ಬೆಂಗಳೂರು, ಜ, 26 : ರೈತರು ಕೃಷಿ ಕಾಯ್ದೆಗಳ ವಾಪಾಸಾತಿಗಾಗಿ ನಡೆಸುತ್ತಿರುವ ಪರೇಡ್ ಪಥ ನಡೆಸುತ್ತಿದ್ದಾರೆ. ಈ ಹೋರಾಟವನ್ನು ಮುಖ್ಯಂತ್ರಿ ಯಡಿಯೂರಪ್ಪನವರು ಈ ಹೋರಾಟ ತೋರಿಕೆಗಾಗಿ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ರೈತರು ನಾವು ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಈ ಹೋರಾಟ ಮಾಡುತ್ತಿದ್ದಾರೆ. ಇವರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಸಿಎಂ ಹೆಳಿಕೆಗೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇವರು ಈ ಹೇಳಿಕೆಗೆ ಪ್ರಗತಿಪರ ಸಂಘಟನೆಗಳು, ರೈತ ಮುಖಂಡರು, ಯುವಜನ ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿದ್ದಾರೆ.
ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಈ ಹೆಳಿಕೆ ನೀಡಿರುವುದು ಸರಿಯಲ್ಲ. ದೇಶಕ್ಕೆ ಅನ್ನ ನೀಡುವ ರೈತನನ್ನು ಇದು ಅವಮಾನಿಸಿದಂತೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಯಡಿಯೂರಪ್ಪನವರು ಈಗೆ ಮಾತನಾಡಿರುವುದು ಸರಿಯಲ್ಲ. ತಾವು ಪ್ರಮಾಣವಚನ ಸ್ವೀಕರಿಸಿದ್ದು ಇದೇ ಅನ್ನ ನೀಡುವ ರೈತನ ಹೆಸರಲ್ಲಿ ಎಂಬುದು ನೆನಪಿರಲಿ ಎಂದು ರೈತ ಮುಖಂಡರು ಯಡಿಯೂರಪ್ಪನ ವಿರುದ್ಧ ಕಿಡಿ ಕಾರಿದ್ದಾರೆ.