ರೈತಪರ ಗೀತೆ
ರೈತರಣ್ಣ ರೈತರು
ಇವರು ನಮ್ಮ ರೈತರು
ಕನಸ ಕಂಡು ಹಸಿವನುಂಡು
ಅನ್ನದಾತರಾದರು..!
ಊಳಿಗದ ಉಸಿರಲ್ಲಿ
ಹಸಿರನ್ನು ಬೆಳೆದವರು
ಭೂಮಿಯ ಬೆವರಲ್ಲಿ
ಬದುಕನ್ನು ಬರೆದವರು..!
ಮಣ್ಣಿನ ಕಣ್ಣಲ್ಲಿ
ಮುಗಿಲನ್ನು ಕಡೆದವರು
ಕಡೆಯುತ್ತ ದುಡಿಯುತ್ತ
ಕೆಂಡದುಂಡೆ ಕಂಡವರು..!
ಕತ್ತಲೆಯ ಬಯಲಲ್ಲಿ
ಬೆಳಕನ್ನು ಹುಡುಕಿದರು
ಬೆತ್ತಲೆಯ ಭ್ರಷ್ಟತೆಗೆ
ಕೂತಲ್ಲೆ ಕನಲಿದರು
ಕೆಂಪು ದೇಹದ ಬೆವರು
ಎದ್ದು ನಿಂತರೆ ಇಲ್ಲಿ
ಕುರ್ಚಿಗಂಟಿದ ಪೊಗರು
ಕುಸಿದು ಹೋಗುವುದಲ್ಲಿ..!!
– ಬರಗೂರು ರಾಮಚಂದ್ರಪ್ಪ
ರೈತರ ಕಷ್ಟ ಕಾರ್ಪಣ್ಯ ಪ್ರತಿ ಸಾಲಿನಲ್ಲೂ ಸಶಕ್ತವಾಗಿ ಹೊರಹೊಮ್ಮಿದೆ ಸರ್…