ನವದೆಹಲಿ: ನೀಟ್ ಪೇಪರ್ ಸೋರಿಕೆ ಸಂಬಂಧ ಲೋಕಸಭೆಯಲ್ಲಿ ವಿಷಯವನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆ ಅವರ ಮೈಕ್ ಆಫ್ ಮಾಡಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿ,ಈ ಸಂಬಂದ ವಿಡಿಯೋವನ್ನು ಕಾಂಗ್ರೆಸ್ ತನ್ನ ಅಧಿಕೃತ ಖಾತೆ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ. ಚರ್ಚೆ
ಇನ್ನು ರಾಹುಲ್ ಗಾಂಧಿ ತಮ್ಮ ಮಾತಿನ ವೇಳೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮೈಕ್ರೊಫೋನ್ ಕೇಳಿಸುವುದಕ್ಕಾಗಿ ವಿನಂತಿಸುತ್ತಿರುವುದು ಕಂಡುಬಂದಿದೆ. ನೀಟ್ ವಿವಾದದ ಬಗ್ಗೆ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮುಂಗಾರು ಮಳೆ : ರೈತರ ಮುಖದಲ್ಲಿ ಖುಷಿ
ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಓಂ ಬಿರ್ಲಾ, ಯಾವುದೇ ಸಂಸದರ ಮೈಕ್‌ಗಳನ್ನು ಸ್ವಿಚ್ ಆಫ್ ಮಾಡುವಂತಹ ನಿಯಂತ್ರಣವನ್ನು ತಾವು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚರ್ಚೆಯು ರಾಷ್ಟ್ರಪತಿಗಳ ಭಾಷಣದ ಮೇಲೆ ಇರಬೇಕು. ಇತರ ವಿಷಯಗಳನ್ನು ಸದನದಲ್ಲಿ ದಾಖಲಿಸಲಾಗುವುದಿಲ್ಲ ಎಂದು ಬಿರ್ಲಾ ಹೇಳಿದರು.
ಒಂದೆಡೆ ಪ್ರಧಾನಿ ನರೇಂದ್ರ ಮೋದಿ ನೀಟ್ ಬಗ್ಗೆ ಏನೂ ಹೇಳುತ್ತಿಲ್ಲ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸದನದಲ್ಲಿ ಯುವಕರ ಪರ ದನಿ ಎತ್ತಿದರೆ ಇದನ್ನು ಹತ್ತಿಕ್ಕಲು ಷಡ್ಯಂತ್ರ ರೂಪಿಸಲಾಗುತ್ತಿದೆ. ಮೈಕ್ ಸ್ವಿಚ್ ಆಫ್ ಮಾಡುವಂತಹ ನೀಚ ಕೆಲಸವನ್ನು ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ನೋಡಿ: ಅಕಾಡೆಮಿಗಳ ಮೇಲೆ ರಾಜಕಾರಣದ ಕರಿ ನೆರಳು! Janashakthi Media