ರೈಲ್ವೇ ಟಿಕೇಟ್‌ ನೀಡುವಲ್ಲಿ ಕರ್ತವ್ಯ ಲೋಪ; ಕ್ಷಮೆ ಕೋರಿ ಹಣ ಹಿಂದಿರುಗಿಸಿದ ಇಲಾಖೆ

ಬೆಂಗಳೂರು: ನಿನ್ನೆ ರಾತ್ರಿ 7 ಗಂಟೆಗೆ ಸ್ನೇಹಿತರಿಬ್ಬರು ಕಾಚಿಗೂಡ ರೈಲ್ವೇ ನಿಲ್ದಾಣ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುವಾಗ ಎರಡು ಸಾಮಾನ್ಯ ಟಿಕೇಟ್‌ಗಳ ಹಣವನ್ನು ಪಾವತಿಸಿ ಟಿಕೆಟ್‌ ಖರೀದಿಸಿದರು. ನಂತರ ಸಮಯದ  ಅಭಾವದಿಂದ ರೈಲು ಹತ್ತಿದರು.

ರೈಲು ಇನ್ನೇನು ಪ್ರಯಾಣ ಆರಂಭವಾಗಬೇಕು ಎನ್ನುವಾಗ ತಮ್ಮ ಟಿಕೇಟನ್ನು ಗಮನಿಸಿದ್ದಾರೆ. ಟಿಕೇಟ್‌ ಕೌಂಟರ್‌ ಅಧಿಕಾರಿ ಎರಡು ಟಿಕೇಟ್‌ ಹಣವನ್ನು ಪಡೆದು ಕೇವಲ ಒಂದು ಟಿಕೇಟ್‌ ಮಾತ್ರ ನೀಡಿದ್ದಾರೆ.  ಸಮಯದ ಅಭಾವವನ್ನು ಬಳಸಿಕೊಂಡು ಟಿಕೇಟ್‌ ಕೌಂಟರ್‌ ಅಧಿಕಾರಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಎಸ್‌ಎಫ್‌ಐ ರಾಜ್ಯ ಜಂಟಿಕಾರ್ಯದರ್ಶಿ ಭೀಮನಗೌಡ ಅವರು ಟ್ವೀಟ್‌ ಮಾಡಿದ್ದು , ಐಆರ್‌ಸಿಟಿಸಿ ಅಧಿಕೃತ ಟ್ವಿಟ್ಟರ್‌ ಖಾತೆಗೆ ಸಂದೇಶ ಮಾಡುವ ಮೂಲಕ ಕಡಿಮೆ ಟಿಕೆಟ್‌ ಇರುವುದರ ಬಗ್ಗೆ ದೂರು ಇತ್ತಿದ್ದಾರೆ. ಹಾಗೆಯೇ ಟಿಕೆಟ್‌ ಕೌಂಟರ್‌ ಅಧಿಕಾರಿಯ ಮೇಲೆ ಕ್ರಮಕೈಗೊಳ್ಳಿ ಎಂದು ಟ್ವೀಟ್‌ ಮಾಡಿದ್ದಾರೆ.

ಟ್ವೀಟ್‌ ಗೆ ಪ್ರತಿಕ್ರಿಯೆ ಬಂದಿದ್ದು, ರೈಲ್ವೇ ಸೇವಾ ಕೇಂದ್ರ 139 ಸಂಖ್ಯೆಗೆ ಕರೆ ಮಾಡಿ ದೂರನ್ನು ದಾಖಲು ಮಾಡುವಂತೆ ಹೇಳಲಾಗಿದೆ. ನಂತರದಲ್ಲಿ 139 ಸಂಖ್ಯೆಗೆ ಕರೆ ಮಾಡಿ ರಿಜಿಸ್ಟರ್‌ ಮಾಡಿದಾಗ ಕೆಲವೇ ಸಮಯದಲ್ಲಿ ಕಾಚಿಗೂಡ ರೈಲ್ವೇ ನಿಲ್ದಾಣದಿಂದ ಕರೆ ಮಾಡಿ ಆಗಿರುವ ತಪ್ಪಿಗೆ ಕ್ಷಮೆಯಾಚಿಸಿದರು ಹಾಗೂ ತಮ್ಮ ಹಣ ಕೂಡಲೇ ಮರಳಿ ನೀಡುತ್ತೇವೆಂದು ಹೇಳಿದರು.

ಪ್ರಯಾಣಿಕರ ಸ್ನೇಹಿತ ಈಗ ಟಿಕೇಟ್‌ ಇಲ್ಲದೆ ಪ್ರಯಾಣ ಮಾಡಲು ಆಗುವುದಿಲ್ಲ ಎಂದಾಗ ʻಯುಟಿಎಸ್‌ʼನಲ್ಲಿ ಬುಕ್‌ ಮಾಡಲು ತಿಳಿಸಿದ್ದಾರೆ.

ಯುಟಿಎಸ್‌ ನಲ್ಲಿ ಬುಕ್‌ ಮಾಡಲು ಪ್ರಯತ್ನಿಸಿ ವಿಫಲವಾದಾಗ, ನಿಮ್ಮ ಪ್ರಯಾಣಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಟಿಕೇಟ್‌ ಇಲ್ಲದೆ ಪ್ರಯಾಣಿಸಿ, ಆ ಸಮಯದಲ್ಲಿ ಏನಾದರೂ ಸಮಸ್ಯೆಯಾದರೆ ನಾನೇ ದಂಡ ವಿಧಿಸುವುದಾಗಿಯೂ ಹೇಳಿದ್ದಾರೆ. ಇಲ್ಲಿಯವರೆಗೂ ಆಗಿರುವ ಅಡಚಣೆಗೆ ಕ್ಷಮೆ ಕೇಳಿದ್ದಾರೆ. ಹೆಚ್ಚುವರಿ ಹಣವನ್ನು ಗೂಗಲ್‌ ಪೇ ಮೂಲಕ ಹಿಂದಿರುಗಿಸಿದ್ದಾರೆ.

ಈ ಕುರಿತು ಜನಶಕ್ತಿ ಮೀಡಿಯಾ ಜೊತೆ ಮಾತನಾಡಿದ ಭೀಮನಗೌಡ,  ಟ್ವೀಟ್‌ ಮೂಲಕ ಐಆರ್‌ಟಿಸಿಗೆ ಮನವಿ ಮಾಡಿದೆ, ಅಧಿಕಾರಿಗಳು ಟ್ವೀಟ್‌ಗೆ ಸ್ಪಂದಿಸಿದ್ದು ಖುಷಿಯ ಸಂಗತಿ. ಆದರೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕಾಗಿದ್ದು ಅಧಿಕಾರಿಯ ಜವಾಬ್ದಾರಿಯಾಗಿದೆ. ಈ ರೀತಿ ಆಗದಂತೆ ಹಿರಿಯ ಅಧಿಕಾರಿಗಳು ಸುತ್ತೋಲೆ ಹೊರಡಿಸಿ ಎಲ್ಲಾ ರೈಲ್ವೆ ನಿಲ್ದಾಣಗಳಿಗೆ ರವಾನಿಸಬೇಕು.  ಈ ಎಲ್ಲಾ ಪ್ರಕ್ರಿಯೆಯಲ್ಲಿ ಅರ್ಜೆಂಟೈನಾ ದೇಶದ ನನ್ನ ನೆಚ್ಚಿನ ಫುಟ್ಬಾಲ್ ಆಟಗಾರ ಮೆಸ್ಸಿಯವರ ಆಟವನ್ನು ನೋಡಲು ಆಡಚಣೆಯಂತೂ ಆಯಿತು ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *