ದೆಹಲಿ; ಫೇ.01 : ದಿಲ್ಲಿಯಲ್ಲಿ ರೈತರ ಹೋರಾಟಗಳ ವರದಿ ಮಾಡುತ್ತಿರುವ ಇಬ್ಬರು ಯುವ ಪತ್ರಕರ್ತರ ಮೇಲೆ ದಿಲ್ಲಿ ಪೋಲಿಸ್ ಕ್ರಮಗಳ ವಿರುದ್ಧ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದೆ.
ಫ್ರೀಲಾನ್ಸ್ ಪತ್ರಕರ್ತ ಮನದೀಪ್ ಪೂನಿಯ ಮತ್ತು ಆನ್ ಲೈನ್ ನ್ಯೂಸ್ ಇಂಡಿಯಾದ ಧರ್ಮೆಂದರ್ ಸಿಂಗ್ ಇವರಿಬ್ಬರನ್ನೂ ಸಿಂಘು ಗಡಿಯಿಂದ ಜನವರಿ 30ರ ಸಂಜೆ ದಿಲ್ಲಿ ಪೋಲೀಸ್ ಕರೆದೊಯ್ದರು. ಧರ್ಮೆಂದರ್ ಸಿಂಗ್ ರವರನ್ನು ನಂತರ ಬಿಡುಗಡೆ ಮಾಡಲಾಯಿತು, ಆದರೆ ಪೂನಿಯ ಅವರನ್ನು ದಿಲ್ಲಿಯ ನ್ಯಾಯಾಲಯವೊಂದು 14 ದಿನಗಳ ಪೋಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಹಿರಿಯ ಪತ್ರಕರ್ತರ ಮೇಲೆ ರಾಜದ್ರೋಹದ ಎಫ್.ಐ.ಆರ್.
ಮನ್‍ದೀಫ್ ಪೂನಿಯ ‘ಕಾರವಾನ್’ ಮತ್ತು ‘ಜನ್ ಪಥ್’ಗೆ ಬರೆಯುತ್ತಿರುವ ಯುವ ಪತ್ರಕರ್ತ. ಸಿಂಘು ನ ಪ್ರತಿಭಟನಾ ಜಾಗದಲ್ಲಿ ಒಬ್ಬ ಪೋಲೀಸ್ ಸ್ಟೇಷನ್ ಹೌಸ್ ಆಫೀಸರ್ ರೊಂದಿಗೆ ದುರ್ವರ್ತನೆ ನಡೆಸಿದ್ದಾರೆಂಬುದು ಆತನ ಮೇಲೆ ಆರೋಪ. ಸಾರ್ವಜನಿಕ ಕರ್ತವ್ಯದ ಮೇಲಿರುವ ಸಾರ್ವಜನಿಕ ಸೇವಕನಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುವುದನ್ನು ಶಿಕ್ಷಿಸುವ ನಾಲ್ಕು ಐಪಿಸಿ ಅಂಶಗಳ ಮೇಲೆ ಆತನನ್ನು ಕಸ್ಟಡಿಗೆ ಒಪ್ಪಿಸಲಾಗಿದೆ.
ಇದನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯ , ಇಂಡಿಯನ್ ವಿಮೆನ್ಸ್ ಪ್ರೆಸ್ ಕೋರ್ ಮತ್ತು ಪ್ರೆಸ್ ಅಸೋಸಿಯೇಷನ್ ಖಂಡಿಸಿವೆ. ಆತನನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಯಾವ ಪತ್ರಕರ್ತನನ್ನೂ ಯಾವುದೇ ಜಾಗದಲ್ಲಿ ತನ್ನ ಕರ್ತವ್ಯ ನೇರವೇರಿಸುತ್ತಿರುವಾಗ ಅಡ್ಡಿಪಡಿಸಬಾರದು ಎಂದು ಅವು ಆಗ್ರಹಿಸಿವೆ. ಮನ್ ದೀಪ್ ಆರಂಭ ದಿಂದಲೇ ರೈತರ ಚಳುವಳಿ ಬಗ್ಗೆ ವರದಿ ಮಾಡುತ್ತಿದ್ದಾರೆ. ಆತನ ಬಂಧನ ಪತ್ರಕರ್ತರು ಸ್ವತಂತ್ರವಾಗಿ ಮತ್ತು ಮುಕ್ತವಾಗಿ ಕೆಲಸ ಮಾಡದಂತೆ ತಡೆಯುವ ಸರಕಾರದ ದಮನ ಕ್ರಮದ ಭಾಗ ಎಂದು ಅವು ಹೇಳಿವೆ.
