– ರಾಜಾರಾಂ ತಲ್ಲೂರು
ನನ್ನ ಆರನೇ ಸೆನ್ಸ್ ಈಗಾಗಲೇ ಹೇಳಿರುವಂತೆ ಸಂಸದೆ ಮೊಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟಿಸುವುದು ಬಹುತೇಕ ಖಚಿತ. ಹಾಗಲ್ಲದಿದ್ದರೆ ಕಥೆ ಊಹಿಸಿರುವಂತೆ ಸಾಗದು. ಮಳೆ
ಆದರೆ, ಈ ಗುರಿ ತಲುಪುವ ಅತ್ಯುತ್ಸಾಹದಲ್ಲಿ ಸಂಸತ್ತಿನ ನಿಯಮ, ಘನತೆಗಳೆಲ್ಲ ಗಾಳಿಯಲ್ಲಿ ತೂರಿಹೋಗುವಂತೆ ಕಾಣಿಸುತ್ತಿದೆ. ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಿರುವ ಸಂಸದರ ಸದನ ಸಮಿತಿಯೊಂದರ 500 ಪುಟಗಳ ವರದಿ ಸಂಸತ್ತಿನ ಅಧ್ಯಕ್ಷ ಪೀಠಕ್ಕೆ ತಲುಪುವ ಮೊದಲು ಪತ್ರಿಕೆಗಳ ಕಚೇರಿ ತಲುಪಿರುವುದು ಹೊರನೋಟಕ್ಕೇ “ಸದನದ ಹಕ್ಕುಚ್ಯುತಿ” ಸದನದ ಮರ್ಯಾದೆಯ ಬಗ್ಗೆ ಎಚ್ಚರ ಇರುವ ಯಾರೇ ಸಂಸದರು ಇದನ್ನು ಸದನ ಸೇರಿದಾಗ ಎತ್ತದೇ ಇರಲಾರರು.
ಇದನ್ನೂ ಓದಿ:‘ವಾರದಲ್ಲಿ 70 ಗಂಟೆ ಕೆಲಸ’ದ ಸಲಹೆ: ನಿಜವಾಗಿಯೂ ಯುವಜನರ ಹಿತದೃಷ್ಟಿಯಿಂದಲೋ ಅಥವಾ ಕಾರ್ಪೊರೇಟ್‍ಗಳ ಗರಿಷ್ಟ ಲಾಭಕ್ಕೋ?
ಸಮಿತಿಗಾಗಲೀ, ಸ್ಪೀಕರ್‌ಗಾಗಲೀ ಇದನ್ನು ಸಮರ್ಥಿಸಿಕೊಳ್ಳುವುದು ಕಷ್ಟ ಇದೆ. ಯಾಕೆಂದರೆ ಆ ಮಾಧ್ಯಮ “ತನಗೆ ದೊರೆತಿರುವ” ಸದನ ಸಮಿತಿ ವರದಿಯನ್ನು ಉಲ್ಲೇಖಿಸಿ ತನ್ನ ವರದಿ ಮಾಡಿದೆ! ಮಳೆ
ಈಗ ಸ್ಪೀಕರ್ ಒಂದೋ ಸದನದ ಹಕ್ಕುಚ್ಯುತಿಯನ್ನು ನಿಭಾಯಿಸಬೇಕು, ಇಲ್ಲವೇ ಸುಳ್ಳು ವರದಿ ಮಾಡಿದ್ದಕ್ಕಾಗಿ ಸಂಬಂಧಿತ ಪತ್ರಿಕೆಯವರನ್ನು ಸದನದ ಕಟಕಟೆಗೆ ಕರೆಸಿ ಛೀಮಾರಿ ಹಾಕಬೇಕು.
ಎಲ್ಲಕ್ಕಿಂತ ಗಮನಾರ್ಹ ಎಂದರೆ, ಈ ಮಾಧ್ಯಮ ಬಳಗದ ಮಾಲಕರು, ಯಾರನ್ನು ಮೊಹುವಾ ಮೊಯಿತ್ರಾ ಸತತವಾಗಿ ಸದನದ ಮೂಲಕ ಪ್ರಶ್ನಿಸುತ್ತಾ ಬಂದಿದ್ದಾರೋ “ಅವರೇ” ಎಂಬಲ್ಲಿಗೆ “ಆನಿಯಂತಹಾ” ವೃತ್ತ ಪೂರ್ಣಗೊಳ್ಳುತ್ತದೆ.
ಮೊಹುವಾ ಅವರು ಇಂದು ಸ್ಪೀಕರ್‌ಗೆ ಬರೆದಿರುವ ಈ ಪತ್ರ, ಗೋರ್ಕಲ್ಲ ಮೇಲೆ ಮಳೆ ಎಂಬುದು ನಿಜ; ಆದರೆ ನಮ್ಮ ಕಾಲದ ಸಂಸದೀಯ ರಿವಾಜುಗಳು ತಲುಪಿರುವ ಹೀನಾಯ ಸ್ಥಿತಿಗೆ ಒಂದು ದಾಖಲೆ ಕೂಡ ಆಗಿ ಅದು ಉಳಿಯಲಿದೆ. ಮಳೆ
ವಿಡಿಯೋ ನೋಡಿ:ಹಾಲಿ ಕ್ರಿಮಿನಲ್ ಕಾಯ್ದೆಗಳಿಗೆ ಪರ್ಯಾಯಕೇಂದ್ರ ಸರ್ಕಾರದ ಉತ್ಸುಕತೆಗೆ ಕಾರಣವೇನು? Janashakthi Media