ಬೆಂಗಳೂರು: ಎಐಸಿಸಿ ನಾಯಕ ರಾಹುಲ್ ಗಾಂಧಿ ವೈನಾಡು ಲೋಕಸಭಾ ಕ್ಷೇತ್ರದಿಂದ ಸಂಸದರಾಗಲು ಬಯಸಿ ಮತ್ತೊಮ್ಮೆ ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಈ ಕ್ಷೇತ್ರ ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ಪರ ಪ್ರಚಾರಕ್ಕೆ ಧುಮುಕಿದ್ದಾರೆ.
ರಾಹುಲ್ ಗಾಂಧಿ ಯಾವುದಕ್ಕೂ ಹೆದರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ಇನ್ನು ನಾಳೆ ರಾಹುಲ್ ಗಾಂಧಿ ಪರ ಪ್ರಚಾರಕ್ಕೆ ವೈನಾಡುಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೆರಳುತ್ತಿದ್ದು.
ಇದನ್ನು ಓದಿ : ಸುನೀತಾ ಕೇಜ್ರಿವಾಲ್ಗೆ ಎಎಪಿಯಿಂದ ಮಹತ್ವದ ಜವಾಬ್ದಾರಿ, ಪ್ರಧಾನಿ ತವರೂರಿಂದ ರಾಜಕೀಯ ಶುರು
ರಾಹುಲ್ ಗಾಂಧಿ ಒಬ್ಬ ಹೋರಾಟಗಾರ. ರಾಹುಲ್ ಗಾಂಧಿಯ ಪರಿಶ್ರಮ ಅವರಿಗೆ ತಕ್ಕ ಫಲ ನೀಡಲಿದೆ. ರಾಹುಲ್ ಗಾಂಧಿ ದೇಶದ ಸ್ಟ್ರಾಂಗ್ ಫೈಟರ್.ಎಂದು ಡಿಕೆಸಿ ವಿಶ್ವಾಸವ್ಯಕ್ತಪಡಿಸಿ, ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ 140 ಸೀಟ್ಗಳಿಗಿಂತ ಹೆಚ್ಚು ಗೆಲ್ಲುವುದಿಲ್ಲ ಎಂಬ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಡಿಕೆಶಿ ಸಮರ್ಥಿಸಿಕೊಂಡರು. ಮಂಡ್ಯ,ಕೋಲಾರದಲ್ಲಿ ಗಾಂಧಿ ಪ್ರಚಾರ ನಡೆಸಲಿದ್ದು, ರಾಹುಲ್ ಗಾಂಧಿ ಕರ್ನಾಟಕ ರಾಜ್ಕಕ್ಕೆ ಬಂದರೆ ನಾವು ಗೆದ್ದಂತೆ ಎಂದರು.
ಇದನ್ನು ನೋಡಿ : ಸ್ಕಿಂ ನೌಕರರ ಬದಕನ್ನು ಬೀದಿಗೆ ತಂದ ಬಿಜೆಪಿಯನ್ನು ಸೋಲಿಸುತ್ತೇವೆ – ಅಂಗನವಾಡಿ, ಬಿಸಿಯೂಟ, ಆಶಾ ನೌಕರರ ನಿರ್ಧಾರ