ರೈತರ ಪ್ರತಿಭಟನೆ ಹತ್ತಿಕ್ಕಲು ಕಾಂಕ್ರೀಟ್ ಗೊಡೆ ನಿರ್ಮಿಸುತ್ತಿರುವ ಮೋದಿ ಸರ್ಕಾರ

ಮೋದಿ ಅಡೆತಡೆ ಬೇಧಿಸಿ ಬರುತ್ತಿದೆ ಜನಸಾಗರ

ನವದೆಹಲಿ ಫೆ 02 : ದೆಹಲಿಯ ಗಡಿಗಳಲ್ಲಿ ಕೃಷಿಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳದಂತೆ ಮಾಡಲು ದೆಹಲಿ ಪೊಲೀಸರು ರಸ್ಥೆಗಳಿಗೆ ತಡೆಬೇಲಿಗಳನ್ನು ಹಾಗೂ ಕಾಂಕ್ರೀಟ್ ಗೋಡೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.

ಈಗಾಗಲೆ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸುವುದು ಸೇರದಂತೆ ಇಂಟರ್ನೆಟ್ ಸೇವೆಯ ಸ್ಥಗಿತವನ್ನು ಮುಂದುವರೆಸಲಾಗಿದೆ. ನೀರಿನ ಟ್ಯಾಂಕರ್ ಗಳು ರೈತರ ಪ್ರತಿಭಟನಾ ಜಾಗದತ್ತ ಹೋಗದಂತೆ ನೋಡಿಕೊಳ್ಳುತ್ತಿವೆ. ಎರಡು ತಿಂಗಳಿನಿಂದ ಶಾಂತಿಯುತವಾಗಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಎಲ್ಲಾ ಪ್ರಯತ್ನವನ್ನು ಮೋದಿ ಸರಕಾರ ಮಾಡುತ್ತಿದೆ.

ಫೆಬ್ರವರಿ 1, ಸೋಮವಾರ ಸಾಮಾಜಿಕ ಮಾಧ್ಯಮದ ಪ್ರಮಖ ಕೊಂಡಿಯಾಗಿರುವ ಹಲವರ ಟ್ವಿಟರ್ ಖಾತೆಯನ್ನು ರದ್ದು ಮಾಡಲಾಗಿತ್ತು. ರಾಷ್ಟ್ರ ರಾಜಧಾನಿಯ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿ. ದೆಹಲಿ ಪೊಲೀಸರು ಈ ಮೂರು ಸ್ಥಳಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ರೈತರ ಹೋರಾಟವನ್ನು ಮಾಧ್ಯಮದಲ್ಲಿ ಭಿತ್ತರಿಸದಂತೆ ನೋಡಿಕೊಳ್ಳಲಾಗುತ್ತಿದೆ. ಪ್ರತಿಭಟನಾ ಜಾಗಕ್ಕೆ ಪತ್ರಕರ್ತರ ವಾಹನ ಹೋಗದಂತೆ, ಪತ್ರಕರ್ತರನ್ನು ತಡೆಯುತ್ತಿರುವ ಕ್ರಮವನ್ನು ವಿರೋಧಿಸಿ ಹಲವು ಪತ್ರಕರ್ತರು ಕೇಂದ್ರ ಮಾಧ್ಯಮ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

