ಪುರಾಣ ಮತ್ತು ವಾಸ್ತವ (ಸಹಿಷ್ಣುತೆ ಹಾಗೂ ಅಸಹಿಷ್ಣುತೆಯ ಹಿನ್ನೆಲೆಯಿಂದ ಚರ್ಚೆ)
ಎನ್ ಚಿನ್ನಸ್ವಾಮಿ ಸೋಸಲೆ
ಈ ನೆಲದ ಮೂಲ ನಿವಾಸಿಗಳಾದ ಕಾರಣಕ್ಕಾಗಿ ಭಾರತ ಹಾಗೂ ಭಾರತೀಯರ ನಿಜ ಚರಿತ್ರೆಯನ್ನು ಸ್ಪಷ್ಟವಾಗಿ ಅರಿತ ನೀವು (ಅಂಬೇಡ್ಕರ್) ನಮ್ಮ ಪಾರಂಪರಿಕ ಸನಾತನೀಯ ಸಂವಿಧಾನವಾಗಿದ್ದ ಮನುಸ್ಮೃತಿ ಯನ್ನು ಬ್ರಿಟಿಷ್ ಭಾರತದಲ್ಲಿ ಶಿಕ್ಷಣ ಪಡೆದ ನೀವು ಬಹಿರಂಗವಾಗಿ ಸುಟ್ಟಿದ್ದೀರಿ. ಈ ಮೂಲಕ ಇತಿಹಾಸವನ್ನು ಮರೆಯದೆ ಇತಿಹಾಸವನ್ನು ನಿರ್ಮಿಸಿದ್ದೀವಿ ಎಂಬ ಬಹುದೊಡ್ಡ ಸಂದರ್ಭದಲ್ಲಿ ನೀವಿದ್ದೀರಿ. ಆದರೆ, ನಾವು ನೀವು ಇತಿಹಾಸವನ್ನೇ ಬರೆಯಬಾರದೆಂಬ ಕಾರಣಕ್ಕಾಗಿ ನಿಮಗೆ ಸತಶತಮಾನಗಳಿಂದಲೂ ಶಿಕ್ಷಣವನ್ನು ನೀಡಲಿಲ್ಲ. ಭಾರತೀಯರಾದ ನಿಮಗೆ ಆರಂಭದಿಂದಲೇ ಶಿಕ್ಷಣ ನೀಡಿದ್ದರೆ ನಾವು ನಮ್ಮ ಮನುಸ್ಪೃತಿಯ ಸಂವಿಧಾನದ ಮೂಲಕ ನಿಮ್ಮನ್ನು ಎರಡುವರೆ ಸಾವಿರ ವರ್ಷಗಳಿಂದ ಬಿಗಿ ಹಿಡಿತದಲ್ಲಿ ಆಳ್ವಿಕೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬ ಪ್ರಜ್ಞೆ ನಮಗಿತ್ತು . ಆ ಕಾರಣಕ್ಕಾಗಿ ಇಂದು “ನಮ್ಮ ಸಂವಿಧಾನ ನಮ್ಮ ಹೆಮ್ಮೆ” ಅಂತ ಹೇಳುತ್ತಿರುವ ನಿಮ್ಮ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ನಾವು ವಿರೋಧಿಸುತ್ತೇವೆ. ಅದು ನಮ್ಮ ಪಾರಂಪರಿಕ ಹಕ್ಕುಗಳನ್ನು ಕಿತ್ತುಕೊಂಡಿದೆ. ಈ ಕಾರಣಕ್ಕಾಗಿ ಅದನ್ನು ಬದಲಾಯಿಸುತ್ತೇವೆ, ಬದಲಾಯಿಸುವುದೇ ನಮ್ಮ ಏಕೈಕ ಗುರಿ, ಮುಂದುವರೆದು ನಿಮ್ಮ ಹಾಗೆ ನೇರವಾಗಿ ಸುಡಲು ಇಚ್ಛಿಸದೆ ನಾಲಕ್ಕು ಗೋಡೆಯ ಒಳಗೆ ಕುಳಿತು ಗೌಪ್ಯವಾಗಿ ಸುಡುತ್ತಿದ್ದೇವೆ ಇಂದು ಹೇಳುತ್ತಿದ್ದಾರೆ. ಏಕೆಂದರೆ ಇವರಿಗೆ ನಮ್ಮ ಹಾಗೆ ಮುಖಮುಖಿ ನಿಂತು ಯುದ್ಧ ಮಾಡುವ ಶಕ್ತಿ ಇಲ್ಲ. ಶತಮಾನಗಳಿಂದಲೂ ಇವರು ಬೆನ್ನಿಗೆ ಚೂರಿ ಹಾಕುವ ಕೆಲಸವನ್ನೇ ಮಾಡಿದ್ದು ಹಾಗೂ ಇಂದಿಗೂ ಮಾಡುತ್ತಿರುವುದು. ಪುರಾಣ ಮತ್ತು ವಾಸ್ತವ
ಬಹು ಮುಖ್ಯವಾಗಿ ಅಂಬೇಡ್ಕರ್ ಅವರು ಒಡಲಾಳದಿಂದ ಭಾರತ ಹಾಗೂ ಭಾರತೀಯರಿಗಾಗಿ ಬರೆದ ಸಂವಿಧಾನ “ಸರ್ವರಿಗೂ ಸಮಪಾಲು- ಸರ್ವರಿಗೂ ಸಮ ಬಾಳು ” ಎಂಬ ಮೂಲತತ್ವದ ಆಧಾರದಲ್ಲಿ ಇಂದಿನ ಪ್ರಜಾಪ್ರಭುತ್ವ ಭಾರತದಲ್ಲಿ ಆಳ್ವಿಕೆಯ ಆಧಾರವಾಗಿದೆ ಎಂಬುವುದೇ ಒಂದು ವರ್ಗಕ್ಕೆ ಸಹಿಸಲು ಅಸಾಧ್ಯವಾಗಿದೆ. ಭಾರತದ ನಿಜ ಧರ್ಮ ಗ್ರಂಥವಾದ ಸಂವಿಧಾನದ ಆಧಾರದ ಮೇಲೆ ಶಿಕ್ಷಣ ಪಡೆದು ದೇಶವನ್ನು ಸರ್ವ ವಿಧದಲ್ಲಿಯೂ ಅಭಿವೃದ್ಧಿಪಡಿಸುತ್ತಿರುವ ಹಾಗೂ ” ಭಾರತದ ಪ್ರಜೆಗಳಾದ ನಾವು ” ಎಂಬ ಶೀರ್ಷಿಕೆಯಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಉಂಟುಮಾಡಿದ ನೂತನ ಸಂವಿಧಾನ ದಿಂದ ನಮ್ಮ ಪಾರಂಪರಿಕ ಏಕಮುಖ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ ಎಂಬ ಕಾರಣ ಪ್ರಬಲವಾಗಿ ವಿರೋಧಿಸುವುದು ಒಂದಾದರೆ – ಮತ್ತೊಂದು, ನಮ್ಮ ಸಂಪ್ರದಾಯವನ್ನು ವಿರೋಧಿಸಿದ ಹಾಗೂ ಸನಾತನೀಯ ನಮ್ಮ ಮನುಸ್ಮೃತಿ ಸಂವಿಧಾನವನ್ನು ಸುಟ್ಟವ – ನಾವು ನಮ್ಮ ಮನುಸ್ಮೃತಿ ಸಂವಿಧಾನದ ಆಧಾರದಲ್ಲಿ ಸೃಷ್ಟಿಸಿದ ವರ್ಣವ್ಯವಸ್ಥೆಯ ಆಚೆ ಇದ್ದ ಅಸ್ಪೃಶ್ಯ ಸಮುದಾಯದ ಅಂಬೇಡ್ಕರ್ರವರು ಬರೆದಿದ್ದು ಹಾಗೂ ಜಾರಿಗೊಳಿಸಿದ್ದು ಎಂಬ ಪ್ರಬಲ ಕಾರಣಕ್ಕಾಗಿ.
ನಾವು ಬೆಳಗಾದರೆ ಯಾರ ಮುಖವನ್ನು ನೋಡಬಾರದೆಂಬ ನಿರ್ಬಂಧನೆಯನ್ನು ಹಾಕಿಕೊಂಡಿದ್ದೇವೆಯೋ ಅವರು ಬರೆದ ಸಂವಿಧಾನವನ್ನು ಹಾಗೂ ಅವರ ಹೆಸರನ್ನು ನಮ್ಮ ಪಾರಂಪರಿಕ ಹಿನ್ನೆಲೆಯ ಶಾಶ್ವತ “ಮಾನಸಿಕ ಅಸ್ಪೃಷ್ಟತೆ ” ಯ ಹಿನ್ನೆಲೆಯಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವ ಸಂವಿಧಾನವನ್ನು ಒಂದು ಅಕ್ಷರವನ್ನು ಬದಲಾವಣೆ ಮಾಡದೆ ನಮ್ಮ ಸಮುದಾಯದವರೇ ಬರೆದಿದ್ದರೆ ಖಂಡಿತವಾಗಿಯೂ ಈ ಸಂವಿಧಾನವನ್ನು ಹಾಗೂ ಬರೆದವರನ್ನು ನಾವು ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಹಿನ್ನೆಲೆಯಿಂದ ಒಪ್ಪಿಕೊಳ್ಳುತ್ತಿದ್ದೆವು. ಆದರೆ ಇಂದು ನಮ್ಮನ್ನು ಆಳ್ವಿಕೆ ಮಾಡುತ್ತಿರುವುದು ನಾವು ನೋಡಲು ಇಚ್ಚಿಸದ ಸಮುದಾಯದ ಬರೆದದ್ದು ಎಂಬ ಕಾರಣಕ್ಕಾಗಿ. ಅಂದರೆ, ಸಂವಿಧಾನವನ್ನು ಒಂದು ಸಂಪ್ರದಾಯ ವರ್ಗ ವಿರೋಧಿಸುತ್ತಿರುವುದು ಅಲ್ಲಿನ ಪ್ರಗತಿದಾಯಕ ಚಿಂತನೆಗಳಿಂದಲ್ಲ ಬದಲಿಗೆ ಅಸ್ಪೃಶ್ಯ ಸಮುದಾಯದ ಅಂಬೇಡ್ಕರ್ ಅವರು ಬರೆದದ್ದು ಎಂಬ ಕಾರಣ ಮುಖ್ಯವಾದುದು ಎಂಬುದು ಸ್ಪಷ್ಟ. ಪುರಾಣ ಮತ್ತು ವಾಸ್ತವ
ಮೇಲಿನ ಇಂತಹ ವಿತಂಡವಾದವನ್ನು ಶತಶತಮಾನಗಳಿಂದಲೂ ಭಾರತದ ಇತಿಹಾಸದ ಅರಿವಿಲ್ಲದವರು ಹೇಳುತ್ತಿರುವ ಮಾತು. ಈ ಮಾತುಗಳು ಎರಡುವರೆ ಸಾವಿರ ವರ್ಷಗಳ ಭಾರತದ ಅಜ್ಞಾನದ ಚರಿತ್ರೆಯನ್ನು ಅನಾವರಣಗೊಳಿಸುತ್ತಿದೆ.
