ಸಂಡೂರು: ಯುವಜನತೆಯ ಹೋರಾಟದ ಯಶಸ್ಸಿನಿಂದಾಗಿ ತೋರಣಗಲ್ಲು ಗ್ರಾಮದಲ್ಲಿ ಐಟಿಐ ಕಾಲೇಜು ಆರಂಭವಾಗಿದೆ. ಹಾಗೆಯೇ ಕಾಲೇಜು ಆರಂಭವಾಗುವುದರಿಂದಿಗೆ ಪಿಯು ಕಾಲೇಜನ್ನು ಆರಂಭಿಸುವ ಮೂಲಕ ಶಿಕ್ಷಣಕ್ಕಾಗಿ ವಿದ್ಯಾರ್ಥಿ ದೂರದ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಬೇಕಿದೆ ಎಂದು ಸೈಯದ್ ಶರೀಫ್ ಹೇಳಿದರು.
ತೋರಣಗಲ್ಲಿನಲ್ಲಿ ನಡೆದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಗ್ರಾಮ ಘಟಕ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಡೂರು ತಾಲ್ಲೂಕು ಸಹ ಕಾರ್ಯದರ್ಶಿ ಸೈಯದ್ ಶರೀಫ್ ಡಿವೈಎಫ್ಐನ ಹಿಂದಿನ ಸಮ್ಮೇಳನದ ಸಂದರ್ಭದಲ್ಲಿ ಸ್ಥಳೀಯ ಯುವಜನತೆಯ ವಿಚಾರಗಳನ್ನು ಇಟ್ಟುಕೊಂಡು ಪ್ರಮುಖ ಬೇಡಿಕೆಯಾಗಿ ತಾಂತ್ರಿಕ ಶಿಕ್ಷಣ ಆರಂಭಿಸಬೇಕೆಂದು ಆಗ್ರಹಿಸಲಾಯಿತು. ನಂತರದ ದಿನಗಳಲ್ಲಿಯೂ ಸಾಕಷ್ಟು ಬಾರಿ ಹೋರಾಟ ಮಾಡಿದರ ಪರಿಣಾಮವಾಗಿ ಐಟಿಐ, ಡಿಪ್ಲೋಮೊ ಕಾಲೇಜುಗಳು ಆರಂಭವಾಗಿದೆ. ಇದು ಸಂಘಟನೆಗೆ ದೊರೆತ ಜಯ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನು ಓದಿ: ಖಾಸಗೀಕರಣದ ನಡೆಗಳ ವಿರುದ್ಧ ಸಾಮಾನ್ಯ ವಿಮಾ ನೌಕರರ ದೇಶವ್ಯಾಪಿ ಮುಷ್ಕರ
ನವದೆಹಲಿಯ ಜೆಎನ್ಯು ನೀತಿ ನಿರೂಪನೆ ಸಮಿತಿ ಸದಸ್ಯರಾದ ವಸಂತ ಕಲಾಲ್ ಮಾತನಾಡಿ ʻʻ1980 ನವೆಂಬರ್ 3ರಂದು ಪಂಜಾಬಿನ ಲೂದಿಯಾನದಲ್ಲಿ ಡಿವೈಎಫ್ಐ ಸಂಘಟನೆಯು ಇಂದು ರಾಷ್ಟ್ರ ಮಟ್ಟದಲ್ಲಿ ಯುವಜನತೆ ಪ್ರಶ್ನೆಗಳನ್ನು ಇಟ್ಟುಕೊಂಡು ಸಂಘರ್ಷವನ್ನು ಮಾಡಿಕೊಂಡು ಬರುತ್ತಿದೆ.
ಸಂಘಟನೆಯೂ ಅಂದಿನಿಂದಲೂ ನಿರುದ್ಯೋಗ ಸಮಸ್ಯೆ, ಅಸಮಾನತೆ, ಜಾತಿ ತಾರತಮ್ಯ ವಿರುದ್ದ ಮೂಲಭೂತ ಹಕ್ಕುಗಳಿಗಾಗಿ ಹೋರಾಡುತ್ತಾ ದೇಶದ ಉದ್ದಗಲಕ್ಕೂ ಬೇರೆ ಬೇರೆ ರಾಜ್ಯ, ಜಿಲ್ಲೆಗಳ ಮೂಲೆಯಲ್ಲಿಯೂ ಡಿವೈಎಫ್ಐ ಸಂಘಟನೆ ವಿಸ್ತಾರವಾಗಲು ಕಾರಣವಾಗಿದೆ. ನೀವು ಸಹ ಸಮಸ್ಯೆಗಳನ್ನು ನೀಗಿಸುವ ನಿಟ್ಟಿನಲ್ಲಿ ಸಮರಶೀಲವಾದ ಹೋರಾಟದಲ್ಲಿ ಮುಂದಾಗಬೇಕೆಂದು ಕರೆ ನೀಡಿದರು.
