ಪಂಜಾಬ್‌ ವಿಧಾನಸಭೆ ಚುನಾವಣಾ ದಿನಾಂಕ ಫೆ. 20ಕ್ಕೆ ಮುಂದೂಡಿಕೆ

ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ಪಂಜಾಬ್‌ ವಿಧಾನಸಭೆ ಚುನಾವಣಾ ದಿನಾಂಕವನ್ನು ಫೆಬ್ರುವರಿ 20ಕ್ಕೆ ಮುಂದೂಡಿದೆ. ಈ ಮೊದಲು ಫೆಬ್ರುವರಿ 14ಕ್ಕೆ ಮತದಾನ ನಿಗದಿಯಾಗಿತ್ತು.

ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ, ಬಿಜೆಪಿ, ಪಂಜಾಬ್‌ ಲೋಕ ಕಾಂಗ್ರೆಸ್‌ ಹಾಗು ಇನ್ನಿತರ ಪಕ್ಷಗಳು ಮತದಾನ ದಿನಾಂಕವನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು. ಹೀಗಾಗಿ ದಿನಾಂಕ ಮರುನಿಗದಿಗೊಳಿಸಲಾಗಿದೆ.

ಫೆಬ್ರುವರಿ 16ರಂದು ಗುರು ರವಿದಾಸ್ ಜಯಂತಿ ಇದೆ. ಹೀಗಾಗಿ ಸುಮಾರು 20 ಲಕ್ಷದಷ್ಟು ಜನರು ಉತ್ತರ ಪ್ರದೇಶದ ಬನಾರಸ್‌ಗೆ ಭೇಟಿ ನೀಡಿ ಜಯಂತಿ ಆಚರಿಸಲಿದ್ದಾರೆ. ಅವರಿಗೆ, ಮತದಾನದಲ್ಲಿ ಪಾಲ್ಗೊಳ್ಳಲು ತೊಂದರೆಯಾಗದಂತೆ ನೋಡಿಕೊಳ್ಳಲು, ಚುನಾವಣೆಯನ್ನು ಕನಿಷ್ಠ ಆರು ದಿನ ಮುಂದೂಡಬೇಕು ಎಂದು ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ಅವರಿಗೆ ಜನವರಿ 13ರಂದು ಪತ್ರ ಬರೆದಿದ್ದರು.

ಚುನಾವಣಾ ಆಯೋಗದ ಪ್ರಕಟಣೆಯಂತೆ ಹೊಸ ವೇಳಾಪಟ್ಟಿಯ ಪ್ರಕಾರ, ಅಧಿಸೂಚನೆಯ ದಿನಾಂಕ ಜನವರಿ 25 ಆಗಿರುತ್ತದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 1. ಪರಿಶೀಲನೆಯ ದಿನಾಂಕ ಫೆಬ್ರವರಿ 2 ಮತ್ತು ಹಿಂಪಡೆಯಲು ಕೊನೆಯ ದಿನಾಂಕ ಫೆಬ್ರವರಿ 4 ಆಗಿರುತ್ತದೆ.

Donate Janashakthi Media

Leave a Reply

Your email address will not be published. Required fields are marked *