ಇದನ್ನೂ ಓದಿ : ದೇವರ ಹೆಸರಿನಲ್ಲಿ ಸೃಷ್ಟಿಯಾಗುವ ಭಯಾನಕ ವಿಕೃತಿ ಪುರಾಣ ಮತ್ತು ವಾಸ್ತವ
ಭಾರತೀಯತೆ ತುಂಬಿದ ಜ್ಞಾನವಂತ ಬಾಬಾಸಾಹೇಬರು ಬಹಿರಂಗವಾಗಿ ಸುಟ್ಟಿದ್ದು ಅಜ್ಞಾನದ ಅವೈಜ್ಞಾನಿಕ- ಜನ ವಿರೋಧಿ ಸಂವಿಧಾನವನ್ನು . ಈ ಅಜ್ಞಾನವಂತರ ಸಂವಿಧಾನವೇ ದೇವರಿಗೆ ಸಮಾದ ಪರಮೋಚ್ಚ ಸಂವಿಧಾನವೆಂದು ಹೇಳಿ ಬಹುಜನರನ್ನು ಮೋಸಗೊಳಿಸಿದವರ ಅಜ್ಞಾನದ ಮನಸ್ಸುಗಳನ್ನು ಜ್ಞಾನದ ಮನಸ್ಸಿನಿಂದ ನೇರವಾಗಿ – ಲಕ್ಷಾಂತರ ಜನರ ಸಮ್ಮುಖದಲ್ಲಿ ಬಾಬಾ ಸಾಹೇಬ್ರು ಏಕ ಸೇನಾನಿಯಾಗಿ ಮುಂದೆ ನಿಂತು ಸುಟ್ಟರು. ಆದರೆ ಅಸಮಾನತೆ ಮತ್ತು ಅಜ್ಞಾನ ಸಂವಿಧಾನದ ವಾರಸುದಾರದ ನೀವು ಈಗ ಬದಲಾಯಿಸುತ್ತೇವೆ – ಸುಡುತ್ತೇವೆ ಎಂದು ಸ್ವಾರ್ಥ ಸಂದರ್ಭದಲ್ಲಿ ಮಾತ್ರ ಹೇಳಿಕೊಂಡು ಮೆರಿಯುತ್ತಿರುವುದು ಮತ್ತದೇ ಧರ್ಮ ಹಾಗೂ ಧರ್ಮಲೇಪಿತ ದೇವರ ಹಿನ್ನೆಲೆ ಇಂದಲೆ. ಅಂದು, ನಾಲ್ಕು ಜನ ಸೇರಿಕೊಂಡು ಬಹುಜನರಿಗೆ ದೇವರು ಎಂಬ ಅಜ್ಞಾನದ ಮೂರ್ತಿಯನ್ನು ಮುಂದಿಟ್ಟು ಭಾವನಾತ್ಮಕವಾಗಿ ಸೆಳೆದುಕೊಂಡ ಜನವರ್ಗವೇ ಇಂದು ಬಾಗಿಲ ಹಿಂದಿ ಸೇರಿಕೊಂಡು ಕೋತಿ ಎಂಡ ಕುಡಿತರೆ ಮಾಡುವ ಚೇಷ್ಟೀಯಂತೆ ಮಾಡುತ್ತಿದ್ದಾರೆ.
ಜ್ಞಾನದ ಹಿನ್ನೆಲೆಯಿಂದ ಭಾರತ ಹಾಗೂ ಭಾರತೀಯರನ್ನು ನಿಜ ರಾಷ್ಟ್ರೀಯತೆಯ ಹಿನ್ನೆಲೆಯಿಂದ ಪ್ರತಿಯೊಬ್ಬರ ಮನ ಹಾಗೂ ಮನೆಗಳಲ್ಲಿ ಮಾತು ಕಲಿಸಿದ ಹಾಗೂ ಮಾತನಾಡಿಸಿದ ಅಂಬೇಡ್ಕರ್ ರವರು ಬರೆದ ಸಂವಿಧಾನವನ್ನು ಈ ಕಾರಣಕ್ಕಾಗಿ ಇವರು ಅಂದು ಇಂದು ಮುಂದೆಯೂ ಸಹ ಒಪ್ಪುವುದಿಲ್ಲ. ಹೀಗೆ ಒಪ್ಪದಿರುವುದಕ್ಕೆ ಅಶೋಕನ ಕಾಲದಿಂದ ಮೊದಲು ಕೊಂಡು ಸ್ವಾತಂತ್ರ್ಯ ಭಾರತದವರೆಗೂ ಭಾರತದಲ್ಲಿ ಬಹುದೊಡ್ಡ ಚರಿತ್ರೆಯ ಸಂದರ್ಭಗಳೇ ಸಾಕ್ಷಿಯಾಗಿವೆ.
ನಿಜ ಧರ್ಮದ ಅನುಸಾರ ಸರ್ವ ಜನಾಂಗವನ್ನು ಸಮಾನಾಗಿ ಕಂಡು ಜನಸೇವೆ ಮಾಡಿದ ಸಾಮ್ರಾಟರು ಹಾಗೂ ಸಾಮ್ರಾಜ್ಯಗಳು ಭಾರತ ಚರಿತೆಯಲ್ಲಿ ಗೌರವದವು. ಆದರೆ ಧರ್ಮ ವಿರೋಧಿ ಹಿನ್ನೆಲೆಯಿಂದ ಭಾರತದ ವಾರಸುಗಾರಿಕೆಯ ಧರ್ಮವನ್ನು ನಾಶ ಮಾಡಿದವರು ಹಾಗೂ ಅಸ್ಪೃಶ್ಯತೆ ಹಿನ್ನೆಲೆಯಿಂದ ಬಹುದೊಡ್ಡ ಕಂದಕವನ್ನು ಸೃಷ್ಟಿ ಮಾಡಿದವರ ಪರವಾಗಿ ಆಳ್ವಿಕೆ ಮಾಡಿದ ಸಾಮ್ರಾಟರು ಹಾಗೂ ಸಾಮ್ರಾಜ್ಯಗಳು “ಸುವರ್ಣ ಯುಗ ” ಎಂದು ವೈಭವದಿಂದ ಬರಿಸಿಕೊಂಡು ಭಾರತ ಚರಿತ್ರೆಯಲ್ಲಿ ಕಂಗೊಳಿಸಿದವು. ಇವುಗಳ ಕಂಗೋಳಿವಿಕೆಗೆ ಹಾಗೂ ಈ ಕಂಗೊಳಿಕೆಯನ್ನು ಯಥಾವತ್ತಾಗಿ ಕಾಪಾಡಿಕೊಳ್ಳಲು ನಿತ್ಯ ಸುಳ್ಳುಗಳ ಮೇಕಪ್ ಮಾಡಬೇಕು ಹಾಗೂ ಅದು ಬೆತ್ತಲಾಗಿದ್ದರೂ ಸಹ ಬಟ್ಟೆ ಹಾಕಿದೆ ಎಂದು ನಂಬಿಸಬೇಕು. ಆದರೆ, ನಿಜ ಧರ್ಮದ ಆಧಾರದಲ್ಲಿ ಜನರನ್ನು ಹೊಕ್ಕುರುಳಿನಿಂದ ಆಳ್ವಿಕೆ ಮಾಡಿದ ಸಾಮ್ರಾಟರು ಹಾಗೂ ಸಾಮ್ರಾಜ್ಯಗಳ ಚರಿತ್ರೆ ಮೇಕಪ್ ಇಲ್ಲದಿದ್ದರೂ ತನಗೆ ಬೇಕಾದ ಬಟ್ಟೆಯನ್ನು ಮಾತ್ರ ಹಾಕಿಕೊಂಡು ಜನರಿಗೆ ಸುಂದರವಾಗಿ ಕಾಣಿಸುತ್ತಿದೆ. ಇದಕ್ಕೆ ಅಶೋಕ ಹಾಗೂ ಅವನ ಜನಪರ ಕಾರ್ಯಗಳು – ಬಸವಣ್ಣ ಹಾಗೂ ಶರಣ ಶರಣೀಯರ ಬೌದ್ಧಿಕ ಸಿದ್ಧಾಂತಗಳು ಸಾಕ್ಷಿಯಾಗಿದೆ ಹಾಗೂ ಇಂದಿಗೂ ಜೀವಂತವಾಗಿವೆ. ಈ ಮಾದರಿಯಲ್ಲಿಯೇ ಅಂಬೇಡ್ಕರ್ ಅವರ ಸಂವಿಧಾನ ಯುಗಯುಗಗಳಿಗೂ ಜೀವಂತವಾಗಿರುತ್ತದೆ. ಏಕೆಂದರೆ ಈ ಸಂವಿಧಾನವನ್ನು ಭಾರತ ನೆಲದ ” ಜೀವಂತ ಇರುವ ವ್ಯಕ್ತಿ ” ಬರದದ್ದೇ ಹೊರತು – ಭಾರತಕ್ಕೆ ಆಗಮಿಸಿ ತಾವು, ಇಲ್ಲಿ ವೈಭವವಾಗಿ ಬದುಕಲು ಬಹುಜನರನ್ನು ಜೀವಂತ ಇದ್ದ ಹಾಗೆ ಸಾಯಿಸಿ ಅವರ ಅಬೌಧಿಕತೆಯ ಹೆಣದ ಮೇಲೆ ಬರೆದು ಸಂವಿಧಾನವಲ್ಲ. ಸಂಪ್ರದಾಯ ಬಯಸುವವರ ಅಲಿಖಿತ ಸಂವಿಧಾನದಲ್ಲಿ ದೇವರು ಮಾತ್ರ ಮಾತನಾಡಿದ್ದು – ಅಂಬೇಡ್ಕರ್ ರವರು ಬರೆದ ಸಂವಿಧಾನದಲ್ಲಿ ಕಾಯಕದಲ್ಲಿ ದೇವರನ್ನು ಕಾಣುವ ಜನರು ಮಾತನಾಡಿದ್ದು. ದೇವರು ಮಾತನಾಡುವ ಸಂವಿಧಾನಕ್ಕೆ ಬೆಲೆ ಬೇಕು ಎಂದು ಕೇಳುವವರು ಜನರ ಮಾತನ್ನು ನಿಲ್ಲಿಸುತ್ತಾರೆ ಎಂಬ ಪ್ರಜ್ಞೆ ಇರಬೇಕು. ಜನರ ಮಾತನ್ನು ಬಯಸುವ ಸಂವಿಧಾನ ದೇವರ ಬಾಯಲ್ಲಿ ಮುಚ್ಚಿಸುತ್ತದೆ ಎಂಬ ಪ್ರಜ್ಞೆಯೂ ಇರಬೇಕು. ಪುರಾಣ ಮತ್ತು ವಾಸ್ತವ
ಇದನ್ನೂ ಓದಿ : “ಭಾರತದಲ್ಲಿ ದೇವರು-ದೇವಸ್ಥಾನ-ದಲಿತರ ದೇವಾಲಯ ಪ್ರವೇಶ ನಿಷೇಧದ : ಚಾರಿತ್ರಿಕ ಹಾಗೂ ಸಮಕಾಲಿನ ಪ್ರಶ್ನೆಗಳು “ ಪುರಾಣ ಮತ್ತು ವಾಸ್ತವ
ಒಂದು ವರ್ಗಕ್ಕೆ ಸಂವಿಧಾನ ನಮ್ಮ ಪಾರಂಪರಿಕ ಹಕ್ಕುಗಳನ್ನು ಕಿತ್ತುಕೊಂಡಿದೆ ಎಂಬುದೊಂದೆ ಬಹುದೊಡ್ಡ “ಅಸಹಿಷ್ಣುತೆ “. ಮತ್ತೊಂದು ವರ್ಗಕ್ಕೆ ಈ ಅಲಿಖಿತ ಸಂವಿಧಾನ ನಮ್ಮ ಜೀವನಕ್ಕೆ ಬೇಕಾದ ಮೂಲಭೂತ ಹಕ್ಕುಗಳನ್ನು ಏಕೆ ಇಷ್ಟು ಶತಮಾನಗಳ ಕಾಲ ಕಿತ್ತಿಕೊಂಡಿತ್ತು ಈಗ ಅಂಬೇಡ್ಕರ್ ಅವರು ರಚಿತ ಸಂವಿಧಾನದಲ್ಲಿ ನಮಗೆ ಹೇಗೆ ಮೂಲಭೂತ ಹಕ್ಕುಗಳು ದೊರಕಿವೆ ಎಂದು ಅರಿಯದ ” ಅಸಹಿಷ್ಣತೆ “. ಇಂತಹ ಅಸಹಿಷ್ಣುತೆಯ ಹಿನ್ನೆಲೆಯಿಂದಲೇ ಭಾರತದ ಜನರ ಬದುಕು ಸಾಗುತ್ತಿದೆ. ಇಂತಹ ಕಂದಕದ ನಡುವೆ ” ಸಹಿಷ್ಣುತೆ” ಯನ್ನು ಹುಡುಕುವುದು ಬಹು ಕಠಿಣವಾಗಿದೆ. ಏಕೆಂದರೆ ಭಾರತ ದೇಶದಲ್ಲಿ
