ಧರ್ಮಸ್ಥಳ ಪ್ರಕರಣ: ಅನಾಥ ಶವ ಸಾಗಿಸುತ್ತಿದ್ದ ಆಯಂಬುಲೆನ್ಸ್ ಚಾಲಕರ ವಿಚಾರಣೆ

ಬೆಳ್ತಂಗಡಿ: ಧರ್ಮಸ್ಥಳ ವ್ಯಾಪ್ತಿಯಲ್ಲಿ ನೂರಾರು ಮೃತದೇಹಗಳನ್ನು ಹೂಳಲಾಗಿದೆ ಎಂಬ ಆರೋಪ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ಸ್‌ ಸೇರಿದಂತೆ ಹಲವರ ವಿಚಾರಣೆಯನ್ನು ಎಸ್‌ಐಟಿ ಮಾಡಿತ್ತು.

ಅದರಂತೆ ಈಗ ಅನಾಥ ಅಪರಿಚಿತರ ಶವಗಳನ್ನು ಸಾಗಿಸುತ್ತಿದ್ದ ಸಾಗಿಸಿದ ಹಿನ್ನೆಲೆಯಲ್ಲಿ ಇಬ್ಬರು ಆಯಂಬುಲೆನ್ಸ್ ಚಾಲಕರನ್ನು ವಿಶೇಷ ತನಿಖಾ ತಂಡ ವಿಚಾರಣೆ ನಡೆಸಿದೆ.

ಇಬ್ಬರು ಆಯಂಬುಲೆನ್ಸ್ ಚಾಲಕರನ್ನು ಎಸ್‌ಐಟಿ ವಿಚಾರಣೆ ಮಾಡಿದ್ದು, ಅವರಲ್ಲಿ ಒಬ್ಬರಾದ ಜಲೀಲ್ ಬಾಬ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ʻಅನಾಥ ಶವ ಸಿಕ್ಕಾಗ ಪೊಲೀಸರ ಸೂಚನೆ ಮೇರೆಗೆ ಹೆಣ ಸಾಗಿಸುವ ಕೆಲಸ ಮಾಡುತ್ತಿದ್ದೆ. ನಾನು 25 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ಇಲ್ಲಿಯವರೆಗೆ 1000ಕ್ಕೂ ಹೆಚ್ಚು ಶವಗಳನ್ನು ಸಾಗಿಸಿದ್ದೇನೆʼ ಎಂದು ಹೇಳಿದರು.

ಇದನ್ನೂ ಓದಿ: ನಾಪತ್ತೆಯಾಗಿದ್ದ ಅಂಗನವಾಡಿ ಕಾರ್ಯಕರ್ತೆ ಶವವಾಗಿ ಪತ್ತೆ; ಕೊಲೆ ಶಂಕೆ

ಚಿನ್ನಯ್ಯ ನಾನು ಒಟ್ಟಿಗೆ ಕೆಲಸ ಮಾಡಿದ್ದೇವೆ

ʻಅಪಘಾತವಾದಾಗ ಪಬ್ಲಿಕ್‌ನಿಂದ ಕರೆ ಬರುತ್ತದೆ. ಆಗ ಅಲ್ಲಿ ಹೋಗಿ ಶವಗಳನ್ನು ಸಾಗಿಸಿದ್ದೇವೆ ಅನಾಥ ಶವ ಸಿಕ್ಕಿದಾಗ ಪೊಲೀಸರು ಹೇಳುತ್ತಿದ್ದರು. ವೆನ್ಲಾಕ್ ಆಸ್ಪತ್ರೆಯಲ್ಲಿ ಜಾಗ ಇಲ್ಲದಿದ್ದಾಗ, ಅನಾಥ ಶವಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡುತ್ತಿದ್ದೆವು. ಅನಾಥ ಶವ ಸಿಕ್ಕಾಗ ಪೊಲೀಸರು ಫೋನ್ ಮಾಡಿ ಕರೆಸಿಕೊಳ್ಳುತ್ತಿದ್ದರು ಧರ್ಮಸ್ಥಳ ಆಸುಪಾಸು ಇದ್ದಂತಹ ನೂರಾರು ಅನಾಥ ಶವಗಳನ್ನು ಅವರ ಸೂಚನೆಯಂತೆ ನಾವು ಸಾಗಿಸಿದ್ದೇವೆ. ಚಿನ್ನಯ್ಯ ನಾನು ಒಟ್ಟಿಗೆ ಕೆಲಸ ಮಾಡಿದ್ದೇವೆ. ಚಿನ್ನಯ್ಯನನ್ನು ತುಂಬಾ ಸರಿ ನೋಡಿದ್ದೇನೆ. ಅನಾಥ ಶವಗಳು ಸಿಕ್ಕಿದಾಗ ಚಿನ್ನಯ್ಯ ಕೂಡ ಇರುತ್ತಿದ್ದಒಟ್ಟಿಗೆ ಶವ ತಂದು ಆಂಬ್ಯುಲೆನ್ಸ್‌ನಲ್ಲಿ ತಂದಿಟ್ಟಿದ್ದು ಇದೆ. ಹೆಣ ತರುವ ಸಂದರ್ಭದಲ್ಲಿ ಪೊಲೀಸರು ಇರುತ್ತಿದ್ದರು. ಹೆಣ ತೆಗೆಯುವಾಗ ಮಾಹಿತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಫೋಟೋ ಎಲ್ಲ ತೆಗೆದುಕೊಂಡು ಆನಂತರ ಹೆಣ ಸಾಗಿಸುತ್ತಿದ್ದೆವುʼ ಎಂದು ಜಲೀಲ್‌ ಹೇಳಿದರು.

ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯನ್ನು ಚುರುಕುಗೊಳಿಸಿದೆ. ಸಮೀರ್ ಎಂಡಿ, ಗಿರೀಶ್‌ ಮಟ್ಟಣ್ಣನವರ್‌, ಮಹೇಶ್‌ ತಿಮರೋಡಿ, ಸುಜಾತಾ ಭಟ್, ಜಯಂತ್‌ ಟಿ, ಕೇರಳ ಯೂಟ್ಯೂಬರ್‌ ಮನಾಫ್‌ ವಿಚಾರಣೆ ಮಾಡಿತ್ತು.

ಇದನ್ನೂ ನೋಡಿ: ಅರಳುವ ಮುನ್ನವೇ ಬಾಡಿ ಹೋದ ಹೂವು ಸೌಜನ್ಯ | ಮೇಘಾ Janashakthi Media

Donate Janashakthi Media

Leave a Reply

Your email address will not be published. Required fields are marked *