ನವ ದೆಹಲಿ: ಪ್ರಸ್ತುತ ಕೋವಿಡ್ ಉಲ್ಬಣವನ್ನ ತಡೆಗಟ್ಟಲು ಸರಕಾರವು ಅನುಸರಿಸುತ್ತಿರುವ ನೀತಿಗಳು ಒಂದು ತುಘಲಕ್ ಮಾದರಿ ಲಾಕ್ಡೌನ್ ,ಎರಡನೇಯದು ಘಂಟೆ ಬಾರಿಸಿ, ಮೂರನೇಯದು ದೇವರನ್ನು ಸ್ತುತಿಸುವುದಾಗಿ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಈ ಬಗ್ಗೆ ಸುದ್ದಿಮಾಡಿರುವ ಎನ್ಡಿಟಿವಿಯು ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಬಗ್ಗೆ ರಾಹುಲ್ ಗಾಂಧಿ ಸರಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ವಾರದ ಆರಂಭದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ಜಪಾನ್ನಲ್ಲಿ ಬಳಸುವ ಕೋವಿಡ್ ಲಸಿಕೆಗಳಿಗೆ ತುರ್ತು ಅನುಮೋದನೆ ನೀಡಬೇಕೆಂದು ರಾಹುಲ್ ಗಾಂಧಿ ಸರಕಾರಕ್ಕೆ ಒತ್ತಾಯಿಸಿದ್ದರು.
ಇದನ್ನು ಓದಿ: ರಾಜ್ಯದಲ್ಲಿ ದಾಖಲೆ ಬರೆದ ಕೊರೊನಾ : ಒಂದೇ ದಿನ 14 ಸಾವಿರ ಪ್ರಕರಣಗಳು ಪತ್ತೆ
ವೈಜ್ಞಾನಿಕವಾಗಿ ಮತ್ತು ಸಮಗ್ರವಾಗಿ ಯೋಜನೆ ರೂಪಿಸದ ಕೇಂದ್ರ ಸರಕಾರವು ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದೆ. ಇದರಿಂದ, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಕಳೆದ ವರ್ಷ ಮೋದಿ ಘೋಷಿಸಿದ ʻತಾಲಿ-ಥಾಲಿʼ ಕರೆಗೆ ಜನರೂ ಸ್ಪಂದಿಸಿದರೂ ಚಪ್ಪಾಳೆ ತಟ್ಟಿದರು, ಗಂಟೆ ಬಾರಿಸಿದರು, ಶಂಖ ಊದಿದರು ಆದರೂ ಕೊರೊನಾ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಸರಕಾರದ ವಿರುದ್ಧ ತರಾಟೆಗೆ ತೆಗೆದುಕೊಂಡಿತ್ತು.
ಇದನ್ನು ಓದಿ: ಯಾರಿಗೆ ವಯಸ್ಸಾಗಿರುತ್ತೋ ಅವರು ಸಾಯ್ತರೆ ಬಿಡಿ’ ಬಿಜೆಪಿ ಸಚಿವನ ವಿವಾದಾತ್ಮಕ ಹೇಳಿಕೆ
ದಾಖಲೆ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವ ಈ ಸಂದರ್ಭದಲ್ಲಿ ಆತಂಕಕಾರಿಯಾದ ಬೆಳವಣಿಗೆಗಳು ದೇಶದಲ್ಲಿ ಸಂಭವಿಸುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳು, ಆಮ್ಲಜನಕ, ಔಷಧಿಗಳು ಮತ್ತು ಲಸಿಕೆಗಳು ತೀವ್ರತೀರಿಯ ಕೊರತೆ ಎದುರಾಗುತ್ತಿವೆ ಎಂದು ಟೀಕಿಸಿದ್ದರು.