ರಾಹುಲ್‌ ಗಾಂಧಿ, ಸ್ನೇಹಿತನ ವಿವಾಹ ಸಂದರ್ಭದಲ್ಲಿ ಭಾಗಿಯಾಗಿದ್ದೂ ತಪ್ಪೇ : ಕಾಂಗ್ರೆಸ್ ಪ್ರಶ್ನೆ

ನವದೆಹಲಿ: ಸ್ನೇಹಿತರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ನೇಪಾಳದ ಕಾಠ್ಮಂಡುಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅಲ್ಲಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾದ ವಿಡಿಯೋ ಒಂದು ವೈರಲ್‌ ಆಗಿದ್ದು, ಈ ವಿಚಾರ ಇದೀಗ ರಾಜಕೀಯ ಚರ್ಚಾ ವಸ್ತುವಾಗಿದೆ.

ನೇಪಾಳದ ಕಠ್ಮಂಡುವಿನಲ್ಲಿ ಸುಮ್ನಿಮಾ ಉದಾಸ್(ನೇಪಾಳದಲ್ಲಿ ಚೀನಾ ರಾಯಭಾರಿ) ಎಂಬ ಸ್ನೇಹಿತೆಯ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದು ಅಲ್ಲಿ ಮಹಿಳೆಯೊಂದಿಗಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಹಲವು ಕಮೆಂಟ್ ಮಾಡಿ, ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಪಕ್ಷ ರಾಹುಲ್‌ ಗಾಂಧಿ ವಿರುದ್ಧ ನಾನಾರೀತಿಯಲ್ಲಿ ಆರೋಪಗಳನ್ನು ಮಾಡುತ್ತಿದ್ದರು. ಬಿಜೆಪಿ ಆರೋಪಗಳಿಗೆ ಉತ್ತರಿಸುತ್ತಿರುವ ಕಾಂಗ್ರೆಸ್‌ ನಾಯಕರು ರಾಹುಲ್‌ ಗಾಂಧಿ ಕಾಠ್ಮಂಡು ಭೇಟಿಯ ಹಿನ್ನೆಲೆಯನ್ನು ವಿವರಿಸುತ್ತಿವೆ.

ಬಿಜೆಪಿ ಐಟಿ ಉಸ್ತುವಾರಿ ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದು, ಮುಂಬೈ ಸಂಕಷ್ಟದಲ್ಲಿರುವಾಗ ರಾಹುಲ್ ಗಾಂಧಿ ನೈಟ್‌ಕ್ಲಬ್‌ನಲ್ಲಿದ್ದಾರೆ. ಅವರ ಪಕ್ಷ ಶೋಚನೀಯ ಸ್ಥಿತಿಯಲ್ಲಿರುವ ಸಮಯದಲ್ಲಿ ಅವರು ನೈಟ್‌ಕ್ಲಬ್‌ನಲ್ಲಿದ್ದಾರೆ ಎಂದಿದ್ದಾರೆ.

ಭಾರತ ಸ್ನೇಹಿ ದೇಶವಾದ ನೇಪಾಳದಲ್ಲಿ ರಾಹುಲ್ ಗಾಂಧಿ ಅವರು ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಇದು ಅಪರಾಧವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಅಷ್ಟೇ ಅಲ್ಲ, 2015ರಲ್ಲಿ ಪ್ರಧಾನಿ ಮೋದಿ ಅಂದಿನ ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗಿ ಆಗಿರಲಿಲ್ಲವೇ ಎಂದು ಪ್ರಶ್ನಿಸಿದೆ.

ಸುದ್ದಿಗೋಷ್ಠಿ ನಡೆಸಿದ ಸುರ್ಜೇವಾಲಾ, ರಾಹುಲ್ ಗಾಂಧಿ ಅವರು ಭಾರತದ ಮಿತ್ರ ರಾಷ್ಟ್ರವಾದ ನೇಪಾಳಕ್ಕೆ ಹೋಗಿದ್ದರು. ಅಲ್ಲಿ ತಮ್ಮ ಪತ್ರಕರ್ತ ಸ್ನೇಹಿತರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ತಪ್ಪೇನಿದೆ..? ಇದು ನಮ್ಮ ಸಂಸ್ಕೃತಿಯ ಪ್ರತೀಕ. ಇದು ಅಪರಾಧವಲ್ಲ. ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗೋದನ್ನೂ ಬಿಜೆಪಿ ಅಪರಾಧ ಎಂದು ಪರಿಗಣಿಸುವ ಸಾಧ್ಯತೆ ಇದೆ ಎಂದು ಅವರು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರವಾಗಿಯೂ ಹಲವು ಟ್ವೀಟ್ ಮಾಡಲಾಗಿದ್ದು, ಅವರು ತಮ್ಮ ಖಾಸಗಿ ಸಮಯವನ್ನು ಕಳೆಯಲು ಹೋಗಿದ್ದರು, ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

ಸೋಮವಾರ ರಾಹುಲ್ ಗಾಂಧಿ ಅವರು ನೇಪಾಳ ರಾಜಧಾನಿ ಕಾಠ್ಮಂಡುಗೆ ಭೇಟಿ ನೀಡಿದ್ದರು. ಅವರ ಜೊತೆ ಮೂವರು ಗೆಳೆಯರೂ ಇದ್ದರು. ಈ ಕುರಿತಾಗಿ ಕಾಠ್ಮಂಡು ಪೋಸ್ಟ್‌ನಲ್ಲಿ ವರದಿ ಕೂಡಾ ಪ್ರಸಾರವಾಗಿತ್ತು.

ಲುಂಬಿಣಿ ವಸ್ತು ಸಂಗ್ರಹಾಲಯದ ಕಾರ್ಯಕಾರಿ ನಿರ್ದೇಶಕ ಹಾಗೂ ಸಿಎನ್‌ಎನ್‌ನ ಮಾಜಿ ಪತ್ರಕರ್ತ ಸುಮ್ನಿಮಾ ಉದಾಸ್ ಅವರು ನೇಪಾಳಿ ಪ್ರಜೆಯಾಗಿದ್ದು, ರಾಹುಲ್ ಗಾಂಧಿ ಅವರ ಆಪ್ತ ಸ್ನೇಹಿತರು. ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಹುಲ್ ಗಾಂಧಿ ನೇಪಾಳಕ್ಕೆ ತೆರಳಿದ್ದರು. ಮಾಧ್ಯಮ ಮಾಹಿತಿಗಳ ಪ್ರಕಾರ, ಮಂಗಳವಾರ ಮದುವೆ ನಡೆಯಲಿದ್ದು, ಗುರುವಾರ ಆರತಕ್ಷತೆ ಕಾರ್ಯಕ್ರಮ ಆಯೋಜನೆಯಾಗಿದೆ.

Donate Janashakthi Media

Leave a Reply

Your email address will not be published. Required fields are marked *