ಚುನಾವಣಾ ಆಯೋಗ ಮೊದಲ ಎರಡು ಹಂತಗಳ ಮತದಾನದ ಅಂತಿಮ ವಿವರಗಳನ್ನು, ಮೊದಲನೇ ಹಂತದ ಮತದಾನದ 11 ದಿನಗಳು ಎರಡನೇ ಹಂತದ ಮತದಾನ ನಡೆದ ನಾಲ್ಕುದಿನಗಳ ವರೆಗೂ ಪ್ರಕಟಿಸಲಿಲ್ಲ. ಈ ಬಗ್ಗೆ ವ್ಯಾಪಕ ಆತಂಕ ವ್ಯಕ್ತವಾದ ನಂತರ ಎಪ್ರಿಲ್ 30ರಂದು ಆಯೋಗದ ಪತ್ರಿಕಾ ಹೇಳಿಕೆ ಬಂದಿದೆ. ಈಗಲೂ ಪ್ರತಿ ಸಂಸದೀಯ ಕ್ಷೇತ್ರದಲ್ಲಿ ನೋಂದಾಯಿಸಲಾದ ಒಟ್ಟು ಮತದಾರರ ಸಂಖ್ಯೆ ಆಯೋಗದ ವೆಬ್‌ಸೈಟ್‌ನಲ್ಲಿಲ್ಲ. ಎಪ್ರಿಲ್ 30ರಂದು ಪ್ರಕಟಿಸಿದ ಅಂಕಿ-ಅಂಶಗಳು ಕೂಡ ಶೇಕಡಾಗಳಷ್ಟೇ.
ಮೊದಲ ಹಂತದ ಮತದಾನ ಪುರುಷರಲ್ಲಿ 66.22% ಮತ್ತು ಮಹಿಳೆಯರಲ್ಲಿ 66.07% ಒಟ್ಟಾಗಿ 66.14%.
ಎರಡನೇ ಹಂತದ ಮತದಾನ ಪುರುಷರಲ್ಲಿ 66.99% ಮತ್ತು ಮಹಿಳೆಯರಲ್ಲಿ 66.42% ಒಟ್ಟಾಗಿ 66.71%.
ಇದನ್ನು ಓದಿ : ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಬ್ಲಿಂಕ್ ಮಾಡಿದ ಆಕ್ಷೇಪಾರ್ಹ ಫೋಟೋ: ದೂರು ದಾಖಲು
ಒಟ್ಟು ಮತದಾತರ ಸಂಖ್ಯೆಯನ್ನು ಕೊಡದಿದ್ದರೆ ಇದು ಅರ್ಥಹೀನ. ಸಾಮಾನ್ಯವಾಗಿ ಅಂತಿಮ ಶೇಕಡಾಗಳು, ಆರಂಭಿಕವಾಗಿ ಪ್ರಕಟಿಸಿದ ಶೇಕಡಾಗಳಿಗಿಂತ ಬಹಳ ಹೆಚ್ಚೇನೂ ಇರುವುದಿಲ್ಲ. ಆದರೆ ಈ ಬಾರಿ ಇವೂ ಗಮನಾರ್ಹವಾಗಿ, ಸುಮಾರು 5 % ದಷ್ಟು ಹೆಚ್ಚಿವೆ.
ಈ ರೀತಿಯ , ಅರ್ಥಹೀನ ಮತ್ತು ತಪ್ಪುದಾರಿಗೆಳೆಯುವ. ಸಂಖ್ಯೆಗಳು ಅಂತಿಮ ಫಲಿತಾಂಶಗಳಲ್ಲಿ ಕೈಚಳಕ ನಡೆಸಲು ಅನೇಕ ಬಾಗಿಲುಗಳನ್ನು ತೆರೆಯುತ್ತವೆ. ಪ್ರತಿ ಸಂಸದೀಯ ಕ್ಷೇತ್ರದ ಮತದಾರರ ಸಂಪೂರ್ಣ ಸಂಖ್ಯೆಯನ್ನು 2014 ರ ವರೆಗೆ ಮಾಡುತ್ತಿದ್ದಂತೆ ಏಕೆ ಪ್ರಕಟಿಸಲಾಗಿಲ್ಲ ಎಂದು ಕಾಂಗ್ರೆಸ್, ಸಿಪಿಐ(ಎಂ) ಮತ್ತು ಇತರ ಪಕ್ಷಗಳು ಪ್ರಶ್ನಿಸಿವೆ.
ಮತ ಎಣಿಕೆಯ ಸಮಯದಲ್ಲಿ ಒಟ್ಟು ಮತದಾರರ ಸಂಖ್ಯೆಯನ್ನು ಬದಲಾಯಿಸಬಹುದಾದ್ದರಿಂದ ನಿಜ ಫಲಿತಾಂಶಗಳನ್ನು ಬದಲಿಸಲು ಅವಕಾಶವಾಗುತ್ತದೆ ಎಂಬ ಆತಂಕಗಳು ಮುಂದುವರಿಯುತ್ತವೆ, ಚುನಾವಣಾ ಆಯೋಗ ಇದಕ್ಕೆ ಉತ್ತರಿಸಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದ್ದಾರೆ.
ಇದನ್ನು ನೋಡಿ : ಪೆನ್‌ಡ್ರೈವ್ ಪ್ರಕರಣ : ಬಿಜೆಪಿ ಮೌನಕ್ಕೆ ಕಾರಣವೇನು?ಸಂಧ್ಯಾ ಸೊರಬ ವಿಶ್ಲೇಷಣೆಯಲ್ಲಿ