ಬೆಂಗಳೂರು | ಪುರಾಣಗಳು ಅಂಧನಂಬಿಕೆಯಲ್ಲ, ಬೌದ್ಧಿಕ ಕೃತಿಗಳು: ಮುಕುಂದರಾಜ್‌ ಅಭಿಪ್ರಾಯ

ಬೆಂಗಳೂರು: ಪುರಾತನ ಭಾರತೀಯ ಸಾಹಿತ್ಯವನ್ನು ಕೇವಲ ಧಾರ್ಮಿಕ ಅಥವಾ ಪೌರಾಣಿಕ ದೃಷ್ಟಿಕೋನದಿಂದ ಮಾತ್ರ ನೋಡದೆ, ಅದರೊಳಗಿನ ವೈಜ್ಞಾನಿಕ ಚಿಂತನೆ ಮತ್ತು ತರ್ಕಬದ್ಧ ಆಲೋಚನೆಗಳನ್ನು ಅಧ್ಯಯನ ಮಾಡಬೇಕಾದ ಅಗತ್ಯವಿದೆ ಎಂದು ಚಿಂತಕ ಹಾಗೂ ವಿದ್ವಾಂಸ ಎಲ್‌.ಎನ್‌. ಮುಕುಂದರಾಜ್‌ ಅಭಿಪ್ರಾಯಪಟ್ಟರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ವಿಜ್ಞಾನ ಸಾಹಿತ್ಯ ಹಾಗೂ ಸಂವಹನ ಶಿಬಿರದಲ್ಲಿ ಅವರು ಗುರುವಾರ ಮಾತನಾಡಿದರು.

ಇದನ್ನೂ ಓದಿ : ಚಲನ ಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಅಧ್ಯಕ್ಷಸ್ಥಾನಕ್ಕೆ ಮೂವರ ನಾಮಪತ್ರ ಸಲ್ಲಿಕೆ

ಅವರು ಮಾತನಾಡುತ್ತಾ, ಆದಿಪುರಾಣದಲ್ಲಿ ಜೀವನ, ಪ್ರಕೃತಿ, ಕಾಲ, ಸೃಷ್ಟಿ ಹಾಗೂ ಮಾನವ ನಡವಳಿಕೆ ಕುರಿತು ಇರುವ ವಿವರಣೆಗಳು ಇಂದಿನ ವಿಜ್ಞಾನಿಕ ಚಿಂತನೆಗೆ ಹತ್ತಿರವಾಗಿವೆ ಎಂದು ಹೇಳಿದರು. ಪುರಾಣಗಳಲ್ಲಿ ರೂಪಕದ ಮೂಲಕ ಹೇಳಲ್ಪಟ್ಟ ಅನೇಕ ಅಂಶಗಳು ವೈಜ್ಞಾನಿಕ ತತ್ತ್ವಗಳ ಸಂಕೇತ ರೂಪಗಳು ಎಂದು ಅವರು ವಿವರಿಸಿದರು.

ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ್ ಅವರು ಶಿಬಿರವನ್ನು ಉದ್ಘಾಟಿಸಿದರು. ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 70 ಜನರು ಶಿಬಿರಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸದಸ್ಯರಾದ ಡಾ. ವಸುಂಧರಾ ಭೂಪತಿ ಅವರು ಶಿಬಿರದ ನಿರ್ದೇಶಕರಾಗಿ, ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸುಮಾ ಸತೀಶ್, ವಿಜ್ಞಾನ ಅಕಾಡೆಮಿಯ ಸಿಇಒ ಆನಂದ್ ಅವರು ಶಿಬಿರದ ಸಂಚಾಲಕರಾಗಿದ್ದರು. ‘ನಮ್ಮ ಆರೋಗ್ಯ ನಮ್ಮಿಂದಲೇ’ ಎಂಬ ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ವಿವಿಧ ವಿಷಯಗಳ ಕುರಿತ ಗೋಷ್ಠಿಗಳಲ್ಲಿ ಎಂ.ಎಸ್. ಆಶಾದೇವಿ, ಗುರುರಾಜ ಎಸ್. ದಾವಣಗೆರೆ, ಕೆ.ಎನ್. ಗಣೇಶಯ್ಯ ಮತ್ತು ನೇಮಿಚಂದ್ರ ಅವರು ಉಪನ್ಯಾಸ ನೀಡಿದರು.

ಇದನ್ನೂನೋಡಿ : ಲಾಲ್‌ಬಾಗ್‌ ಫ್ಲವರ್‌ ಶೋ| ಬಣ್ಣಬಣ್ಣದ ಹೂಗಳ ಚಿತ್ತಾರದಲ್ಲಿ ‘ತೇಜಸ್ವಿ ವಿಸ್ಮಯ’ Janashakthi Media

Donate Janashakthi Media

Leave a Reply

Your email address will not be published. Required fields are marked *