ಬೆಂಗಳೂರು: ನಗರದಲ್ಲಿ ನಕಲಿ ಬ್ರಾಂಡೆಡ್ ಬಟ್ಟೆ ಮಾರಾಟಗಳ ತಲೆ ಮೇಲೆ ಹೊಡೆದಂಗೆ ಅದೇ ಬ್ರಾಂಡ್ ಗಳ ಲೇಬಲ್ ಬಳಜೆ ಮಾಡಿ ನಕಲಿ ಸಿದ್ದ ಉಡುಪು ತಯಾರಿಕೆ ಮಾಡ್ತಿದ್ದ ಘಟಕದ ಮೇಲೆ ಮಾದಾನಾಯನಹಳ್ಳಿ ಪೊಲೀಸ್ರು ದಾಳಿ ನಡೆಸಿದ್ದಾರೆ. ಬೆಂಗಳೂರು
ದಾಳಿ ವೇಳೆ ಸುಮಾರು ನಲವತ್ತು ಲಕ್ಷ ಮೌಲ್ಯದ ನಕಲಿ ಬ್ರಾಂಡೆಂಡ್ ಬಟ್ಟೆಗಳನ್ನ ಸೀಜ್ ಮಾಡಿದ್ದಾರೆ. ಪ್ರತಿಷ್ಠಿತ ಬ್ರಾಂಡ್ ಗಳಾದ ಪೋಲೋ, ಬಾರ್ಬೆರಿ ಲೇಬಲ್ ಬಳಕೆ ಮಾಡಿ ಗಾರ್ಮೇಂಟ್ ತಯಾರು ಮಾಡ್ತಿರೋ ಬಗ್ಗೆ ಕಂಪನಿಯವರು ಮಾಹಿತಿ ಕಲೆ ಹಾಕಿ ಮಾದನಾಯಕನಹಳ್ಳಿ ಪೊಲೀಸ್ರಿಗೆ ದೂರು ನೀಡಿದ್ರು.
ಇದನ್ನೂ ಓದಿ: ಎನ್‌ಕೌಂಟರ್ ರಾಜ್ಯ
ಮಾದನಾಯಕನಹಳ್ಳಿ ಠಾಣವ್ಯಾಪ್ತಿಯ ತೋಟದ ಗುಡ್ಡದಹಳ್ಳಿಯಲ್ಲಿ ಆಶ್ರಫ್, ಶರ್ಪುದ್ದೀನ್ ಮತ್ತು ಸರವಣ ಎಂಬುವವರು ಈ ನಕಲಿ ಗಾರ್ಮೆಂಟ್ ಫ್ಯಾಕ್ಟರಿ ನಡೆಸ್ತಿದ್ರು. ಮಾದನಾಯಕನಹಳ್ಳಿ ಪೊಲೀಸ್ರ ದಾಳಿ ವೇಳೆ ಅನಧಿಕೃತವಾಗಿ ಫ್ಯಾಕ್ಟರಿಯಲ್ಲಿ ಪೋಲೋ, ಬಾರ್ಬೆರಿ ಬ್ರಾಂಡ್ ಗಳ ಶರ್ಟ್ ಗಳು ಗಾರ್ಮೆಂಟ್ ಉತ್ಪನ್ನಗಳು ಪತ್ತೆಯಾಗಿವೆ.
ಈ ವಸ್ತುಗಳ ಅಂದಾಜು ಮೌಲ್ಯ ಸುಮಾರು 40 ಲಕ್ಷ ಎಂದು ಹೇಳಲಾಗ್ತಿದೆ. ಈ ನಕಲಿ ಬ್ರಾಂಡ್ ಗಾರ್ಮೆಂಟ್ ಗಳನ್ನ ಅಸಲಿ ಬ್ರಾಂಡ್ ಗಳೆಂದು ಬಿಂಬಿಸಿ ಮಾರಾಟ ಮಾಡಲಾಗ್ತಿತ್ತು ಎಂದು ತಿಳಿದು ಬಂದಿದೆ. ಸದ್ಯ ನಕಲಿ ವಸ್ತುಗಳು ಹಾಗೂ ಆರೋಪಿಗಳನ್ನ ವಶಕ್ಕೆ ಪಡೆದು ಮಾದನಾಯಕನಹಳ್ಳಿ ಪೊಲೀಸ್ರು ವಿಚಾರಣೆ ನಡೆಸ್ತಿದ್ದಾರೆ.
ಇದನ್ನೂ ನೋಡಿ: ಅಂಬೇಡ್ಕರ್ ಮತ್ತು ಕಾರ್ಮಿಕ ಕಾನೂನುಗಳು – ಅಶ್ವಿನಿ ಒಬುಳೇಶ್ Janashakthi Media