ಡಿವೈಎಫ್ ಗ್ರಾಮ ಘಟಕ ಸಮ್ಮೇಳನದಲ್ಲಿ ಪಿಯುಸಿ ಕಾಲೇಜಿಗಾಗಿ ಆಗ್ರಹಿಸಿ, ನಿರುದ್ಯೋಗಿ ಯುವಜನತೆಗೆ ಉದ್ಯೋಗಕ್ಕಾಗಿ ಒತ್ತಾಯಿಸಿ, ಜನತೆಯ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಲಾಯಿತು. ಇದೇ ಸಂದರ್ಭದಲ್ಲಿ ಸಮಿತಿಯನ್ನು ರಚನೆ ಮಾಡಲಾಯಿತು.
ಡಿವೈಎಫ್ಐನ ಸಂಡೂರು ತಾಲ್ಲೂಕು ಕಾರ್ಯದರ್ಶಿ ಹೆಚ್.ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳ್ಳಾರಿ ಜಿಲ್ಲೆ ಸಾಂಸ್ಕೃತಿಕ ಕಾರ್ಯದರ್ಶಿ ಕೆ.ರಮೇಶರವರು ಉಪಸ್ಥಿತರಿದ್ದರು. ನೂತನ ಘಟಕವನ್ನು ಶುಭಹಾರೈಸಿ ಸಿಐಟಿಯೂ ಸಂಡೂರು ವಿಭಾಗದ ಜೆ.ಎಮ್.ಚೆನ್ನಬಸಯ್ಯ, ಡಿಹೆಚ್ಎಸ್ ಸಂಘಟನೆಯ ಎ.ಸ್ವಾಮಿ ಮಾತನಾಡಿದರು.
ಇದನ್ನು ಓದಿ: ಉದ್ಯೋಗವಿಲ್ಲದೆ ಸಾವಿಗೆ ಶರಣಾದವರ ಸಂಖ್ಯೆ ಹೆಚ್ಚಳ
ಸಮ್ಮೇಳನದ ಅಧ್ಯಕ್ಷತೆಯನ್ನು ಸಂಡೂರು ತಾಲ್ಲೂಕು ಅಧ್ಯಕ್ಷರು ಎಸ್.ಕಾಲೂಬರವರು ವಹಿಸಿದ್ದರು. ತೋರಣಗಲ್ಲು ಗ್ರಾಮ ಘಟಕದ ನೂತನ ಅಧ್ಯಕ್ಷ ಶಿವರೆಡ್ಡಿರವರು ಸ್ವಾಗತಿಸಿದರು. ಸಹಾ ಕಾರ್ಯದರ್ಶಿ ಕುಮಾರ್ ನಾಯ್ಕ್ ನಿರೂಪಿಸಿದರು. ಪ್ರೇಮ್ ವಂದಿಸಿದರು. ಅನಿಲ್, ಲಕ್ಷ್ಮಿ, ಇತರರು ಭಾಗವಹಿಸಿದ್ದರು..
ಮೂತನ ಪದಾಧಿಕಾರಿಗಳು: ಅಧ್ಯಕ್ಷರು: ಶಿವರೆಡ್ಡಿ, ಕಾರ್ಯದರ್ಶಿ: ಹುಲೇಪ್ಪ, ಖಜಾಂಚಿ-ದೊಡ್ಡಬಸವ, ಉಪಾಧ್ಯಕ್ಷರುಗಳು: ಗಣೇಶ್, ಸಂತೋಷ, ವೆಬಕುಮಾರಿ, ಪಾಲ್ ಪಕ್ಕೀರ, ಅಮರ್, ಸಹಾ ಕಾರ್ಯದರ್ಶಿಗಳು: ಪ್ರೇಮ್ ಕುಮಾರ್, ಕುಮಾರ್ ನಾಯ್ಕ, ಹುಸೇನ್.ಬಿ, ಅಭಿಶೇಕ್, ಷಣ್ಮುಖ, ಸಾಂಸ್ಕೃತಿಕ ಕಾರ್ಯದರ್ಶಿ: ಡಿ.ಟಿ. ರಮೇಶ್, ಕ್ರೀಡಾ ಕಾರ್ಯದರ್ಶಿ: ನಾಗಭೂಷಣ, ಗೌರವ ಸದಸ್ಯರುಗಳು: ಶಿವುಕುಮಾರ್, ರವಿ, ಪೂಜಾ, ಅರ್ಪಿತ, ಭಾಷ, ಕಲಾವತಿ, ಚಂದ್ರು ಆಯ್ಕೆಯಾಗಿದ್ದಾರೆ.