ಬೆಂಗಳೂರು: ನರೇಂದ್ರ ಮೋದಿ ತಮ್ಮ ಕಾರ್ಪೋರೇಟ್ ಸ್ನೇಹಿತರನ್ನು ಉದ್ದಾರ ಮಾಡಲು ಹಾಗೂ ತಮ್ಮ ಧಣಿಗಳ ಆದೇಶ ಪಾಲಿಸುವ ನಿಟ್ಟಿನಲ್ಲಿ ರೈತ ವಿರೋಧಿಯಾದ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಮಾಡಿದ ಹೋರಾಟಕ್ಕೆ ಜಯ ಸಿಕ್ಕಿದೆ. ಕೇಂದ್ರ ಸರ್ಕಾರ ಈಗ ಕೃಷಿ ಕಾಯ್ದೆ ವಾಪಸ್ ಪಡೆದಿದೆ. ಇದು ಪ್ರಜಾಪ್ರಭುತ್ವ ಗೆಲುವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ಇದನ್ನು ಓದಿ: ರೈತ ಹೋರಾಟಕ್ಕೆ ಸಂದ ಭಾರೀ ಜಯ: ಸಂಯುಕ್ತ ಹೋರಾಟ ಕರ್ನಾಟಕ ಹರ್ಷ
ನರೇಂದ್ರ ಮೋದಿ ಅವರು ಸರ್ವಾಧಿಕಾರಿ ಧೋರಣೆಯಿಂದ ಜಾರಿಗೆ ತಂದ ಕಾಯ್ದೆಗಳ ವಿರುದ್ಧ ಹೋರಾಟ ಮಾಡಿ ಸುಮಾರು 700 ಕ್ಕಿಂತ ಹೆಚ್ಚು ಮಂದಿ ರೈತರು ಹುತಾತ್ಮರಾದರು. ಏಕಚಕ್ರಾಧಿಪತಿ ಎಂಬಂತೆ ಪ್ರಧಾನಿ ಮೋದಿ ತಿಳಿದುಕೊಂಡು ಅನೇಕ ಕಾನೂನೂ ಜಾರಿಗೆ ತಂದ್ದರು. ತಾವು ಮಾಡಿದ್ದೇ ಸರಿಯೆಂಬ ದಾಟಿಯಲ್ಲಿದ್ದಾರೆ. ರೈತರ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಇವರು ಚುನಾವಣೆ ದೃಷ್ಟಿಯಿಂದ ಕಾಯ್ದೆ ಹಿಂಪಡೆದಿದ್ದಾರೆ. ಚುನಾವಣೆಯಲ್ಲಿ ಸೋತಿದ್ದಕ್ಕೆ ತೈಲ ಬೆಲೆ ಕಡಿಮೆ ಮಾಡಿದ್ದರು. ತೈಲ ಬೆಲೆಯನ್ನು ಇನ್ನೂ ಕಡಿಮೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸಲೀಂ ಅಹ್ಮದ್ ಒತ್ತಾಯ ಮಾಡಿದರು.
ಹುತಾತ್ಮರಾದ ರೈತ ಕುಟುಂಬಗಳಿಗೆ ತಲಾ `25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಸಲೀಂ ಅಹ್ಮದ್ ರೈತ ವಿರೋಧಿ ಕಾಯ್ದೆ ಹಿಂಪಡೆದ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಕಿಸಾನ್ ವಿಜಯ ದಿವಸ್ ಅನ್ನು ರಾಜ್ಯದಾದ್ಯಂತ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.