- ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ ರಾಷ್ಟ್ರವ್ಯಾಪಿ ಐಕ್ಯ ಹೋರಾಟ
- ಪ್ರಮುಖ ಬೇಡಿಕೆಗಳ ಈಡೇರಿಸಿಲು ಸರ್ಕಾರಕ್ಕೆ ಒತ್ತಾಯ
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಜನಸಾಮಾನ್ಯರ ಮೇಲೆ ಕೊವಿಡ್-19 ಮತ್ತು ಲಾಕ್ ಡೌನ್ ಸಂಕಷ್ಟ ಪರಿಸ್ಥಿತಿಯ ಈ ಕಾಲಘಟ್ಟದಲ್ಲಿ ರೈತ, ಕಾರ್ಮಿಕ, ಮಹಿಳಾ ಕೂಲಿಕಾರರ ಬದುಕನ್ನು ನಾಶಮಾಡುವಂತಹ ಕಾಯ್ದೆಗಳನ್ನು ಜಾರಿಮಾಡುತ್ತಿರುವುದನ್ನು ವಿರೋಧಿ CITU, AIKS, AIAWU ಸಂಘಟನೆಗಳು ಕರೆನೀಡಿದ್ದ ದೇಶವ್ಯಾಪಿ ಹೋರಾಟಕ್ಕೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುತೇಕ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಐಕ್ಯ ಪ್ರತಿಭಟನೆ ನಡೆದಿದೆ.
ಈ ದೇಶವನ್ನು ಕಟ್ಟಿದ ರೈತ, ಕಾರ್ಮಿಕ, ಜನಸಾಮಾನ್ಯ ಹಾಗೂ ಮಹಿಳಾ ಕೂಲಿಕಾರರ ಬದುಕಿಗೆ, ಅವರ ಕುಟುಂಬಕ್ಕೆ ಭದ್ರತೆ ಇಲ್ಲದೆ ಕಳೆದ ಮೂರು ದಶಕಗಳಿಂದ ಜಾರಿಯಲ್ಲಿರುವ ಉದಾರೀಕರಣ, ಜಾಗತೀಕರಣ ಹಾಗೂ ಖಾಸಗೀಕರಣದ ನೀತಿಗಳಿಂದಾಗಿ ಜನಸಾಮಾನ್ಯರು ಬಲಿಪಶುಗಳಾಗಿದ್ದಾರೆ. ದೇಶದ ಶ್ರಮ ಜೀವಿಗಳಾದ ನಾವು ಇಂತಹ ದಾಳಿಗಳನ್ನು ಒಂದು ವರ್ಗವಾಗಿ ಐಕ್ಯತೆಯಿಂದ ಎದುರಿಸಬೇಕೆಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ದೇಶವ್ಯಾಪಿ ನಡೆದ ಈ ಪ್ರತಿಭಟನೆಯಲ್ಲಿ ಅವರು ಪ್ರಮುಖ ಬೇಡಿಕೆಗಳಾದ ಪ್ರತಿಯೊಬ್ಬರನ್ನು ಉಚಿತವಾಗಿ ಕೊವಿಡ್ ಪರೀಕ್ಷೆಗೆ ಒಳಪಡಿಸಿ ಉಚಿತ ಔಷಧೋಪಚಾರ ಒದಗಿಸಬೇಕು, ಪ್ರತಿಯೊಬ್ಬರಿಗೂ ಮುಂದಿನ 6 ತಿಂಗಳವರೆಗೆ ಮಾಸಿಕ ರೂ 7500 ಕೊವಿಡ್ ಪರಿಹಾರ ನೀಡಬೇಕು, ಕುಟುಂಬದ ಪ್ರತಿ ಸದಸ್ಯನಿಗೂ ಮಾಸಿ 10 ಕೆ.ಜಿ. ಉಚಿತ ಆಹಾರ ಧಾನ್ಯ ವಿತರಿಸಬೇಕು, ಉದ್ಯೋಗ ಖಾತ್ರಿ ವೇತನವನ್ನು ಪ್ರತಿದಿನಕ್ಕೆ ಕನಿಷ್ಟ ರೂ 600 ಕ್ಕೆ ಹೆಚ್ಚಿಸಬೇಕು, ಕನಿಷ್ಠ 200 ದಿನ ಕೆಲಸ ನೀಡಬೇಕು ಹಾಗೂ ನಗರ ಪ್ರದೇಶಕ್ಕೂ ವಿಸ್ತರಿಸಬೇಕು, ಶಿಕ್ಷಣ-ಆರೋಗ್ಯ-ರೈಲು-ರಸ್ತೆ-ವಿದ್ಯುತ್-ದೂರಸಂಪರ್ಕ-ವಿಮಾ-ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆ ತಡೆಯಬೇಕು, ಭೂ ಕಾಯ್ದೆ APMC ಕಾಯ್ದೆ ತಿದ್ದುಪಡಿ ಕಾರ್ಮಿಕ ಕಾನೂನು ತಿದ್ದುಪಡಿ ಹಾಗೂ ಅಗತ್ಯ ಸೇವಾ ಸುಗ್ರೀವಾಜ್ಙೆಗಳನ್ನು ರದ್ದುಪಡಿಸಬೇಕು, ಮಹಿಳಾ ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್/ ಸಹಕಾರ ಸಂಘಗಳು ಮೈಕ್ರೋ ಫೈನಾನ್ಸ್ ಮತ್ತಿತ್ತರ ಕಿರುಸಾಲ ಸಂಸ್ಥೆಗಳು ನೀಡಿರುವ ಸಾಲವನ್ನು ಬಡ್ಡಿ ಸಮೇತ ಮನ್ನಾ ಮಾಡಬೇಕು ಹಾಗೂ ಹೊಸ ಸಾಲ ನೀಡಬೇಕು ಎಂದು ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ದೇಶವ್ಯಾಪಿ ಐಕ್ಯ ಪ್ರತಿಭಟನೆ ಕರೆಯ ಮೇರೆಗೆ ಹಲವು ಜಿಲ್ಲೆಗಳ ನಡೆದ ಹೋರಾಟಗಳು