ಪಿಣರಾಯಿ ವಿಜಯನ್‌ ಕುರಿತು ರಾಹುಲ್‌ ಗಾಂಧಿ ನೀಡಿದ ಹೇಳಿಕೆ ಬಿಜೆಪಿ ನಡೆಸುತ್ತಿರುವ ಕುತಂತ್ರಗಳನ್ನು ಬೆಂಬಲಿಸಿದಂತೆ –  ಬೃಂದಾ ಕಾರಟ್ 

ನವದೆಹಲಿ : ಕೇರಳದ ಪಾಲಕ್ಕಾಡಿನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ದ ನೀಡಿರುವ ಕ್ರೂರ, ಅವಿವೇಕದ ಹಾಗೂ ಖಂಡನಾರ್ಹ ಹೇಳಿಕೆಯನ್ನು ಸರಿಪಡಿಸಲು ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಿಸಬೇಕೆಂದು ಸಿಪಿಐಎಂ ಪೊಲಿಟ್‌ ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಹೇಳಿದ್ದಾರೆ. ಪಿಣರಾಯಿ

ಆರ್.ಎಸ್.ಎಸ್/ಬಿಜೆಪಿ ವಿರುದ್ಧ ಭಾರತದಲ್ಲಿ ನಡೆಯುತ್ತಿರುವ ಹೋರಾಟದ ಮೇರು ನಾಯಕರಲ್ಲಿ ಒಬ್ಬರಾಗಿರುವ ಪಿಣರಾಯಿ ವಿಜಯನ್ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಬೇಕಾಗಿತ್ತು ಎನ್ನುವ ರೀತಿಯಲ್ಲಿ ಕಾಂಗ್ರೆಸ್ ನ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ನಾವು ಅಂತಹ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಆದರೆ, ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ಮೋದಿ, ಇಡಿಯನ್ನು ಛೂ ಬಿಟ್ಟು ನಡೆಸುತ್ತಿರುವ ಕ್ರಮಗಳನ್ನು ಕಾಂಗ್ರೆಸ್ ಪಕ್ಷವು ಬೆಂಬಲಿಸುತ್ತದೆಯೇ ಎನ್ನುವುದಕ್ಕೆ ಉತ್ತರ ಕೊಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ಅವರ ಇಡೀ ಕುಟುಂಬ ಆರೋಪಕ್ಕೆ ಒಳಗಾಗಿತ್ತು, ಆದರೆ ಆ ಸಂದರ್ಭದಲ್ಲಿ ಗಾಂಧಿ ಕುಟುಂಬವನ್ನು ಜೈಲಿಗೆ ಹಾಕಬೇಕೆಂದು ಸಿಪಿಐ(ಎಂ) ಎಂದೂ ಕೇಳಿಲ್ಲ. ವಿರೋಧ ಪಕ್ಷಗಳನ್ನು ದ್ವೇಷ  ರಾಜಕೀಯ ಗುರಿಗೆ ಒಳಪಡಿಸುತ್ತಿರುವ ಆರ್.ಎಸ್.ಎಸ್./ಬಿಜೆಪಿ ಯ ಕ್ರಮಗಳ ಪರವಾಗಿ ನಾವೆಂದೂ ಇರಲಿಲ್ಲ. ಅರವಿಂದ ಕೇಜ್ರಿವಾಲ್ ಮತ್ತು ಹೇಮಂತ್ ಸೊರೇನ್ ಅವರ ಬಂಧನದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಸಿಪಿಐ(ಎಂ) ಮುಂಚೂಣಿಯಲ್ಲಿದೆ. ಅರ್.ಎಸ್.ಎಸ್./ಬಿಜೆಪಿಯ ಕೋಮುವಾದಿ ಹಾಗೂ ವಿಚ್ಛಿದ್ರಕಾರಿ ರಾಜಕೀಯದ ವಿರುದ್ಧದ ಹೋರಾಟದಲ್ಲಿ ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಂದುಗೂಡಿಸುವ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

Donate Janashakthi Media

Leave a Reply

Your email address will not be published. Required fields are marked *