ರೈತ ಕಿಸಾನ್ ಮೋರ್ಚಾ ಹೋರಾಟಕ್ಕೆ ಕೂಲಿಕಾರ ಸಂಘಟನೆ ಬೆಂಬಲ

ಬೆಂಗಳೂರು: ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಮೇ 26ರಂದು ನಡೆಯಲಿರುವ ಕರಾಳ ದಿನಾಚರಣೆ ಅಂಗವಾಗಿ ದೇಶವ್ಯಾಪಿ ಹಮ್ಮಿಕೊಂಡಿರುವ ಪ್ರತಿಭಟನಾ ಕರೆಗೆ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯೂಯು), ಕರ್ನಾಟಕ ರಾಜ್ಯ ಸಮಿತಿಯು ಬೆಂಬಲವನ್ನು ಸೂಚಿಸಿದೆ.

2020ರ ನವೆಂಬರ್ 26 ರಂದ ಲಕ್ಷಾಂತರ ರೈತರು ದೆಹಲಿಯ ದ್ವಾರವನ್ನು ತಲುಪಿ ಕೇಂದ್ರದ ಬಿಜೆಪಿ ಸರಕಾರದ ರೈತ ವಿರೋಧಿ ಮೂರು ಕಾನೂನುಗಳನ್ನು ಮತ್ತು ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಚಿತಪಡಿಸುವ ಕಾನೂನನ್ನು ಜಾರಿಗೆ ತರಬೇಕೆಂದು ಅಂದಿನಿಂದ ನಿರಂತರ ಧರಣಿ ಕೈಗೊಂಡಿದ್ದಾರೆ.

ಇದನ್ನು ಓದಿ: ಮೇ 26 ಕ್ಕೆ ಕರಾಳ ದಿನ : ದೆಹಲಿಯತ್ತ ಹೊರಟ ಸಾವಿರಾರು ರೈತರು

ಅದೇ ದಿನ ಕೇಂದ್ರ ಕಾರ್ಮಿಕ ಸಂಘಟನೆಗಳು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ವಾಪಸ್ ಪಡೆಯಬೇಕೆಂದೂ ಮತ್ತು ಖಾಸಗಿಕರಣದ ಧೋರಣೆಯನ್ನು ಕೈ ಬಿಡಬೇಕೆಂದು ದೇಶ್ಯವ್ಯಾಪಿ ಒತ್ತಾಯ ವ್ಯಕ್ತಗೊಂಡಿದ್ದವು.

ಎಐಎಡಬ್ಲ್ಯೂಯು ರಾಜ್ಯ ಅಧ್ಯಕ್ಷರಾದ ನಿತ್ಯಾನಂದಸ್ವಾಮಿ ಅವರು ಮೇ 26, 2021 ಕ್ಕೆ ಆ ಮಹಾನ್ ಹೋರಾಟಕ್ಕೆ 6 ತಿಂಗಳು ಆಗಲಿದೆ. ಅಪಾರ ತ್ಯಾಗ, ಬಲಿದಾನವನ್ನು ರೈತರು-ಕೃಷಿ ಕಾರ್ಮಿಕರು ಮಾಡಿದ್ದು. 400ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ಭಾಗವಹಿಸಿ ನಿಧನರಾಗಿದ್ದಾರೆ. ಕೇಂದ್ರ ಸರ್ಕಾರ ರೈತರ ಹೋರಾಟವನ್ನು ದಮನ ಮಾಡಲು ಪ್ರಯತ್ನಿಸಿದೇ ಹೊರತು ರೈತರ ಬೇಡಿಕೆಗಳನ್ನು ಇದುವರೆಗೂ ಈಡೇರಿಸಿಲ್ಲ. ರೈತರ ಈ ಚಾರಿತ್ರಿಕಾ ಹೋರಾಟ ಮುಂದುವರೆದಿದೆ ಎಂದು ತಿಳಿಸಿದರು.

ಇದನ್ನು ಓದಿ: ಮೇ 26ರ ರೈತರ ಪ್ರತಿಭಟನೆಗೆ 12 ಪ್ರತಿಪಕ್ಷಗಳ ಬೆಂಬಲ

ಎಐಎಡಬ್ಲ್ಯೂಯು ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಇದೇ ಮೇ 26, 2021ಕ್ಕೆ ಪ್ರಧಾನಿ ನರೇಂದ್ರಮೋದಿ ಯವರು ತಮ್ಮ ಅಧಿಕಾರದ 7ನೇ ವರ್ಷವನ್ನು ಪೂರ್ಣಗೊಳಿಸಲಿದ್ದಾರೆ. ಈ 7 ವರ್ಷದ ಅವಧಿಯ ದಿನಗಳು ರೈತರ, ಕಾರ್ಮಿಕರ, ಕೃಷಿ ಕೂಲಿಕಾರರ ಕರಾಳ ದಿನಗಳಾಗಿವೆ ಎಂದು ತಿಳಿಸಿದರು.

