ರಾಯಚೂರು: ರಾಯಚೂರಿನಲ್ಲಿ ಪಿಡಿಒ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪ ಕೇಳಿಬಂದಿದ್ದು, ನೂರಾರು ಅಭ್ಯರ್ಥಿಗಳು ಆಕೋಶ ವ್ಯಕ್ತಪಡಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ 1 ಕೋಣೆಯಲ್ಲಿ 24 ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂರಿಸಲಾಗಿದೆ.
ಅಭ್ಯರ್ಥಿಗಳು ಸಿಂಧನೂರಿನಲ್ಲಿ 24 ಪ್ರಶ್ನೆ ಪತ್ರಿಕೆ ಬದಲು 12 ಪ್ರಶ್ನೆಪತ್ರಿಕೆ ಮಾತ್ರ ಕಳುಹಿಸಲಾಗಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ | ಚುನಾವಣಾ ಪೂರ್ವ ಸಮೀಕ್ಷೆ – ಇಂಡಿಯಾ ಕೂಟಕ್ಕೆ ಬಹುಮತ?
ಇಂದು ಪರೀಕ್ಷೆಗೆ ಹಾಜರಾಗದೇ ಪಿಡಿಒ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಅಭ್ಯರ್ಥಿಗಳು ರಸ್ತೆ ತಡೆದು ಕೆಪಿಎಸ್ ಸಿ ವಿರುದ್ಧ ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಬೀದರ್, ಕಲಬುರಗಿ ಹಾಗೂ ಯಾದಗಿರಿಯಿಂದ ಪರೀಕ್ಷೆ ಬರೆಯಲು ಅಭ್ಯರ್ಥಿಗಳು ಆಗಮಿಸಿದ್ದು, ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಸ್ಥಳಕ್ಕೆ ಸಿಂಧನೂರು ನಗರ ಠಾಣೆ ಪೊಲೀಸರು ಹಾಗೂ ತಹಶೀಲ್ದಾರ್ ಭೇಟಿ ನೀಡಿದ್ದು, “ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಯಾವುದೇ ಪರೀಕ್ಷಾ ಮೇಲ್ವಿಚಾರಕರು ತಪ್ಪೆಸಗಿರುವುದು ಕಂಡಬಂದಲ್ಲಿ ಅವರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು. ಯಾರೂ ನಿಮ್ಮ ಭವಿಷ್ಯಟದ ಜೊತೆಗೆ ಚೆಲ್ಲಾಟವಾಡುತ್ತಿಲ್ಲ. ಗಾಳಿಸುದ್ದಿಗೆ ಕೈಗೊಟ್ಟು ನಿಮ್ಮ ಭವಿಷ್ಯವನ್ನು ನೀವೇ ಹಾಳು ಮಾಡಿಕೊಳ್ಳಬೇಡಿ. ಪರೀಕ್ಷೆ ಬರೆಯಿರಿ. ಒಂದು ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದೇ ಆದಲ್ಲಿ, ಇಡೀ ರಾಜ್ಯದಲ್ಲಿ ಮರುಪರೀಕ್ಷೆ ನಡೆಯುತ್ತದೆ” ಎಂದು ಅಭ್ಯರ್ಥಿಗಳು ಪರೀಕ್ಷೆ ಬರೆಯುವಂತೆ ಮನವೊಲಿಸಲು ಪ್ರಯತ್ನಿಸಿದರು.
ಇದನ್ನೂ ನೋಡಿ: ಮರಕುಂಬಿ ದಲಿತ ದೌರ್ಜನ್ಯ ಪ್ರಕರಣ : ಆರೋಪಗಳಿಗೆ ಸಿಕ್ಕಿದ್ದು ತಾತ್ಕಾಲಿಕ ಜಾಮೀನು Janashakthi Media