ಲೈಂಗಿಕ ದೌರ್ಜನ್ಯ ಆರೋಪ: ಕಾಂಗ್ರೆಸ್‌ ಪಕ್ಷದಿಂದ ರಾಹುಲ್‌ ಮಮ್‌ಕೂತಥಿಲ್‌ ಅಮಾನತು

ತಿರುವನಂತಪುರ: ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿಯು (ಕೆಪಿಸಿಸಿ) ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್‌ ಶಾಸಕ ರಾಹುಲ್‌ ಮಮ್‌ಕೂತಥಿಲ್‌ ರನ್ನು ಪಕ್ಷದಿಂದ ಅಮಾನತು ಮಾಡಿದೆ.

ರಾಹುಲ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಕೂಗು ವ್ಯಾಪಕವಾಗಿದೆ. ಒಂದು ವೇಳೆ, ಅವರು ಸ್ಥಾನ ತ್ಯಜಿಸಿ, ಚುನಾವಣೆ ನಡೆದರೆ ಬಿಜೆಪಿಗೆ ಲಾಭವಾಗಬಹುದೇ ಎಂಬ ಲೆಕ್ಕಾಚಾರ ಕಾಂಗ್ರೆಸ್‌ ಪಾಳೆಯದಲ್ಲಿ ಶುರುವಾಗಿದೆ.

ಪಾಲಕ್ಕಾಡ್‌ ವಿಧಾನಸಭೆಗೆ ನಡೆದ ಕಳೆದ ಮೂರೂ ಚುನಾವಣೆಗಳಲ್ಲಿ ಬಿಜೆಪಿ ಎರಡನೇ ಸ್ಥಾನ ಗಳಿಸಿತ್ತು. ರಾಹುಲ್‌ ಅವರನ್ನು ಆರು ತಿಂಗಳವರೆಗೆ ಅಮಾನತು ಮಾಡಲು ಕೆಪಿಸಿಸಿ ನಿರ್ಧರಿಸಿದೆ. ಹಾಗೆಯೇ, ಅವರಿಗೆ ವಿಧಾನಸಭೆ ಅಧಿವೇಶನದಿಂದಲೂ ಹೊರಗುಳಿಯುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಕಳೆದ 1000 ವರ್ಷಗಳಲ್ಲಿ ಭಾರತದಲ್ಲಿ ನೂತನ ಆವಿಷ್ಕಾರಗಳು ಶೂನ್ಯವೇ?

ರಾಹುಲ್ ವಿರುದ್ಧದ ಆರೋಪವನ್ನು ಪಕ್ಷದ ಹೈಕಮಾಂಡ್‌ ಗಂಭೀರವಾಗಿ ಪರಿಗಣಿಸಿದೆ. ಆರೋಪದ ಬೆನ್ನಲ್ಲೇ, ಕೇರಳ ಘಟಕದ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು.

ಲೈಂಗಿಕತೆ ಒತ್ತಾಯಿಸುವುದರಿಂದ ಗರ್ಭಪಾತ ಮಾಡಿಸಿಕೊಳ್ಳುವಂತೆ ಬಲವಂತ ಮಾಡಲಾಗಿದೆ ಎನ್ನುವಂತಹ ಗಂಭೀರ ಆರೋಪಗಳನ್ನು ಹಲವು ಮಹಿಳೆಯರು ರಾಹುಲ್‌ ವಿರುದ್ಧ ಮಾಡಿದ್ದಾರೆ. ಆದರೆ, ಯಾರೊಬ್ಬರೂ ಔಪಚಾರಿಕವಾಗಿ ದೂರು ದಾಖಲಿಸಿಲ್ಲ.

ಕೇರಳ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಒಂದು ವೇಳೆ ರಾಹುಲ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಚುನಾವಣೆ ನಡೆಸುವ ವಿಚಾರವು ಚುನಾವಣಾ ಆಯೋಗ ವಿವೇಚನೆಗೊಳಪಡುತ್ತದೆ.

ಇದನ್ನೂ ನೋಡಿ: ‘ಎಡಿಟೆಡ್ ವಿಡಿಯೋ’ ಬಗ್ಗೆ ಘನಘೋರ ಚರ್ಚೆ ನಾಚಿಗೆಗೇಡು‌ | ‘ಹರೀಶ್ ಪೂಂಜಾರನ್ನು ಅಮಾನತು ಮಾಡಿ’ – ನವೀನ್ ಸೂರಿಂಜೆ

Donate Janashakthi Media

Leave a Reply

Your email address will not be published. Required fields are marked *