ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ| ಬಯ್ಯಾಪೂರ ಉಪಕೇಂದ್ರಕ್ಕೆ ಮುತ್ತಿಗೆ ಹಾಕಿದ ರೈತರು

ಲಿಂಗಸಗೂರು: ಭೀಕರ ಭರದ ಮಧ್ಯೆ ರೈತರಿಗೆ ಜೆಸ್ಕಾಂ ಇಲಾಖೆ ಶಾಕ್‌ ನೀಡುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಪವರ್‌ ಇಲ್ಲದೆ ಬೆಳೆಗಳಿಗೆ ನೀರು ಹಾಯಿಸಲು ರೈತರು ಪರದಾಡುತ್ತಿದ್ದಾರೆ. ಉಪಕೇಂದ್ರಕ್ಕೆ 

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಬಯ್ಯಪೂರ ಉಪ ಕೆಇಬಿ ಗೆ 40ಕ್ಕೂ ಹೆಚ್ಚು ರೈತರು ಮುತ್ತಿಗೆ ಹಾಕಿ ಜೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ರೈತರಿಗೆ ವಂಚಿಸುತ್ತಿರುವ ಅಧಿಕಾರಿಗಳು; ಜಿಲ್ಲಾಧಿಕಾರಿಗಳಿಗೆ ಡಿಎಸ್‌ಎಸ್‌ ದೂರು

ಇನ್ನು ರೈತರು ಹತ್ತಿ, ಕಬ್ಬು, ತೊಗರಿ, ಮೆಣಸಿನಕಾಯಿ ಗಿಡ, ಮೆಕ್ಕೆಜೋಳ, ಸಜ್ಜೆ ಬೆಳೆಗಳಿಗೆ ನೀರು ಹಾಯಿಸಲು ಬೊಗಾಪೂರ, ನಾಗರಹಾಳ, ಪಲಗಲದಿನ್ನಿ, ಹಲ್ಕಾವಟಗಿ, ತೊಂಡಿಹಾಳ, ಅಂಕನಾಳ, ಉಪನಾಳ ಭಾಗದ ರೈತರು ಕರೆಂಟ್‌ ಇಲ್ಲದೆ ಪರದಾಡುತ್ತಿದ್ದಾರೆ. ಉಪಕೇಂದ್ರಕ್ಕೆ 

15 ದಿನಗಳಿಂದ ಟಿಸಿ ಸುಟ್ಟರು ದುರಸ್ತಿಗೊಳಿಸದ ಜೆಸ್ಕಾಂ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ಇತ್ತ ಪೊಲೀಸ್‌ ಇಲಾಖೆ ಅಧಿಕಾರಿಗಳ ಕೆಇಬಿ ಮುಂಭಾದಗದಲ್ಲಿ ರೈತರ ಮನವೊಲಿಸಲು ಮುಂದಾದರೂ ಕೂಡ ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಬರುವ ತನಕ ಈ ಜಾಗ ಬಿಟ್ಟು ಕದಲುವದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ಆರಂಭದಲ್ಲಿ ಮಳೆ ಸರಿಯಾಗಿ ಬರಲಿಲ್ಲ, ನಂತರದಲ್ಲಿ ಅತೀವೃಷ್ಠಿ ಮಳೆ ಬಂದು ಬೆಳೆಹಾನಿಯಾಗಿದೆ. ಈಗ ಪವರ್‌ ಕಡಿತಮಾಡಿದರೆ ರೈತರ ಹೊಟ್ಟೆ ತುಂಬಿಸುವವರು ಯಾರು? ರೈತರ ಬೆಳೆಗಳಿಗೆ ಹಾನಿಯಾದರೆ ಅದು ರೈತರಿಗಷ್ಟೆ ಅಲ್ಲ ಸಾರ್ವಜನಿಕರಿಗೂ ಸಮಸ್ಯೆಯಾಗಲಿದೆ. ಬೆಳಗಳಲ್ಲಿ ಕೊರತೆ ಕಂಡುಬಂದರೆ ಬೆಲೆ ಏರಿಕೆಯ ಪರಿಣಾಮವನ್ನು ಜನರು ಎದುರಿಸಬೇಕಾಗುತ್ತಿದೆ. ರೈತರ ಸರ್ಕಾರ ಎನ್ನುವವರು ಈಗ ರೈತರ ಜೊತೆಗೆ ಆಟ ಆಡುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ:ರೈತ, ಕಾರ್ಮಿಕ, ದಲಿತ, ಕೂಲಿಕಾರರ, ಮಹಿಳೆಯರ ಹಕ್ಕುಗಳಿಗಾಗಿ ಮಹಾಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *