ಒಂದೇ ಸೆಕೆಂಡಿನಲ್ಲಿ ಮಾಯವಾದ ಪುಣೆ ಕಾರ್ಪೋರೇಶನ್ ನೀರಿನ ಟ್ರಕ್!

ಪುಣೆ: ರಸ್ತೆಯಲ್ಲಿ ಸಾಗುತ್ತಿದ್ದ ಪುಣೆಯ ಮುನ್ಸಿಪಲ್ ಕಾರ್ಪೋರೇಶನ್ ನೀರಿನ ಟ್ಯಾಂಕರ್ ಕ್ಷಣಾರ್ಧದಲ್ಲಿ ಮಾಯವಾದ ಘಟನೆ ಬುಧ್ವಾರ್ ಪೇಠ್‌ನಲ್ಲಿ ನಡೆದಿದೆ. ನೀರು ತುಂಬಿದ ಲಾರಿ ಸಾಗುತ್ತಿದ್ದಂತೆ ರಸ್ತೆಯಲ್ಲಿ ಏಕಾಏಕಿ ಅತೀ ದೊಡ್ಡ ಸಿಂಕ್ ಹೋಲ್ ಸೃಷ್ಟಿಯಾಗಿದೆ. ಪರಿಣಾಮ, ಒಂದೇ ಸೆಕೆಂಡ್‌ನಲ್ಲಿ ಚಲಿಸುತ್ತಿದ್ದ ಲಾರಿ ಈ ದೊಡ್ಡ ಗುಂಡಿಯೊಳಗೆ ಬಿದ್ದಿದೆ. ಅದೃಷ್ಠವಶಾತ್

ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪುಣೆ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಈ ಟ್ಯಾಂಕರ್ ಹೊರಗೆಳೆದಿದೆ. ಅದೃಷ್ಠವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಅದೃಷ್ಠವಶಾತ್

ಲಾರಿ ಸಿಂಕ್ ಹೋಲ್‌ನಲ್ಲಿ ಮುಳುಗುವ ದೃಶ್ಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ. ಪ್ರಧಾನ್ ದಾಕ್ ಘರ್ ಬಳಿಯ ಬುಧ್ವಾರ್ ಪೇಠ್ ರಸ್ತೆಯಲ್ಲಿ ನೀರು ತುಂಬಿದ ಟ್ಯಾಂಕರ್ ಸಾಗುತ್ತಿದ್ದಂತೆ ಈ ಘಟನೆ ನಡೆದಿದೆ. ಬ್ಲಾಕ್ಸ್ ರಸ್ತೆಯಲ್ಲಿ ಸಾಗುತ್ತಿದ್ದಂತೆ ಲಾರಿಯ ಹಿಂಭಾಗದ ಚಕ್ರಗಳು ಸಿಂಕ್ ಹೋಲ್ ಸ್ಥಳದ ಮೇಲಿಂದ ಚಲಿಸುತ್ತಿದ್ದಂತೆ ಗುಂಡಿ ಸೃಷ್ಟಿಯಾಗಿದೆ. ಅದೃಷ್ಠವಶಾತ್

ಇದನ್ನೂ ಓದಿ: ಮುನಿರತ್ನ ಪ್ರಕರಣ : ಶಾಸನ ಸಭಾ ಸದಸ್ಯತ್ವ ಅಮಾನತುಗೊಳಿಸಿ – ಸಿಪಿಐಎಂ ಒತ್ತಾಯ

ಇದು ಅತೀ ದೊಡ್ಡ ಸಿಂಕ್ ಹೋಲ್ ಆಗಿರುವ ಕಾರಣ ಏಕಾಏಕಿ ಲಾರಿ ಸಂಪೂರ್ಣ ಈ ಗುಂಡಿಯೊಳಗೆ ಮುಳುಗಿದೆ. ಹಿಂಭಾಗದ ಚಕ್ರಗಳ ಜೊತೆಗೆ ಇಡೀ ಲಾರಿ ಹಿಮ್ಮುಖವಾಗಿ ಗುಂಡಿಯೊಳಗೆ ಮುಳುಗಿದೆ. ಹೀಗಾಗಿ ಚಾಲಕ ಇರುವ ಮುಂದಿನ ಭಾಗ ಆಕಾಶಕ್ಕೆ ಮುಖ ಮಾಡಿ ಕೊಳಚೆ ನೀರು, ಮಣ್ಣು ತುಂಬಿದ ಸಿಂಕ್ ಹೋಲ್ ಮೇಲ್ಭಾಗದಲ್ಲಿ ನಿಂತುಕೊಂಡಿದೆ. ಲಾರಿಯ ಮುಂಭಾಗ ಮುಳಗದ ಕಾರಣ ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಸಿಂಕ್ ಹೋಲ್ ಸೃಷ್ಟಿಯಾಗಿರುವ ಸ್ಥಳದಲ್ಲಿ ಹಳೇ ಭಾವಿಯೊಂದು ಇತ್ತು. ಈ ಬಾವಿಯನ್ನು ಮಣ್ಣಿನಿಂದ ಮುಚ್ಚಿ ಮೇಲೆ ಕಾಂಕ್ರೀಟ್ ಹಾಕಲಾಗಿದೆ. ಆದರೆ ನೀರು ಸೋರಿಕೆಯಿಂದ ಮಣ್ಣು ಸಡಿಲಗೊಂಡು ಈ ಸಿಂಕ್ ಹೋಲ್ ಸೃಷ್ಟಿಯಾಗಿದೆ ಎಂದು ಪುಣೆ ಮುನ್ಸಿಪಲ್ ಕಾರ್ಪೋರೇಶನ್ ಕಮಿಷನರ್ ರಾಜೇಂದ್ರ ಬೋಸಲೆ ಹೇಳಿದ್ದಾರೆ.  ಪ್ರಧಾನ್ ದಾಕ್ ಘರ್ ಬಳಿಕ ಹಲವು ಬಾರಿ ಪುಣೆ ಮುನ್ಸಿಪಲ್ ಕಾರ್ಪೋರೇಶನ್ ಕಚೇರಿಗೆ ನೀರು ಲೀಕೆಜ್ ದೂರುಗಳು ಬಂದಿದೆ.

