ಚಂಡೀಗಢ: ಎಂಎಸ್‌ಪಿ ಸೇರಿದಂತೆ 13 ಬೇಡಿಕೆಗಳಿಗೆ ಸಂಬಂಧಿಸಿದಂತೆ ರೈತರ ಪ್ರತಿಭಟನೆ ಮುಂದುವರಿದಿದೆ. ಡಿಸೆಂಬರ್ 18 ರಂದು ರೈತರು ರೈಲ್ ರೋಕೋ ಚಳವಳಿಯನ್ನು ನಡೆಸಿದ್ದರು. ಈಗ ಡಿಸೆಂಬರ್ 30 ರಂದು ಪಂಜಾಬ್‌ನಲ್ಲಿ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ. ಪ್ರತಿಭಟನೆ
ಡಿಸೆಂಬರ್ 30 ರಂದು ‘ಪಂಜಾಬ್ ಬಂದ್’ ಕರೆಗೆ ಹಲವು ಸಂಘಟನೆಗಳಿಂದ ಬೆಂಬಲ ಸಿಗುತ್ತಿದೆ. ಅಂದು ಬೆಳಗ್ಗೆ 7 ರಿಂದ ಸಂಜೆ 4 ರವರೆಗೆ ಪಂಜಾಬ್ ಬಂದ್ ಆಚರಿಸಲಾಗುವುದು. ಆದರೆ ತುರ್ತು ಸೇವೆಗಳು ಮುಂದುವರಿಯಲಿವೆ ಎಂದು ಎಂದು ಖಾನೌರಿ ಗಡಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಸರ್ವಾನ್ ಸಿಂಗ್ ಪಧೇರ್, ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷದಿಂದ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳ ಸಾಧ್ಯತೆ!
ವರ್ತಕರು, ಸಾಗಣೆದಾರರು, ನೌಕರರ ಸಂಘಗಳು, ಟೋಲ್ ಪ್ಲಾಜಾ ನೌಕರರು, ಕಾರ್ಮಿಕರು, ಮಾಜಿ ಸೈನಿಕರು, ಸರಪಂಚರು ಮತ್ತು ಶಿಕ್ಷಕರ ಸಂಘಗಳು, ಸಾಮಾಜಿಕ ಮತ್ತು ಇತರ ಸಂಸ್ಥೆಗಳು ಮತ್ತು ಇತರ ಕೆಲವು ವಿಭಾಗಗಳು ಬಂದ್‌ಗೆ ತಮ್ಮ ಬೆಂಬಲವನ್ನು ನೀಡಿವೆ ಎಂದು ವಂದೇ ಹೇಳಿದರು.
ಇದಲ್ಲದೇ ಜನಸಾಮಾನ್ಯರೂ ಬೆಂಬಲಿಸುತ್ತಿದ್ದಾರೆ. ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರವನ್ನು ಒತ್ತಾಯಿಸಿ ಈ ಬಂದ್ ನಡೆಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ. ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಇದನ್ನೂ ನೋಡಿ: ಮನುವಾದಿ ಅಮಿತ್ ಶಾ ವಜಾಕ್ಕೆ ದಲಿತ ಹಕ್ಕುಗಳ ಸಮಿತಿ ಆಗ್ರಹ Janashakthi Media