ಪಂಜಾಬ್ : ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಬಿಜೆಪಿ ಮುಖಂಡರು ಹೆದರಿ ಓಡಿ ಹೋಗಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಬಿಜೆಪಿ ಮುಖಂಡರಿದ್ದ ಹೋಟೆಲ್ ಬಳಿ ರೈತರು ಜಮಾವಣೆ ಆದ ಕಾರಣ ಬಿಜೆಪಿ ನಾಯಕರು ಪೊಲೀಸ್ ಭದ್ರತೆಯಲ್ಲಿ ಹಿಂಬಾಗಿಲಿನಿಂದ ಓಡಿಹೋದ ಘಟನೆ ಪಂಜಾಬ್‌ನ ಫಂಗ್ವಾರದಲ್ಲಿ ನಡೆದಿದೆ.
ಬಿಜೆಪಿ ಮುಖಂಡರಿಗೆ ಸೇರಿದ್ದು ಎನ್ನಲಾದ ಹೋಟೆಲ್‌ನಲ್ಲಿ ಬಿಜೆಪಿ ಮುಖಂಡರು ವಾಜಪೇಯಿ ಅವರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸುತ್ತಿದ್ದ ಸಂದರ್ಭ ಹೊರಗಡೆ ಸೇರಿದ ಭಾರತೀಯ ಕಿಸಾನ್ ಯೂನಿಯನ್ ಸದಸ್ಯರು ಘೋಷಣೆಗಳನ್ನು ಕೂಗಿದರು. ರೈತರ ಆಗಮನಕ್ಕೂ ಮುನ್ನವೇ ಹಲವು ಬಿಜೆಪಿ ನಾಯಕರು ಹೋಟೆಲ್ ಸೇರಿಕೊಡಿದ್ದರು. ಆದರೆ, ಪ್ರತಿಭಟನೆ ಆರಂಭವಾದ ಬಳಿಕ ಬಿಜೆಪಿಯ ಜಿಲ್ಲಾಧ್ಯಕ್ಷ ಭಾರತಿ ಶರ್ಮಾ ಸೇರಿದಂತೆ ಯಾರೊಬ್ಬರನ್ನೂ ರೈತರು ಹೋಟೆಲ್ ಒಳಗೆ ಹೋಗಲು ಬಿಡಲಿಲ್ಲ.
ಕೇಂದ್ರದಲ್ಲಿರುವ ಮೋದಿ ಸರಕಾರಕ್ಕೆ ಕೃಷಿ ಮಸೂದೆಯನ್ನು ರದ್ದು ಪಡಿಸಲು ಹೇಳಿ, ನೀವು ರೈತರು ಬೆಳದ ಅನ್ನವನ್ನು ತಿನ್ನುವುದಿಲ್ಲವೆ. ಈ ಹೊಟೆಲ್ ನಲ್ಲಿ ನೀವು ಮಾಡುತ್ತಿರುವ ಕಾರ್ಯಕ್ರಮಕ್ಕೆ ಮಾಡಿರುವ ತಿಂಡಿ, ಊಟ ರೈತರು ಬೆಳದದ್ದು ಎಂದು ರೈತರು ಪಟ್ಟು ಹಿಡಿದರು.
ಇದಕ್ಕೂ ಮುನ್ನವೇ ಒಳಗೆ ಹೋಗಿದ್ದವರು ಪ್ರತಿಭಟನಾಕಾರರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪೊಲೀಸ್ ರಕ್ಷಣೆಯಲ್ಲಿ ಹೋಟೆಲ್‌ನ ಹಿಂಬಾಗಿಲಿನಿಂದ ಒಬ್ಬೊಬ್ಬರಾಗಿ ಜಾರಿಕೊಳ್ಳಬೇಕಾಯಿತು ಎಂದು ಪಂಜಾಬ್ ನ ಮಾಧ್ಯಮಗಳು ತಿಳಿಸಿವೆ.