ಅಲ್ಪ ಅಂತರದ ರೈಲ್ವೆ ಪ್ರಯಾಣ ದರ ದುಪ್ಪಟ್ಟು – ಕೇಂದ್ರದ ನಿರ್ಧಾರ

ಹೊಸದೆಹಲಿ : ಪೆಟ್ರೋಲ್, ಡೀಸೆಲ್‌, ಗ್ಯಾಸ್ ದರ ಹೆಚ್ಚಳದ ಬೆನ್ನಲ್ಲೆ ಈಗ ರೈಲ್ವೆ ಪ್ರಯಾದ ದರವನ್ನು ಹೆಚ್ಚಿಸುವ ಮೂಲಕ ಕೇಂದ್ರ ಸರಕಾರ ಶಾಕ್ ನೀಡಿದೆ.

ಅಲ್ಪ ಅಂತರದ ಪ್ರಯಾಣ ಮಾಡುವವರನ್ನು ನಿಯಂತ್ರಿಸುವ ಉದ್ದೇಶದಿಂದ ರೈಲ್ವೆ ಇಲಾಖೆ ರೈಲ್ವೆ ದರದಲ್ಲಿ ದುಪ್ಪಟ್ಟು ಏರಿಕೆ ಮಾಡಿದೆ.

ಅಲ್ಪ ಅಂತರದ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದ ಹಿನ್ನೆಲೆಯಲ್ಲಿ ಅನಗತ್ಯವಾಗಿ ಅಲ್ಪ ಅಂತರ ಪ್ರಯಾಣ ಮಾಡುವವರನ್ನು ನಿಯಂತ್ರಿಸಲು ರೈಲ್ವೆ ಇಲಾಖೆ ಬುಧವಾರ ದಿಢೀರನೆ ಪ್ರಯಾಣ ದರ ಏರಿಸಿದೆ.

ಕೊರೊನಾ ವೈರಸ್ ಅಬ್ಬರದ ಹಿನ್ನೆಲೆಯಲ್ಲಿ ಪ್ರಸ್ತುತ ರೈಲ್ವೆ ಇಲಾಖೆ ವಿಶೇಷ ರೈಲುಗಳ ಸೇವೆ ಮಾತ್ರ ನೀಡುತ್ತಿದೆ. ಇದುವರೆಗೆ ದೀರ್ಘ ದೂರದ ರೈಲುಗಳನ್ನು ಮಾತ್ರ ಓಡಿಸುತ್ತಿತ್ತು. ಇತ್ತೀಚೆಗೆ ಅಲ್ಪ ಅಂತರದ ರೈಲುಗಳ ಸೇವೆಯನ್ನು ಆರಂಭಿಸಿದೆ.

ಸಾಮಾನ್ಯವಾಗಿ ಅಲ್ಪ ಅಂತರದ ಟಿಕೆಟ್ ದರ 25 ರೂ. ಶುಲ್ಕ ಪಡೆಯಲಾಗುತ್ತಿತ್ತು. ಆದರೆ ಇದೀಗ 55 ರೂ. ನೀಡಬೇಕಿದೆ. ಅಲ್ಪ ಅಂತರದ ಪ್ರಯಾಣಿಕರ ಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಅಲ್ಪ ಅಂತರದ ಟಿಕೆಟ್ ದರದಲ್ಲಿ ಮಾತ್ರ ಏರಿಕೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಕೋವಿಡ್ ಇನ್ನೂ ಹೆಚ್ಚುತ್ತಲೇ ಇದ್ದು, ಕೆಲವು ರಾಜ್ಯಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ಸಚಿವಾಲಯ ತಿಳಿಸಿದೆ. ಜನಸಂದಣಿ ಯನ್ನು ತಡೆಯಲು ಮತ್ತು ಕೋವಿಡ್‌ ಹರಡುವುದನ್ನು ತಡೆಯಲು ರೈಲ್ವೆ ಇಲಾಖೆ ಗಳು ಹೆಚ್ಚಿನ ಬೆಲೆಗಳನ್ನು ಹೆಚ್ಚಿಸುತ್ತಿವೆ ಅಂತ ಹೇಳಿದೆ. ಪ್ಯಾಸೆಂಜರ್ ರೈಲುಗಳ ಸಾಮಾನ್ಯ ಸೇವೆಗಳನ್ನು ಸಂಪೂರ್ಣವಾಗಿ ಮರುಸ್ಥಾಪಿಸಲಿದ್ದು, ವಿವಿಧ ಅಂಶಗಳು ಮತ್ತು ಕಾರ್ಯಾಚರಣೆಯ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು ಪರಿಗಣಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಪೂರ್ವ-ಲಾಕ್ ಡೌನ್ ಸಮಯಗಳಿಗೆ ಹೋಲಿಸಿದಲ್ಲಿ ಭಾರತೀಯ ರೈಲ್ವೆಯು ಸುಮಾರು 65% ಮೇಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳನ್ನು ಮತ್ತು 90% ಉಪನಗರ ಸೇವೆಗಳನ್ನು ಕಾರ್ಯನಿರ್ವಹಿಸಿದೆ. ಒಟ್ಟು 1250 ಮೇಲ್ ಮತ್ತು ಎಕ್ಸ್ ಪ್ರೆಸ್, 5350 ಉಪನಗರ ಸೇವೆಗಳು ಮತ್ತು 326ಕ್ಕೂ ಹೆಚ್ಚು ಪ್ಯಾಸೆಂಜರ್ ರೈಲುಗಳು ಪ್ರಸ್ತುತ ದೈನಂದಿನ ಸರಾಸರಿ ಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇಂದು ಅಲ್ಪ ಅಂತರದ ಪ್ರಯಾದ ದರ ದುಪ್ಪಟ್ಟು ಮಾಡಿದ್ದು ಸ್ಯಾಂಪಲ್ ಮಾತ್ರ, ಮುಂದೆ ದೀರ್ಘ ಪ್ರಯಾಣದ ದರವನ್ನು ಕೇಂದ್ರ ಸರಕಾರ ಹೆಚ್ಚಿಸಬಹುದು ಎಂಬುದು ಪ್ರಯಾಣಿಕರ ಆತಂಕವಾಗಿದೆ.

Donate Janashakthi Media

Leave a Reply

Your email address will not be published. Required fields are marked *