ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ರಾಜೀನಾಮೆ

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್(ಚನ್ನಿ) ಇಂದು ರಾಜ್ಯಪಾಲ ಬನ್ವರಿಲಾಲ್ ಪುರಾಹಿತ್ ರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಮುಂಜಾನೆ ಚರಣ್‌ಜಿತ್ ತಮ್ಮ ಚಂಡೀಗಢದಲ್ಲಿರುವ ನಿವಾಸಕ್ಕೆ ಆಗಮಿಸಿದ್ದಾರೆ. ಐದು ರಾಜ್ಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಚರಣ್‌ಜಿತ್ ಸ್ಪರ್ಧಿಸುತ್ತಿರುವ ಎರಡು ಕ್ಷೇತ್ರಗಳಾದ ಚಮಕೌರ್ ಸಾಹಿಬ್ ಹಾಗೂ ಭದೌರ್ ಕ್ಷೇತ್ರಗಳಲ್ಲಿ ಸದ್ಯ ಹಿನ್ನೆಡೆಯಲ್ಲಿದ್ದಾರೆ.

ಇದೀಗ ಪಂಜಾಬ್‌ನಲ್ಲಿ ಕಾಂಗ್ರೆಸ್ ಸೋಲುವುದು ಬಹುತೇಕ ಖಚಿತವಾಗಿದ್ದು, ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್  ಚನ್ನಿ ರಾಜಿನಾಮೆ ನೀಡಲಿದ್ದಾರೆ.

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಮುನ್ನಡೆ(ಎಎಪಿ) ಕಂಡಿದ್ದು, ಅಧಿಕಾರ ಹಿಡಿಯುವ ಎಲ್ಲಾ ಸಾಧ್ಯತೆಗಳಿವೆ.

ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿಗಳೆಂದು ಘೋಷಿಸಿಕೊಂಡಿದ್ದ ಹಾಲಿ ಮುಖ್ಯಮಂತ್ರಿ ಚರಣ್‌ಜಿತ್ ಚನ್ನಿ ಮತ್ತು ನವಜೋತ್ ಸಿಂಗ್ ಸಿದು ತಮ್ಮ ಸ್ವಕ್ಷೇತ್ರದಲ್ಲೇ ಗೆಲುವಿಗೆ ಹರಸಾಹಸ ಪಡುವಂತಾಗಿದೆ. ಇದು ಪಂಜಾಬ್ ಕಾಂಗ್ರೆಸ್ ಹಾಲಿ ಪರಿಸ್ಥಿತಿಗಿಂತ ಹಿಡಿದ ಕನ್ನಡಿಯಾಗಿದೆ. ನಾಯಕತ್ವ ಬದಲಾವಣೆ ಮತ್ತು ಆಂತರಿಕ ಕಲಹದಿಂದ ಛಿದ್ರಗೊಂಡ ಕಾಂಗ್ರೆಸ್ ಪಂಜಾಬ್‌ನಲ್ಲಿ ಅಧಿಕಾರವನ್ನು ಮರಳುವಲ್ಲಿ ವಿಫಲವಾಗಿದೆ.

ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ 65ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಇದು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಎಸ್‌ಎಸ್ ದಿಂಡ್ಸಾ ನೇತೃತ್ವದ ಎಸ್‌ಎಡಿ (ಸಂಯುಕ್ತ) ಜೊತೆ ಹೊಂದಾಣಿಕೆ ಮಾಡಿಕೊಂಡಿದೆ.

Donate Janashakthi Media

Leave a Reply

Your email address will not be published. Required fields are marked *