ಒಂದು ವೇಳೆ ಈಗ ಚುನಾವಣೆ ನಡೆದರೆ ಬಿಜೆಪಿ ಸ್ಥಾನದಲ್ಲಿ ದೊಡ್ಡ ವ್ಯಾತ್ಯಾಸವೇನೂ ಆಗದು. ಆದರೆ 6 ಹೆಚ್ಚು ಸ್ಥಾನ ಗೆಲ್ಲಬಹುದು. ಆದರೆ ಶತಕ ಹೊಸ್ತಿಲಲ್ಲಿ ಎಡವಿರುವ ಕಾಂಗ್ರೆಸ್ ನೂರರ ಗಡಿ ದಾಟಲಿದೆ ಎಂದು ಸಮೀಕ್ಷೆ ಹೇಳಿದೆ.
ಲೋಕಸಭೆಗೆ ಈಗ ಚುನಾವಣೆ ನಡೆದರೆ ಎನ್ ಡಿಎ ಮೈತ್ರಿಕೂಟ 299 ಸ್ಥಾನ ಪಡೆಯಬಹುದು. ಆದರೆ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಒಂದು ಸ್ಥಾನ ಕಡಿಮೆ ಅಂದರೆ 233 ಸ್ಥಾನ ಗಳಿಸಬಹುದು.
2024ರ ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆಯಲು ವಿಫಲವಾದರೂ ಸತತ ಮೂರನೇ ಬಾರಿಗೆ ಎನ್ ಡಿಎ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿದೆ. ಕಳೆದೆರಡು ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್ ಚೇತರಿಕೆ ಕಂಡಿದೆ. ಒಂದು ವೇಳೆ ಈಗ ಚುನಾವಣೆ ನಡೆದರೆ ಏನಾಗಬಹುದು ಎಂದು ನಡೆದ ಸಮೀಕ್ಷೆಯಲ್ಲಿ ಅಚ್ಚರಿ ವಿಷಯಗಳು ಬೆಳಕಿಗೆ ಬಂದಿವೆ.
ಮುಂದಿನ ಪ್ರಧಾನಿ ಯಾರಾಗಬಹುದು ಎಂದು ಕೇಳಲಾದ ಪ್ರಶ್ನೆಗೆ ನರೇಂದ್ರ ಮೋದಿ ಶೇ49ರಷ್ಟು ಮತ ಪಡೆದು ಮೊದಲ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೇ.22.4ರಷ್ಟು ಮತ ಪಡೆದು ಎರಡನೇ ಸ್ಥಾನ ಗಳಿಸಿದ್ದಾರೆ. 2024ರ ಲೋಕಸಭಾ ಚುನಾವಣೆಗೂ ಮುನ್ನ ನಡೆದ ಸಮೀಕ್ಷೆಗೆ ಹೋಲಿಸಿದರೆ ಮೋದಿ 6 ಕಡಿಮೆ ಅಂಕ ಗಳಿಸಿದ್ದರೆ, ರಾಹುಲ್ ಗಾಂಧಿ 8 ಅಂಕ ಹೆಚ್ಚು ಗಳಿಸಿದ್ದಾರೆ.
ಸಿ ವೋಟರ್ಸ್ ಮೂಲಕ ಇಂಡಿಯಾ ಟುಡೆ ಮೂಡ್ ಆಫ್ ನೇಷನ್ ಹೆಸರಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ದೇಶಾದ್ಯಂತ 49,591 ಮಂದಿಯನ್ನು ಪ್ರಶ್ನಿಸಿದೆ. ಅಲ್ಲದೇ ಸಿ ವೋಟರ್ಸ್ ನಿಯಮಿತವಾಗಿ ಸಂಪರ್ಕ ಹೊಂದಿರುವ 95,782 ಮಂದಿಯ ಅಭಿಪ್ರಾಯ ಸಂಗ್ರಹಿಸಿದೆ,