ಸಂಘದ ಪ್ರಮುಖ ಬೇಡಿಕೆಗಳು

  1. ಮೂರು ರೈತರ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು.
  2. 2021ರ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ವಾಪಸ್ ಪಡೆಯಬೇಕು.
  3. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಚಿತಪಡಿಸುವ ಕಾನೂನನ್ನು ಜಾರಿಗೆ ತರಬೇಕು.
  4. ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ವಾಪಸ್ ಪಡೆಯಬೇಕು ಮತ್ತು ಕೂಡಲೇ ಭಾರತ ಕಾರ್ಮಿಕ ಸಮ್ಮೇಳನವನ್ನು ಕರೆಯಬೇಕು.
  5. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ವರ್ಷಕ್ಕೆ 100 ದಿನಗಳ ಬದಲಾಗಿ 200 ದಿನಗಳ ಕೆಲಸವನ್ನು ಒದಗಿಸಬೇಕು. ದಿನಗೂಲಿಯನ್ನು ರೂ. 600/-ಕ್ಕೆ ಏರಿಸಬೇಕು. “ಮನ್‌ರೇಗಾ” ಸೌಲಭ್ಯವನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು.
  6. ಕೊರೊನಾ ಲಸಿಕೆಗಳನ್ನು ಉಚಿತವಾಗಿ ಮತ್ತು ಸಾರ್ವತ್ರಿಕವಾಗಿ ವಿತರಣೆ ಮಾಡಬೇಕು.
  7. ಸಮರ್ಪಕ ಸೌಲಭ್ಯಗಳೊಂದಿಗೆ ಕ್ವಾರೆಂಟೇನ್ ಕೇಂದ್ರಗಳನ್ನು ತೆರೆಯಬೇಕು.
  8. ಪರೀಕ್ಷೆ ಮತ್ತು ಔಷಧಿಗಳ ವರದಿಗಳ ಪ್ರಕಾರ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮತ್ತು ಔಷಧಿಗಳು ಉಚಿತವಾಗಿ ಎಲ್ಲರಿಗೂ ದೊರೆಯುವಂತಾಗಬೇಕು.
  9. 10 ಕೆ.ಜಿ. ಆಹಾರ ಧಾನ್ಯಗಳನ್ನು (ಅಕ್ಕಿ, ಗೋದಿ) ಇತರೆ ದಿನಸಿಗಳಾದ ಅಡುಗೆ ಎಣ್ಣೆ, ದ್ವಿದಳ ಧಾನ್ಯಗಳು, ಸಕ್ಕರೆ ಇತ್ಯಾದಿ ಪ್ರತಿಯೊಂದು ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ಮುಂದಿನ 6 ತಿಂಗಳ ಕಾಲದವರೆಗೆ ಪೂರೈಸಬೇಕು.
  10. ಆದಾಯ ತೆರಿಗೆ ವ್ಯಾಪ್ತಿಯ ಹೊರಗಿನ ಎಲ್ಲಾ ಕುಟುಂಬಗಳಿಗೆ ತಿಂಗಳಿಗೆ ರೂ. 10,000/- ದರದಲ್ಲಿ ಹಣಕಾಸು ಪ್ಯಾಕೇಜ್ ನೀಡಬೇಕು. ಪರಿಹಾರದ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.
  11. ವಲಸೆ ಕಾರ್ಮಿಕರ ಪ್ರಯಾಣಕ್ಕೆ ಸರಿಯಾದ ಹಾಗೂ ಉಚಿತ ಸಾರಿಗೆ ವ್ಯವಸ್ಥೆಯನ್ನು ಒದಗಿಸಬೇಕು.

ಸಂಘಟನೆಯು ಸರಕಾರ ನಮ್ಮ ಈ ಬೇಡಿಕೆಗಳಿಗಾಗಿ ಒತ್ತಾಯಿಸಿ ಅಂದು ಕರಾಳ ದಿನ ಆಚರಿಸುತ್ತಿವೆ. ರಾಜ್ಯದ್ಯಂತ ಕೂಲಿಕಾರರು ಒಳಗೊಂಡು ಎಲ್ಲಾ ಜನವಿಭಾಗದವರು ಬೇಡಿಕೆಗಳ ಈಡೇರಿಕೆಗಾಗಿ ತಮ್ಮ ತಮ್ಮ ಮನೆಗಳ ಮುಂಭಾಗ ಕಪ್ಪು ಬಾವುಟ ಹಾರಿಸಿ ಪ್ರತಿಭಟನೆ ಮಾಡಲಿದ್ದಾರೆ ಎಂದು ಎಐಎಡಬ್ಲ್ಯೂಯು ಸಂಘಟನೆಯು ಪ್ರಕಟಣೆಯಲ್ಲಿ  ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *