ಕೊಡಗು: ಕರ್ನಾಟಕದಲ್ಲಿ ಮಳೆ ಎಲ್ಲೆಲ್ಲೂ ಆರ್ಭಟಿಸುತ್ತಿದೆ, ಮುಂಗಾರು ಮಳೆ ಅಬ್ಬರಕ್ಕೆ ಎಲ್ಲೆಲ್ಲೂ ಈಗ ಅಲ್ಲೋಲ & ಕಲ್ಲೋಲ ಸೃಷ್ಟಿಯಾಗಿದೆ. ಜುಲೈ ಮೊದಲ ವಾರದಿಂದ ನಿರಂತರವಾಗಿ ಮಳೆಯು ಬೀಳುತ್ತಿರುವುದು ಕರ್ನಾಟಕದಲ್ಲಿ ಎದುರಾಗಿದ್ದ ನೀರಿನ ಕೊರತೆಯನ್ನು ಸಂಪೂರ್ಣವಾಗಿ & ಅಚ್ಚುಕಟ್ಟಾಗಿ ನಿಭಾಯಿಸಿದೆ. ಆರ್ಭಟ
2024ರ ಮುಂಗಾರು ಮಳೆ ಕರ್ನಾಟಕದ ಪಾಲಿಗೆ ಅದೃಷ್ಟ ತಂದಿದೆ. ಅಂದುಕೊಂಡ ರೀತಿಯಲ್ಲೇ ಮುಂಗಾರು ಮಳೆ ಕರ್ನಾಟಕದಲ್ಲಿ ಬೀಳುತ್ತಿದ್ದು ಮುಂಗಾರು ಮಳೆ ಫುಲ್ ಅಲರ್ಟ್ ಆಗಿದೆ. ಎಲ್ಲೆಲ್ಲೂ ಭಾರಿ ಮಳೆ ಸುರಿಸುತ್ತಿರುವ ಪರಿಣಾಮ ಕರ್ನಾಟಕದ ಮಲೆನಾಡು ಸೇರಿ, ಕರಾವಳಿ ಜಿಲ್ಲೆಗಳೂ ಸೇರಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲೂ ಭರ್ಜರಿಯಾಗಿ ಮಳೆ ಬೀಳುತ್ತಿದೆ. ಅದರಲ್ಲೂ ಕಾವೇರಿ ನದಿ ಹುಟ್ಟುವ ತವರು ಜಿಲ್ಲೆ ಕೊಡಗು ಜಿಲ್ಲೆಯಲ್ಲಿ ಈಗ ಭೀಕರ ಮಳೆ ಬೀಳುತ್ತಿದೆ. ಆರ್ಭಟ
ಮಳೆಯಲ್ಲಿ ಮುಳುಗಿದ ಕರ್ನಾಟಕ
ಮಳೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ ಸೇರಿ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆ ಅಬ್ಬರಿಸಿದೆ. ಕಳೆದ ಕೆಲ ದಿನಗಳಿಂದ ನಿರಂತರ ಮುಂಗಾರು ಮಳೆ ಬೀಳುತ್ತಿರುವ ಕಾರಣ ಜನಜೀವನ ಪೂರ್ಣ ಅಸ್ತವ್ಯಸ್ಥ ಸ್ಥಿತಿಗೆ ತಲುಪಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋದ ಸಮಯದಲ್ಲೇ, ಮುಂದಿನ 48 ಗಂಟೆಗಳಲ್ಲಿ ಮತ್ತೆ ಘೋರ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ಅಲ್ಲದೆ ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಸೇರಿದಂತೆ ಶಿವಮೊಗ್ಗ ಜಿಲ್ಲೆಗಳಿಗೆ ಅಲರ್ಟ್ ನೀಡಿದ್ದು, ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟಕ್ಕೆ ಸೇತುವೆ ಹಾಗೂ ರಸ್ತೆಗಳು ನದಿಯ ನೀರಲ್ಲಿ ಮುಳುಗಿ ಹೋಗುತ್ತಿವೆ.
ಇದನ್ನೂ ಓದಿ: ಡೆಂಗ್ಯೂ ಜ್ವರ; ಎಂಬಿಬಿಎಸ್ ಓದುತ್ತಿದ್ದ ವಿದ್ಯಾರ್ಥಿ ಸಾವು
ಮುಂದಿನ 48 ಗಂಟೆಗಳ ಕಾಲ… ಮಳೆ.. ಮಳೆ..