ಈ ವೇಳೆ ನೀರು ಸೋರಿಕೆಗೆ ಕ್ರಮ ಕೈಗೊಳ್ಳಲಾಗಿತ್ತು. ಹಳೇ ಭಾವಿ ಇರುವ ಸ್ಥಳದಲ್ಲೇ ಈ ನೀರುಗಳ ಸೋರಿಕೆಯಿಂದ ಮಣ್ಣು ಸವೆದು ಈ ಸಿಂಕ್ ಹೋಲ್ ಸೃಷ್ಟಿಯಾಗಿದೆ. ಇದು ನೀರು ತುಂಬಿದ ಲಾರಿಯ ಭಾರ ತಡೆದುಕೊಳ್ಳಲು ಸಾಧ್ಯವಾಗದೆ ಸಡಿಲಗೊಂಡು ಸಿಂಕ್ ಹೋಲ್ ಸೃಷ್ಟಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪುಣೆ ಅಗ್ನಿಶಾಮಕ ದಳ ಎರಡು ಕ್ರೇನ್‌ಗಳ ಸಹಾಯದಿಂದ ಮುಳುಗಿದ್ದ ಲಾರಿಯನ್ನು ಹೊರತಗೆದಿದೆ. ಘಟನೆ ಮಾಹಿತಿ ಸಿಕ್ಕ ಬೆನ್ನಲ್ಲೇ ಸಂಪೂರ್ಣ ಸ್ಥಳವನ್ನು ಪೊಲೀಸರು ವಶಕ್ಕೆ ಪಡೆದು ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದ್ದರು. ಬಳಿಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಮರುಕಳಿಸದಂತೆ ಯಾವ ರೀತಿಯ ಕ್ರಮಗಳನ್ನು ಕೈಗಳ್ಳಬೇಕು ಎಂದು ಚರ್ಚಿಸಿದ್ದಾರೆ. ಇದೇ ವೇಳೆ ಕಮಿಷನರ್ ರಾಜೇಂದ್ರ ನಗರದ ಇತರ ಭಾಗದಲ್ಲಿ ನೀರು ಸೋರಿಕೆಯಾಗಿರುವ ಹಾಗೂ ಸರಿಪಡಿಸಿರುವ ಸ್ಥಳಗಳಲ್ಲಿ ಕೂಲಕುಂಷವಾಗಿ ಪರಿಶೀಲಿಸುವಂತೆ ಸೂಚಿಸಿದ್ದಾರೆ.

ಮುಂಬೈನಲ್ಲೂ ಇದೇ ರೀತಿಯ ಘಟನೆ 2021ರಲ್ಲಿ ನಡೆದಿತ್ತು. ಭಾರಿ ಮಳೆಯಿಂದ ಘಾಟ್ಕೋಪರ್ ರಸ್ತೆ ಪಕ್ಕದಲ್ಲಿರುವ ಪಾರ್ಕಿಂಗ್‌ನಲ್ಲಿ ಸೃಷ್ಟಿಯಾದ ಬೃಹತ್ ಸಿಂಕ್ ಹೋಲ್‌ನಲ್ಲಿ ಮುಳುಗಿತ್ತು. ಪಾರ್ಕಿಂಗ್ ಮಾಡಿದ್ದ ಕಾರು ಈ ಸಿಂಕ್ ಹೋಲ್‌ನಲ್ಲಿ ಮುಳುಗಡೆಯಾಗಿತ್ತು. ಕಾರಿನಲ್ಲಿ ಹಾಗೂ ಈ ಸ್ಥಳದ ಸುತ್ತ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿರಲಿಲ್ಲ. ಇಲ್ಲೂ ಕೂಡ ಹಳೇ ಭಾವಿಯೊಂದು ಪತ್ತೆಯಾಗಿತ್ತು. ಈ ಭಾವಿಯನ್ನು ಸರಿಯಾಗಿ ಮುಚ್ಚದ ಕಾರಣ ಈ ಅವಾಂತರ ನಡೆದಿತ್ತು.

ಇದನ್ನೂ ನೋಡಿ: ರಸ್ತೆ ಕುಸಿದು ಕ್ಷಣಾರ್ಧದಲ್ಲಿ ಮಾಯವಾದ ಟ್ರಕ್ : ಭಯಾನಕ ವಿಡಿಯೋ ವೈರಲ್

Donate Janashakthi Media

Leave a Reply

Your email address will not be published. Required fields are marked *