ ನೀರು, ವಿದ್ಯುತ್ ಸ್ಥಗಿತ ಮಾಡಲಾಗಿತ್ತು
ಸರ್ಕಾರದ ಈ ಕ್ರಮವುನ್ನು ದೇಶಾದ್ಯಂತ ಅನೇಕರು ವಿರೋಧಿಸಿದ್ದರು. ಹಾಲಿವುಡ್ ಹಾಗೂ ಪಾಪ್ ಗಾಯಕರು ಇದನ್ನು ಟ್ವೀಟ್ ಮಾಡಿದ್ದರಿಂದ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು.

ಈ ನಡುವೆ ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಸ್ಥಿತಿಗತಿಯನ್ನು ವಿಚಾರಿಸಲು ವಿರೋಧ ಪಕ್ಷದ ನಾಯಕರು ಪ್ರತಿಭಟನಾ ಜಾಗಕ್ಕೆ ಆಗಮಿಸಿದರು. ಅಧಿವೇಶನದಲ್ಲಿ ಪ್ರತಿಭಟನೆ ಮತ್ತು ರೈತ ಕಾಯ್ದೆಗಳ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *