ಬೆಂಗಳೂರು ಜ 25 : ರೈತರು ಕಾರ್ಮಿಕರಿಗಾಗಿ ನಾವು ನೀವು ಎನ್ನುವ ಘೋಷಣೆಯೊಂದಿಗೆ ಜನವರಿ 17 ರಿಂದ 24 ವರೆಗೆ ನಡೆದ ಜಾಥಾದ ಮುಂದುವರೆದ ಭಾಗವಾಗಿ ರೈತ-ಕಾರ್ಮಿಕರ ಹೋರಾಟ ಬೆಂಬಲಿಸಿ, ಆಹಾರ-ಉದ್ಯೋಗದ ಉಳಿವಿಗಾಗಿ ಹಾಗೂ ಸಂವಿಧಾನ ಸಂರಕ್ಷಣೆಗಾಗಿ ಜನವರಿ 26ರಂದು ಬೆಳಿಗ್ಗೆ 10:30 ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರೈತ ಕಾರ್ಮಿಕರ ಗಣರಾಜ್ಯೋತ್ಸವ ನಡೆಯಲಿದೆ ಎಂದು ಸಂವಿಧಾನ ರಕ್ಷಣೆಗಾಗಿ ನಾವು ನೀವು ಸಮಿತಿ ತಿಳಿಸಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ|| ರಾಜೇಂದ್ರ ಜೆನ್ನಿ ಹಾಗೂ ಧ್ವಜಾರೋಹಣವನ್ನ ಹಿರಿಯ ಕಾರ್ಮಿಕ ಮುಖಂಡರಾದ ಹೆಚ್.ಎನ್.ಗೋಪಾಲ್ ಗೌಡ ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕಾರ್ಮಿಕ ಸಂಹಿತೆಗಳು ಮತ್ತು ಕಾರ್ಮಿಕರ ಹೋರಾಟದ ಕುರಿತು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಕೃಷಿ ಕಾಯ್ದೆಗಳು – ರೈತರ ಹೋರಾಟದ ಕುರಿತು KPRS ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ್, ಕೋವಿಡ್-19 ಲಾಕ್ಡೌನ್ ಮತ್ತು ಮಹಿಳೆಯರ ಕುರಿತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ, ನೂತನ ಶಿಕ್ಷಣ ನೀತಿಯ ಅಪಾಯಗಳು ಕುರಿತು SFI ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, ದಲಿತ ಹಕ್ಕುಗಳು ಮತ್ತು ಪ್ರಸಕ್ತ ಸವಾಲುಗಳ ಕುರಿತು DHS ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಅರಳಹಳ್ಳಿ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕೆ.ಎಸ್.ಲಕ್ಷ್ಮೀ, ಗಗನ್ ಚಿರಾಯು ಹಾಗೂ ಎಸ್.ಎಫ್.ಐ ತಂಡದವರು ಕ್ರಾಂತಿಗೀತೆಗಳನ್ನ ಹಾಡಲಿದ್ದಾರೆ. ಜೊತೆಗೆ ಸಮುದಾಯ ಬೆಂಗಳೂರು ತಂಡದ “ಒಳಿತು ಮಾಡು ಮನುಸ”ನಾಟಕ ಪ್ರದರ್ಶನ ನಡೆಯಲಿದೆ. ನಂತರ ಮಧ್ಯಾಹ್ನ ನಡೆಯಲಿರುವ ಸಂಯುಕ್ತ ಹೋರಾಟ ಸಮಿತಿ ನೇತೃತ್ವದ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲಿದ್ದಾರೆ ಎಂದು ಸಿಪಿಐಎಂ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್ ಉಮೇಶ್ ಮತ್ತು ಉತ್ತರ ಜಿಲ್ಲಾ ಕಾಯ೯ದಶಿ೯ ಎನ್. ಪ್ರತಾಪ್ ಸಿಂಹ ಹಾಗು ಗ್ರಾಮಾಂತರ ಜಿಲ್ಲಾ ಕಾಯ೯ದಶಿ೯ ಸಿ. ಚಂದ್ರು ತೇಜಸ್ವಿ ತಿಳಿಸಿದ್ದಾರೆ.