ಬೆಂಗಳೂರು : ಮುಂದಿನ 48 ಗಂಟೆಗಳಲ್ಲಿ ಬಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಕರ್ನಾಟಕ ಹವಮಾನ ಇಲಾಖೆ ಮಾಹಿತಿ ನೀಡಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಬಹುದು ಎಂಬ ಮಾಹಿತಿ ಇಲ್ಲಿದೆ.
ಈ ಬಾರಿ ಮುಂಗಾರು ಸಮಯದಲ್ಲೇ ಅತಿಹೆಚ್ಚು ಮಳೆಯಾಗಿದ್ದು, ವರುಣ ಬಾರಿ ಕೃಪೆ ತೋರಿದ್ದಾನೆ. ಮಳೆ ಇಲ್ಲದೆ ಇಷ್ಟು ದಿನ ಕರ್ನಾಟಕದ ಪರಿಸ್ಥಿತಿ ಸಮಸ್ಯೆಗೆ ಸಿಲುಕಿತ್ತು. ಹೀಗಾಗಿ ಮಳೆ ಬರಲಿ ದೇವರೆ ಅಂತಾ, ಕರ್ನಾಟಕದ ಪ್ರಜೆಗಳು ಕೂಡ ಪ್ರಾರ್ಥನೆ ಮಾಡುತ್ತಿದ್ದರು. ಇದೀಗ ಜನರ ಪ್ರಾರ್ಥನೆ ಫಲಿಸಿದ್ದು, ಕಳೆದ 2 ತಿಂಗಳಿಂದ ಭರ್ಜರಿ ಮಳೆ ಬೀಳುತ್ತಿದೆ. ಹಾಗೆಯೇ ಮುಂದಿನ 48 ಗಂಟೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರಕ್ಕೆ ಕೌಂಟ್‌ಡೌನ್ ಶುರುವಾಗಿ, ಮುಂದಿನ 48 ಗಂಟೆಯಲ್ಲಿ ಭಾರಿ ಮಳೆ ಸುರಿಯಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗೆ ಮಳೆ ಇಲ್ಲದೆ ಪರದಾಡಿದ್ದ ಕನ್ನಡಿಗರಿಗೆ ಖುಷಿ ಸುದ್ದಿ ಸಿಗುತ್ತಿದ್ದು. ಇಷ್ಟು ದಿನ ಮಳೆ ಬರಲಿ ದೇವರೇ ಅಂತಾ ಬೇಡಿಕೊಂಡಿದ್ದ, ಕನ್ನಡ ನಾಡಿಗೆ ಇದೀಗ ಭರ್ಜರಿ ಮಳೆ ಸಿಂಚನ ಆಗುತ್ತಿದೆ. ಅದರಲ್ಲೂ ಇಷ್ಟುದಿನ ಬಿದ್ದ ಮಳೆ ಬರೀ ಸ್ಯಾಂಪಲ್, ಇನ್ನು ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ಅಸಲಿ ಮಳೆ ಶುರುವಾಗುತ್ತೆ ಎಂಬ ಮಾಹಿತಿ ಸಿಗುತ್ತಿದೆ.
ಇದನ್ನು ಓದಿ : ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ : ಜನರ ಬದುಕನ್ನು ದುಸ್ತರ – ಜೆಎಂಎಸ್ ಆರೋಪ
ಮುಂದಿನ 24 ರಿಂದ 48 ಗಂಟೆ ಅವಧಿಯಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ & ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗೆ ಭರ್ಜರಿ ಮಳೆ ಬೀಳಲಿದೆ. ಅದೇ ರೀತಿಯಾಗಿ ದಕ್ಷಿಣ ಒಳನಾಡು ಪ್ರದೇಶ, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸಲಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಮಂಡ್ಯ, ಉಡುಪಿ, ಮಂಗಳೂರು, ಉತ್ತರ ಕನ್ನಡ, ತುಮಕೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಜಿಲ್ಲೆಯಲ್ಲಿ ಮಳೆ ಮುನ್ನೆಚ್ಚರಿಕೆ ನೀಡಿದೆ ಹವಾಮಾನ ಇಲಾಖೆ. ಬೆಂಗಳೂರಿನಲ್ಲಿ ಇಂದು ಮಳೆ ಬರುವುದು ಸ್ವಲ್ಪ ಅನುಮಾನ, ಆದರೂ ನಾಳೆ ಬೆಂಗಳೂರಿನಲ್ಲಿ ಭರ್ಜರಿ ಮಳೆ ಗ್ಯಾರಂಟಿ ಎನ್ನಲಾಗಿದೆ.
ವಿಜಯಪುರ, ರಾಯಚೂರು, ಹಾಸನ, ಚಿತ್ರದುರ್ಗ, ಬೆಳಗಾವಿ, ದಾವಣಗೆರೆ, ಬಳ್ಳಾರಿ ಜಿಲ್ಲೆಯ ಹಲವು ಭಾಗಗಳು ಸೇರಿ ಶಿವಮೊಗ್ಗ, ತುಮಕೂರು, ಬೀದರ್, ಕಲಬುರಗಿ, ಯಾದಗಿರಿ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುತ್ತೆ ಎನ್ನಲಾಗಿದೆ. ಮತ್ತೊಂದು ಕಡೆ ಈಗಾಗಲೇ ಮಳೆಯ ಹಿನ್ನೆಲೆ ಕರ್ನಾಟಕದ ಜಲಾಶಯಗಳಿಗೆ ಭಾರಿ ನೀರು ಹರಿದು ಬರುತ್ತಿದೆ. ಹೀಗಾಗಿ ಜನರು ಕೂಡ ಖುಷಿ, ಖುಷಿಯಾಗಿ ಕೃಷಿ ಚಟುವಟಿಕೆಗೆ ಸಜ್ಜಾಗುತ್ತಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಕೂಡ ಮಳೆ ಅಬ್ಬರಿಸಿದ್ದು, ಮುಂದಿನ 48 ಗಂಟೆಯಲ್ಲಿ ಮತ್ತೆ ಬೆಂಗಳೂರಲ್ಲೂ ಮಳೆಯ ಸಿಂಚನ ಆಗಲಿದೆ ಎನ್ನಲಾಗಿದೆ.
ಇದನ್ನು ನೋಡಿ : ಗಾಯಗೊಂಡಿರೋ ಸಿಂಹದ ಉಸಿರು ಘರ್ಜನೆಗಿಂತ ಭಯಂಕರವಾಗಿರುತ್ತೆದೆಯೇ? ವಾಸ್ತವ ತಿಳಿಯಲು ಈ ವಿಡಿಯೋ ನೋಡಿ