ಪಂಪ್ವೆಲ್ ಕಂಕನಾಡಿ ಮುಖ್ಯರಸ್ತೆ ಅವ್ಯವಸ್ಥೆ: ಜುಲೈ 21ರಂದು ಡಿವೈಎಫ್ಐ ಪ್ರತಿಭಟನೆ

ಮಂಗಳೂರು: ನಗರಕ್ಕೆ ಸಂಪರ್ಕಿಸುವ ಹೆಬ್ಬಾಗಿಲು ಪಂಪ್ವೆಲ್ ನಿಂದ ಪ್ರಾರಂಭಗೊಂಡು ಕಂಕನಾಡಿ, ಬೆಂದೂರ್ ವೆಲ್ ವರೆಗಿನ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯುದ್ದಕ್ಕೂ ನಿರ್ಮಾಣಗೊಂಡಿರುವ ಹಲವು ಹೊಂಡಗುಂಡಿಗಳಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಡಿವೈಎಫ್ಐ ಕಾರ್ಯದರ್ಶಿ ನವೀನ್ ಕೊಂಚಾಡಿ ಆರೋಪಿಸಿದ್ದಾರೆ.

ಅಲ್ಲದೆ ದಿನನಿತ್ಯ ಟ್ರಾಫೀಕ್ ಜಾಮ್ ಉಂಟಾಗಿ ಶಾಲಾ ವಿದ್ಯಾರ್ಥಿಗಳು, ಕಾರ್ಮಿಕರು ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗದೆ ತೊಂದರೆಯನ್ನು ಅನುಭವಿಸುವಂತಾಗಿದೆ. ಸದ್ಯ ದಿನನಿತ್ಯ ಸುರಿದ ಧಾರಾಕಾರ ಮಳೆಗೆ ರಸ್ತೆಯಲ್ಲಿರುವ ಗುಂಡಿಗಳಲ್ಲಿ ನೀರು ತುಂಬಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೊಳಗಾಗಿ ಜೀವಹಾನಿ ಸಂಭವಿಸುತ್ತಿದ್ದೆ ಎಂದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ರಸ್ತೆಗಳೆಲ್ಲಾ ಕಾಂಕ್ರಟೀಕರಣಗೊಂಡರೂ ಈ ಮುಖ್ತ ರಸ್ತೆ ಈವರೆಗೂ ದುರಸ್ತಿ ಕಂಡಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿ ನೂರಾರೂ ಕೋಟಿ ಅನುದಾನಗಳಿದ್ದರೂ ಆ ಹಣವನ್ನೆಲ್ಲಾ ಬೇಕಾಬಿಟ್ಟಿ ಖರ್ಚು ಮಾಡಿ ದುರುಪಯೋಗ ನಡೆಸಿರುವ ಪಾಲಿಕೆ ಆಡಳಿತಕ್ಕೆ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಈವರೆಗೂ ಸಾಧ್ಯವಾಗಿಲ್ಲ.

ಇದನ್ನೂ ಓದಿ: 10,000 ಕೊಟ್ರೆ ನಿಮ್ಮ ಟ್ಯಾಕ್ಸ್ ಕ್ಲಿಯರ್: ತೆರಿಗೆ ಇಲಾಖೆ ಅಧಿಕಾರಿಗಳಿಂದ ಲಂಚ ಬೇಡಿಕೆ

ಮಂಗಳೂರು ನಗರವನ್ನು ಸಂಪರ್ಕಿಸುವ ಮುಖ್ಯ ರಸ್ತೆಯ ಈ ಅವ್ಯವಸ್ಥೆ ಹಾಗೂ ಪಂಪ್ವೆಲ್ ಸುತ್ತಮುತ್ತಲೂ ನಿರ್ಮಿಸಿರುವ ಅವೈಜ್ಞಾನಿಕ ಕಾಮಗಾರಿಗಳಿಂದ ಪ್ರತೀ ವರುಷ ನಗರದಲ್ಲಿ ಸುರಿಯುವ ಒಂದು ಮಳೆಗೆ ಪಂಪ್ವೆಲ್ ಸೇತುವೆ ಸಹಿತ ಕೆಳಭಾಗದ ರಸ್ತೆಗಳಲೆಲ್ಲಾ ನೀರು ತುಂಬಿ ಕೃತಕ ನೆರೆ ಸೃಷ್ಟಿಯಾಗುತ್ತಿರುವ ಸಮಸ್ಯೆಗಳನ್ನು ಈವರೆಗೂ ಪರಿಹರಿಸಲು ಸಾಧ್ಯವಾಗದೇ ಇರೋದು ಪಾಲಿಕೆ ಆಡಳಿತದ ಬೇಜವಾಬ್ದಾರಿ ನಡೆ.

ಈ ಎಲ್ಲಾ ಹಿನ್ನಲೆಯಲ್ಲಿ ಪಂಪ್ವೆಲ್ ನಿಂದ ಕಂಕನಾಡಿ ಬೆಂದೂರ್ ವೆಲ್ ವರೆಗಿನ ಮುಖ್ಯರಸ್ತೆಯನ್ನು ಸಂಪೂರ್ಣ ದುರಸ್ತಿಗೊಳಿಸಿ ಕೂಡಲೇ ಕಾಂಕ್ರಟೀಕರಣಗೊಳಿಸಲು ಕ್ರಮಕೈಗೊಳ್ಳಬೇಕು, ಅಲ್ಲದೆ ಪಂಪ್ವೆಲ್ ನಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವೈಜ್ಞಾನಿಕ ನೆಲೆಯಲ್ಲಿ ಪರಿಹಾರ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಡಿವೈಎಫ್ಐ ಮಂಗಳೂರು ನಗರ ಸಮಿತಿ ದಿನಾಂಕ 21-7-2025 ರ ಸಂಜೆ 5-30ಕ್ಕೆ ಕಂಕನಾಡಿ ಜಂಕ್ಷನ್ ನಲ್ಲಿ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ನೋಡಿ: ಆಸಕ್ತಿಕರ ಸಂಗತಿ |ಪ್ರಾಣಿಗಳಲ್ಲಿ ಆಕಳಿಕೆJanashakthi Media

Donate Janashakthi Media

Leave a Reply

Your email address will not be published. Required fields are marked *