“ಧರ್ಮ ಜಾತಿ ಒಳಗಿದೆಯೋ ಅಥವಾ ಜಾತಿ ಧರ್ಮದೊಳಗೆ ಸಿಲುಕಿದೆಯೋ ” ಎಂಬ ದ್ವಂದ್ವದ ಶಾಶ್ವತ ಅಸಹಿಷ್ಣುತೆಯ ಬಂಧನದಲ್ಲಿ ಸಿಲುಕಿ ಇಂದಿನ ನಮ್ಮ ಧರ್ಮ ನಿರಪೇಕ್ಷತೆಯ- ಜಾತ್ಯತೀತ ಹಿನ್ನೆಲೆಯ- ಸಮಸಂಸ್ಕೃತಿ ಪ್ರತಿಪಾದನೆ ಮಾಡುವ ನಮ್ಮ ರಾಷ್ಟ್ರದ ಸಂವಿಧಾನ ಸಹಿಷ್ಣುತೆಯಲ್ಲಿಯೂ ಅಸಹಿಷ್ಣುತೆಯನ್ನು ಅನುಭವಿಸುತ್ತಿದೆ.
ಅಂಬೇಡ್ಕರ್ ಅವರ ಸಂವಿಧಾನದ ಆಧಾರದ ಮೇಲೆ ಜ್ಞಾನದ ಕಡೆಗೆ ಮುನ್ನಡೆತ್ತಿರುವ ದೇಶವನ್ನು ಸಹಿಸದ ಶಾಶ್ವತ ಅಸಹಿಷ್ಣುಯುತೆ ಪ್ರತಿಪಾಧಕರು ತಮ್ಮ ಸ್ವಾರ್ಥ ಸಾಧನೆಗಾಗಿ ಮತ್ತೆ ಅಜ್ಞಾನದ ಸಂವಿಧಾನವನ್ನೇ ಜಾರಿಗೆ ತರಲು ಮುಂದಾಗುತಿರುವುದು ಸಹಜ ಪ್ರಕ್ರಿಯೆ ಆಗಿದೆ. ಇಲ್ಲಿ ಧರ್ಮ- ರಾಷ್ಟ್ರ – ರಾಷ್ಟ್ರೀಯತೆಯ ಕಲ್ಪನೆ ಇಲ್ಲ. ಇರುವುದು ತಾವೆಲ್ಲರೂ ಎರಡುವರೆ ಸಾವಿರ ವರ್ಷಗಳಿಂದ ಅನುಭವಿಸಿಕೊಂಡು ಬಂದ ಸ್ವಾರ್ಥ ಸಿದ್ದಾಂತದ *ಅಹಂ ಬ್ರಹ್ಮಾಶ್ಮಿ* ಎಂಬ ಸ್ವಾರ್ಥ ಪ್ರೇಮ ಮಾತ್ರ.
ನಮ್ಮ ಸಂವಿಧಾನ ನಮ್ಮ ಹೆಮ್ಮೆ – ನಮ್ಮ ಬಾಬಾಸಾಹೇಬ್ ಅಂಬೇಡ್ಕರ್ ನಮ್ಮ ಸ್ವಾಭಿಮಾನ – ನಮ್ಮ ರಾಷ್ಟ್ರ ನಮ್ಮ ಹಕ್ಕು. ಈ ವಿಷಯದಲ್ಲಿ ಇರುವುದೆಲ್ಲವೂ ಸಹ ಸಹಿಷ್ಣುತೆಯೇ ಹೊರತು ಅಸಹಿಷ್ಣುತೆ ಅಲ್ಲ. ಪುರಾಣ ಮತ್ತು ವಾಸ್ತವ