ಎಲ್ಲೆಲ್ಲೂ ಮಳೆಯ ಅಬ್ಬರ. ಅಬ್ಬರಕ್ಕೆ ಜನರ ಜೀವನವು ಕೂಡ ಸಂಕಷ್ಟದ ಸುಳಿಗೆ ಸಿಲುಕಿದ್ದು, ಮಳೆ ನಿಂತರೆ ಸಾಕಪ್ಪಾ ಅಂತಾ ಜನರು ಕೂಡ ಕಾಯ್ತಾ ಇದ್ದಾರೆ. ಪರಿಸ್ಥಿತಿ ಹಿಗಿದ್ದಾಗ ಮುಂದಿನ 48 ಗಂಟೆಗಳ ಕಾಲ, ಮತ್ತಷ್ಟು ಜೋರಾಗಿ ಮುಂಗಾರು ಮಳೆ ಬೀಳಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಕಾರಣ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ ನದಿಗಳ ಬಳಿ ಸುಳಿಯದಂತೆ ಎಚ್ಚರಿಕೆ ಬ್ಯಾನರ್ ಹಾಕಲಾಗುತ್ತಿದೆ.
ಮಂಡ್ಯ, ಮೈಸೂರಿನಲ್ಲಿ ಪ್ರವಾಹ? ಕೆಆರ್‌ಎಸ್, ಕಬಿನಿ, ಹೇಮಾವತಿ & ಹಾರಂಗಿ ಸೇರಿ ಕರ್ನಾಟಕದ ಕಾವೇರಿ ಕೊಳ್ಳದಲ್ಲಿ ಇದೀಗ ಭಾರಿ ನೀರು ಹರಿದು ಬರುತ್ತಿದೆ. ಹೀಗಾಗಿ, ಈ ಎಲ್ಲಾ ಜಲಾಶಯಗಳ ನೀರಿನ ಮಟ್ಟವು ಭರ್ಜರಿ ಏರಿಕೆ ಕಾಣುತ್ತಿದೆ. ಇಂತಹ ಸ್ಥಿತಿಯಲ್ಲಿ ಈಗ ದಿಢೀರ್ ಎಚ್ಚೆತ್ತುಕೊಂಡ ಅಧಿಕಾರಿಗಳು, ಕಾವೇರಿ ನದಿಗೆ ಇನ್ನು ಕೆಲವೇ ಕೆಲ ಕ್ಷಣಗಳಲ್ಲಿ, ಸಾವಿರಾರು ಕ್ಯುಸೆಕ್ ನೀರು ರಿಲೀಸ್ ಮಾಡಲು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಮೈಸೂರು, ಮಂಡ್ಯ, ಹಾಸನ, ರಾಮನಗರ ಜಿಲ್ಲೆಗಳಲ್ಲಿ ಈಗ ಪ್ರವಾಹ ಭೀತಿ ಎದುರಾಗಿದೆ.
ಒಟ್ನಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿರುವುದು ಒಂದಷ್ಟು ನೆಮ್ಮದಿ ನೀಡಿದೆ. ಕರ್ನಾಟಕದಲ್ಲಿ ಬಹುತೇಕ ಎಲ್ಲಾ ಡ್ಯಾಂಗಳು ಪೂರ್ತಿ ತುಂಬುತ್ತಿವೆ. ಇದರಿಂದ ಕರ್ನಾಟಕದಲ್ಲಿ ರೈತರಿಗೆ ಕೂಡ ಅನುಕೂಲ ಆಗಿದೆ. ಹೀಗೆ ಈ ಕಾರಣಕ್ಕೆ ಮಳೆಯ ಅವಾಂತರಗಳಿಂದ ಜನರನ್ನ ರಕ್ಷಣೆ ಮಾಡಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಹಾಗೇ ಜನರು ಕೂಡ ಭಾರಿ ಮಳೆ ಬೀಳುವಾಗ ಭಾರಿ ಎಚ್ಚರಿಕೆಯಿಂದ ಇರಬೇಕು, ನದಿಗಳ ಬಳಿ ಹೋಗಬಾರದು ಎಂದು ಸೂಚಿಸಲಾಗಿದೆ.
ಇದನ್ನೂ ನೋಡಿ: ಕನಿಷ್ಠ ವೇತನ, ಪಿಂಚಣಿಗೆ ಆಗ್ರಹಿಸಿ ಜುಲೈ 23 ರಂದು ಗ್ರಾಪಂ ನೌಕರರ ಹೋರಾಟJanashakthi Media