ದೆಹಲಿ ರೈತ ಹೋರಾಟ : ದೂರಿನಲ್ಲೂ ಪಿತೂರಿ ಮುಂದುವರೆಸಿದ ಪೊಲೀಸರು
ಪಟೇಲ್ ಚೌಕ್ ನಲ್ಲಿರುವ ಹೊಸ ಪೋಲೀಸ್ ಮುಖ್ಯ ಕಚೇರಿಯೆದುರು ಪತ್ರಕರ್ತರು ಜನವರಿ 31 ರಂದು ಮತಪತ್ರದರ್ಶನ ನಡೆಸಿದರು. “ಯಾವ ಸೆರೆಮನೆಯೂ ವಾಕ್ ಸ್ವಾತಂತ್ರ್ವವನ್ನು ಬಂಧಿಸಿಡುವಷ್ಟು ದೊಡ್ಡದಲ್ಲ” ಎಂದು ಹಲವು ಹಿರಿಯ ಪತ್ರಕರ್ತರು ಪೋಲಿಸರ ಈ ಕ್ರಮದ ವಿರುದ್ಧ ಟ್ವೀಟ್ ಮಾಡಿದ್ದಾರೆ.
‘ದಿ ವೈರ್’ನ ಸಂಪಾದಕರ ಮೇಲೂ ಎಫ್ ಐ ಆರ್
ಜನವರಿ 26ರಂದು ಕೆಂಪುಕೋಟೆಯ ಬಳಿ ಸಾವನ್ನಪ್ಪಿದ ಯುವ ರೈತ ನವ್ರೀತ್ ಸಿಂಗ್ ನ ಕುಟುಂಬದವರ ಆಪಾದನೆಯನ್ನು ವರದಿ ಮಾಡಿದ್ದಕ್ಕಾಗಿ ಪ್ರಮುಖ ವೆಬ್‍ಪತ್ರಿಕೆಯಾದ ‘ದಿ ವೈರ್’ನ ಸಂಸ್ಥಾಪಕ ಸಂಪಾದಕರು ಮತ್ತು ಹಿರಿಯ ಪತ್ರಕರ್ತರೂ ಆದ ಸಿದ್ದಾರ್ಥ ವರದರಾಜನ್ ಮೇಲೆ ಉತ್ತರಪ್ರದೇಶದ ರಾಂಪುರ ಜಿಲ್ಲೆಯ ಪೋಲೀಸ್ ಎಫ್ ಐ ಆರ್ ಹಾಕಿದ್ದಾರೆ ಎಂದು ವರದಿಯಾಗಿದೆ.
ತನ್ನ ಟ್ವಟರ್ ನಲ್ಲಿ ಅವರು “ಟ್ರಾಕ್ಟರ್ ಪರೇಡಿನಲ್ಲಿ ಕೊಲ್ಲಲ್ಪಟ್ಟ ಯುವಕನ ತಾತ ಹರ್ದಿಪ್ ಸಿಂಗ್ ಡಿಬ್ ಡಿಬ , ಒಂದು ಅಚ್ಚರಿಗೊಳಿಸುವ ಆರೋಪ ಮಾಡಿದ್ದಾರೆ- ಅಟೊಪ್ಸಿಯ ಭಾಗವಾಗಿರುವ ಒಬ್ಬ ಡಾಕ್ಟರ್ ಗಾಯಗಳು ಬುಲೆಟ್ ನಿಂದಾಗಿದೆ “ಆದರೆ ನನ್ನ ಕೈಗಳು ಕಟ್ಟಲ್ಪಟ್ಟಿವೆ” ಎಂದು ಅವರಿಗೆ ಹೇಳಿದ್ದಾರಂತೆ.” ಎಂದು ಬರೆದಿದ್ದರು.
“ವೈರತ್ವಪೂರ್ಣ ಕಾನೂನುಕ್ರಮ”ಕ್ಕೆ ಭಾರತೀಯ ದಂಡ ಸಂಹಿತೆಯಲ್ಲಿರುವ ಅಂಶ ಏನು ಎಂದು ಸಿದ್ದಾರ್ಥ ವರದರಾಜನ್ ಕೇಳಿದ್ದಾರೆ. ಕೊಲ್ಲಲ್ಪಟ್ಟ ಯುವಕನ ತಾತ ಹೇಳಿದ್ದನ್ನು ಮಾತ್ರವಲ್ಲ, ಇದನ್ನು ನಿರಾಕರಿಸಿರುವ ಪೋಲೀಸ್ ಮತ್ತು ಡಾಕ್ಟರ್ ಹೇಳಿಗಳನ್ನೂ ‘ದಿ ವೈರ್’ ವರದಿ ಪ್ರಕಟಿಸಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.