ಸಿಂಗ್ ಗಡಿಯಲ್ಲಿ, ಹರಿಯಾಣದೊಂದಿಗೆ ದೆಹಲಿಯನ್ನು ಸಂಪರ್ಕಿಸುವ ಮುಖ್ಯ ಹೆದ್ದಾರಿಯಲ್ಲಿ ಪೊಲೀಸರು ನಾಲ್ಕು ಲೇಯರ್ಡ್ ಬ್ಯಾರಿಕೇಡ್ ಅಳವಡಿಸಿದ್ದರಿಂದ ಜನರು ಮತ್ತು ಸರಬರಾಜುಗಳ ಸಂಚಾರಕ್ಕೆ ಅಡ್ಡಿಯಾಯಿಗಿದೆ. ಪ್ರತಿಭಟನಾ ಸ್ಥಳಕ್ಕೆ ಹೋಗುವ ರಸ್ತೆಗಳಲ್ಲಿ ಅನೇಕ ಕಂದಕಗಳನ್ನು ಅಗೆದು ಹಾಕಲಾಗಿದೆ, ಕಾಯ್ದೆಯಲ್ಲಿ ಅಪಾಯಕಾರಿ ಅಂಶಗಳು ಇಲ್ಲ ಏನ್ನುವುದಾದರೆ ಯಾಕೆ ಈ ರೀತಿ ಅಡೆತಡೆ ಮಾಡುತ್ತಿದ್ದೀರಿ, ಮೋದಿ, ಶಾ ಏಕೆ ಕಾಯ್ದೆ ರದ್ದು ಪಡಿಸುವ ಮಾತು ಆಡುತ್ತಿಲ್ಲ. ಈ ರೀತಿ ಸಾರ್ವಜನಿಕ ಜಾಗಗಳಲ್ಲಿ ತಡೆಗೋಡೆ ನಿರ್ಮಿಸುವುದು, ಅಗೆಯುವುದು ಕಾನೂನು ಬಾಹೀರವಲ್ಲವೆ? ನಮ್ಮ ರೈತರು ಕಲ್ಲುಗಳಿರುವ ಜಾಗವನ್ನು ಉಳಿಮೆಗಾಗಿ ಹದ ಮಾಡುತ್ತಿರುವಾಗಿ ಇನ್ನು ಮೋದಿ ನಿರ್ಮಿತ ಕಾಂಕ್ರೀಟ್ ಗೋಡೆಗಳನ್ನು ಛಿದ್ರಿಸುವುದು ಕ್ಷಣದ ಕೆಲಸ. ಈ ರೀತಿಯ ಅನಾಗರಿಕ, ಕ್ರೂರಿ ಕೆಲಸಗಳನ್ನು ಬಿಟ್ಟು ಅಧಿವೇಶನದಲ್ಲಿ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿ ಎಂದು AIKS ರಾಷ್ಟೀಯ ಕಾರ್ಯದರ್ಶಿ ಹನನ್ ಮುಲ್ಲಾ ತಿಳಿಸಿದ್ದಾರೆ.

ಹರಿದು ಬರುತ್ತಿದೆ ಜನ ಸಾಗರ : ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದಿಲ್ಲಿಯ ಗಡಿಭಾಗದಲ್ಲಿ ಮುಂದುವರಿದ ರೈತರ ಪ್ರತಿಭಟನೆ ಮಂಗಳವಾರಕ್ಕೆ 69 ನೇ ದಿನಕ್ಕೆ ಪ್ರವೇಶಿಸುತ್ತಿದೆ. ಕಳೆದ ಕೆಲ ದಿನಗಳಿಂದ ಮತ್ತಷ್ಟು ರೈತರು ಪ್ರತಿಭಟನೆಗೆ ಕೈಜೋಡಿಸಿರುವುದರಿಂದ ರೈತರ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ದಿಲ್ಲಿ ಹೊರವಲಯದ ಸಿಂಘು, ಘಾಜಿಪುರ ಮತ್ತು ಟಿಕ್ರಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಉತ್ತರಪ್ರದೇಶ, ಹರ್ಯಾಣ, ಪಂಜಾಬ್ ರಾಜ್ಯಗಳಿಂದ ಕಳೆದ ನಾಲ್ಕು ದಿನಗಳಿಂದ ಭಾರೀ ಸಂಖ್ಯೆಯಲ್ಲಿ ರೈತರು ಬಂದು ಸೇರಿದ್ದಾರೆ.

ಪ್ರತಿಭಟನೆ ಹತ್ತಿಕ್ಕಲು ಸರಕಾರ ನಿರ್ಮಿಸುತ್ತಿರುವ ತಡೆಗೋಡೆಯ ಇತರ ಚಿತ್ರಗಳು 

Donate Janashakthi Media

Leave a Reply

Your email address will not be published. Required fields are marked *