ಕಲಬುರಗಿ: ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ರೈತ ಕಲ್ಲಪ್ಪ ಮೇತ್ರೆಯವರಿಗೆ ಪರಿಹಾರ ನೀಡುವಲ್ಲಿ ವಿಳಂಬವಾದ ಕಾರಣಕ್ಕೆ ಜಿಲ್ಲಾಧಿಕಾರಿ ಯಶವಂತ್ ಗುರುಕರ್‌ರವರ ಸರ್ಕಾರಿ ಕಾರು ಜಪ್ತಿಗೆ ಕಲಬುರಗಿಯ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆದೇಶಸಿದೆ.
2008ರಲ್ಲಿ ರೈತ ಕಲ್ಲಪ್ಪ ಮೇತ್ರೆಯ 33 ಗುಂಟೆ ಜಮೀನು ಭೀಮಾ ಏತ ನಿರಾವರಿ ಯೋಜನೆಯಲ್ಲಿ ಮುಳುಗಡೆಯಾಗಿತ್ತು. ಮುಳುಗಡೆಯಾದ ಜಮೀನಿಗೆ 7.39.632 ಪರಿಹಾರ ನೀಡವಂತೆ ಕೋರ್ಟ್ ಆದೇಶ ಮಾಡಿತ್ತು. ಆದರೆ ಜಿಲ್ಲಾಡಳಿತ ಪರಿಹಾರ ನೀಡದೆ ರೈತನ ಕುಟುಂಬದ ಜೊತೆ ಚಲ್ಲಾಟವಾಟುತ್ತಿತ್ತು.
ಕೋರ್ಟ್ ಆದೇಶ ಆದರೂ ಪರಿಹಾರ ನೀಡದ ಹಿನ್ನೆಲೆಯಲ್ಲಿ ಮತ್ತೆ ರೈತ ಕೋರ್ಟ್ ಮೊರೆ ಹೋಗಿದ್ದರು, ಇದೀಗ ಕೋರ್ಟ್ ಕಾರು ಜಪ್ತಿಗೆ ಆದೇಶ ಮಾಡಿದೆ. ಕೋರ್ಟ್ ಆದೇಶದ ಹಿನ್ನೆಲೆ ಕಾರು ಜಪ್ತಿಗೆ ಕೋರ್ಟ್ ಸಿಬ್ಬಂದಿ ಮತ್ತು ವಕೀಲರು ಆಗಮಿಸಿದ್ದಾರೆ.
ಕೂಡಲೇ ಎಚ್ಚೆತ್ತ ಭೂಸ್ವಾಧೀನ ಇಲಾಖೆ ಅಧಿಕಾರಿಗಳು ವಕೀಲರೊಂದಿಗೆ ಮತ್ತು ಕಲ್ಲಪ್ಪ ಜೊತೆ ಸಂಧಾನ ನಡೆಸಿ ಚೆಕ್ ಕೋರ್ಟ್ ನೀಡುವುದಾಗಿ ಹೇಳಿದ್ದಾರೆ. ಕಲ್ಲಪ್ಪ ಇದಕ್ಕೆ ಇಪ್ಪಿಗೆ ಸೂಚಿಸಿದ ಬಳಿಕ ಕಾರು ಜಪ್ತಿಯಾಗದೇ ಹಾಗೆ ಉಳಿದಿದೆ. ಇನ್ನಾದರೂ ಜಿಲ್ಲಾಡಳಿತ ಆದಷ್ಟು ಬೇಗ ರೈತನಿಗೆ ಪರಿಹಾರವನ್ನು ಒದಗಿಸುವ ಕೆಲಸಕ್ಕೆ ಮುಂದಾಗಬೇಕಿದೆ.