ಬೆಂಗಳೂರು: ಮತ ಕಳ್ಳತನದ ವಿರುದ್ಧ ನಗರದ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೇಸ್ ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ಈಗಾಗಲೇ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು, ಕಾಂಗ್ರೆಸ್ ನಾಯಕರು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದ ಓಟರ್ ಕರ್ನಾಟಕದಲ್ಲಿ ಮತದಾನ ಮಾಡಿದ್ದಾನೆ. ಈ ರೀತಿಯಲ್ಲಿ ಚುನಾವಣಾ ಅಕ್ರಮ ನಡೆದಿದೆ. ಲೋಕಸಭೆ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲೂ ಬಿಜೆಪಿ ಲೀಡ್ ಪಡೆದುಕೊಳ್ಳುತ್ತದೆ. ಆದರೆ ವಿಧಾನಸಭೆಯಲ್ಲಿ ಪಡೆಯುತ್ತಿಲ್ಲ. ಇದು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಮಹಾದೇವಪುರದಲ್ಲಿ 1 ಲಕ್ಷ ಅಕ್ರಮ ಮತ, ಸ್ಫೋಟಕ ದಾಖಲೆ ಬಿಡುಗಡೆ ಮಾಡಿದ ರಾಹುಲ್ ಗಾಂಧಿ
ಪ್ರತಿಭಟನೆಯಲ್ಲಿ ಮಾತನಾಡಿದ ಜಮೀರ್ ಅಹ್ಮದ್ ಖಾನ್ “ರಾಹುಲ್ ಗಾಂಧಿ ಚುನಾವಣಾ ಅಕ್ರಮದ ಬಗ್ಗೆ ಸುದೀರ್ಘವಾಗಿ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದ್ದಾರೆ. ಬೆಂಗಳೂರು ಸೆಂಟ್ರಲ್ ನಲ್ಲಿ ಮನ್ಸೂರ್ ಅಲಿ ಖಾನ್ ಕೊನೆಯ ಹಂತದವರೆಗೆ 70,000 ಲೀಡ್ ನಲ್ಲಿ ಇದ್ದರು. ಆದರೆ ಮಹಾದೇವಪುರದಲ್ಲಿ ಬಿಜೆಪಿಗೆ 1.15 ಲಕ್ಷ ಲೀಡ್ ಬಂತು. ಈ ಬಗ್ಗೆ ಅಧ್ಯಯನ ಮಾಡಿದಾಗ ಸತ್ಯ ಬಹಿರಂಗವಾಗಿದೆ” ಎಂದು ವಿವರಿಸಿದರು.
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ ” ವಿರೋಧ ಪಕ್ಷವನ್ನು ನಿರ್ನಾಮ ಮಾಡುವುದು ಬಿಜೆಪಿ ಗುರಿಯಾಗಿದೆ. ಪ್ರಜಾಪ್ರಭುತ್ವ ನಿರ್ನಾಮ ಮಾಡಲು ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ. ಬಿಹಾರದಲ್ಲಿ ಬೇಕಾ ಬಿಟ್ಟು ಮತದಾರರನ್ನು ಕಿತ್ತು ಹಾಕಲಾಗುತ್ತಿದೆ. ಮಹದೇವಪುರದಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಬಿಜೆಪಿಗೆ ಬೇಕು ಅಂದರೆ ಸೇರಿಸುತ್ತಾರೆ, ಬೇಡ ಎಂದರೆ ಕಿತ್ತು ಹಾಕಲಾಗುತ್ತದೆ. ಈ ಕೆಲಸವನ್ನು ಚುನಾವಣಾ ಆಯೋಗ ಮಾಡುತ್ತಿದೆ” ಎಂದು ಕಿಡಿಕಾರಿದರು.
ಕಾಂಗ್ರೆಸ್ ಶಾಸಕಿ ರೂಪಾ ಶಶಿಧರ್ ಮಾತನಾಡಿ, “ಮಹದೇವಪುರ ಒಂದೇ ಕ್ಷೇತ್ರದಲ್ಲಿ ಒಂದು ಲಕ್ಷ ಮತದಾರರನ್ನು ನೇಮಕ ಮಾಡಲಾಗಿದೆ. ಆದರೆ ರಾಜ್ಯಾದ್ಯಂತ ಎಷ್ಟು ಸೇರ್ಪಡೆ ಮಾಡಿರಬಹುದು. ಇಂತಹ ಕರಾಳ ಸತ್ಯವನ್ನು ಬಿಚ್ಚಿಡುವ ಕೆಲಸ ಮಾಡಬೇಕಿದೆ. ಅದನ್ನು ಕಾಂಗ್ರೆಸ್ ಮಾಡುತ್ತಿದೆ” ಎಂದರು.
ಇದನ್ನೂ ನೋಡಿ : ಜುಲೈ 24 | GST ನೋಟೀಸ್ ವಿರುದ್ಧ ಸಣ್ಣ ಉದ್ದಿಮೆದಾರರ ಪ್ರತಿಭಟನೆ Janashakthi Media
