ಪ್ರಧಾನಿ ಮೋದಿಯ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ನಡೆದಿದೆ ಎಂದ ರಾಹುಲ್‌ಗಾಂಧಿ

ನವದೆಹಲಿ: ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿಯ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ನಡೆದಿದೆ.ಪ್ರಧಾನಿ ಮೋದಿಯವರ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ನಡೆದಿದೆ. 20ಕ್ಕೂ ಹೆಚ್ಚು ಪ್ರಕರಣಗಳಿವೆ, ಮನೆ ಕಿತ್ತುಕೊಂಡಿದೆ, ಇಡಿಯಿಂದ 55 ಗಂಟೆಗಳ ವಿಚಾರಣೆ‌ ಎದುರಿಸಿದ್ದೇನೆ‌ ಎಂದಿದ್ದಾರೆ.

ಲೋಕಸಭೆಯಲ್ಲಿ‌ ಮಾತನಾಡಿದ ಅವರು, ಅಧಿಕಾರ ಮತ್ತು ಸಂಪತ್ತಿನ ಕೇಂದ್ರೀಕರಣ, ಬಡವರು ಮತ್ತು ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ಆಕ್ರಮಣದ ಕಲ್ಪನೆಯನ್ನು ವಿರೋಧಿಸಿದವರನ್ನು ಹತ್ತಿಕ್ಕಲಾಗುತ್ತಿದೆ.ಅನೇಕ ವಿರೋಧ ಪಕ್ಷದ ನಾಯಕರ ಮೇಲೆ ವೈಯಕ್ತಿಕವಾಗಿ ಹಲ್ಲೆ ನಡೆಸಲಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಟೆರೇಸ್ ಕುಸಿದು 6 ವರ್ಷದ ಬಾಲಕ ಸಾವು

ಇನ್ನೂ ಕೆಲವು ನಾಯಕರು ಜೈಲಿನಲ್ಲಿದ್ದಾರೆ. ಅಧಿಕಾರ ಮತ್ತು ಸಂಪತ್ತಿನ ಕೇಂದ್ರೀಕರಣ, ಬಡವರು ಮತ್ತು ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ಆಕ್ರಮಣದ ಕಲ್ಪನೆಯನ್ನು ವಿರೋಧಿಸಿದವರು ಹತ್ತಿಕ್ಕಲ್ಪಟ್ಟರಾಗಿದ್ದಾರೆ.

ಒಂದು ಧರ್ಮವು ಧೈರ್ಯದ ಬಗ್ಗೆ ಮಾತನಾಡುವುದಿಲ್ಲ. ಎಲ್ಲಾ ಧರ್ಮಗಳು ಧೈರ್ಯದ ಬಗ್ಗೆ ಮಾತನಾಡುತ್ತವೆ.  ನಮ್ಮ ಮಹಾಪುರುಷರೆಲ್ಲರೂ ಅಹಿಂಸೆ ಮತ್ತು ಭಯವನ್ನು ಮುಗಿಸುವ ಬಗ್ಗೆ ಮಾತನಾಡಿದ್ದಾರೆ… ಆದರೆ, ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ, ಅಸತ್ಯದ ಬಗ್ಗೆಮಾತನಾಡುತ್ತಾರೆ… ಆಪ್ ಹಿಂದೂ ಹೋ ಹಿ ನಹೀ… ” ಎಂದು ರಾಹುಲ್ ಗಾಂಧಿ ಹೇಳಿದರು.

ಇದನ್ನೂ ನೋಡಿ: ಅಂಗನವಾಡಿಗಳಲ್ಲಿ LKG – UKG – ಯಾರಿಗೂ ಆತಂಕ ಬೇಡJanashakthi Media

Donate Janashakthi Media

Leave a Reply

Your email address will not be published. Required fields are marked *