ಬೆಂಗಳೂರು: ರಾಜ್ಯದಲ್ಲಿ ಹಿಜಾಬ್-ಶಾಲು ವಿವಾದದ ನಡುವೆ ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಆರ್. ಸ್ನೇಹಲ್ ಅವರನ್ನು ವರ್ಗಾವಣೆಗೊಳಿಸಲಾಗಿದೆ.
ಇತ್ತೀಚೆಗೆ ಉಡುಪಿ ಸರಕಾರಿ ಕಾಲೇಜಿನಲ್ಲಿ ಉಂಟಾಗಿದ್ದ ಹಿಜಬ್ & ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸಂಘರ್ಷ ನಡೆಯುತ್ತಿದೆ. ಇದರ ನಡುವೆ ಸರಕಾರ ಸಮವಸ್ತ್ರ ಕುರಿತು ಸುತ್ತೋಲೆ ಹೊರಡಿಸಿತ್ತು, ಇದರ ಬೆನ್ನಲ್ಲೆ ಸಮವಸ್ತ್ರ ಕಾನೂನು ಬಾಹಿರ ಎಂದು ಸ್ನೇಹಲ್ ಸುತ್ತೋಲೆ ಹೊರಡಿಸಿದ್ದರು. ಪರಿಣಾಮ ಸರ್ಕಾರ ನಿರ್ದೇಶಕಿಯನ್ನೇ ವರ್ಗವಣೆ ಮಾಡಿದೆ.
‘ಪಿಯು ಹಂತದಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿಲ್ಲ. ಕಾಲೇಜು ಆಡಳಿತ ಮಂಡಳಿಯವರು ಸಮವಸ್ತ್ರ ಕಡ್ಡಾಯಗೊಳಿಸಿರುವುದು ಕಾನೂನುಬಾಹಿರ’ ಎಂದು ಆದೇಶ ಹೊರಡಿಸಿದ್ದರು.
ಮೊದಲಿನಿಂದ ಜಾರಿಯಲ್ಲಿದ್ದ ಸಮವಸ್ತ್ರ ಮಾರ್ಗಸೂಚಿಯನ್ನು, ಇತ್ತೀಚ್ಚಿಗೆ ಸ್ನೇಹಲ್ ಆರ್. ಸುತ್ತೋಲೆಯಾಗಿ ಹೊರಡಿಸಿದ್ದರು. ಇದು ರಾಜ್ಯ ಸರಕಾರ ಹಾಗೂ ಸಂಘಪರಿವಾರಕ್ಕೆ ಹಿನ್ನೆಡೆಯಾಗಿತ್ತು. ಹಾಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸ್ನೇಹಲ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಎಂಬ ಆರೋಪ ಕೇಳಿ ಬಂದಿದೆ. ಅವರ ಸ್ಥಾನಕ್ಕೆ ಬೀದರ್ ಜಿಲ್ಲಾಧಿಕಾರಿ ರಾಮಚಂದ್ರರನ್ನು ನೇಮಿಸಿದೆ. ಸ್ನೇಹಲ್ ರವರಿಗೆ ಇನ್ನೂ ಸ್ಥಳ ನಿಯುಕ್ತಿ ಮಾಡಿಲ್ಲ.