ಶಿವಮೊಗ್ಗ | ತಾಜ್ಯ ನಿರ್ವಹಣೆಗೆ ಸಾರ್ವಜನಿಕರು ಸ್ವಚತಾ ಸಿಬ್ಬಂದಿಗೊಂಳಿಗೆ ಕೈ ಜೋಡಿಸಿ – ಸಂಪತ್‌ ಸಿ ಎಂ

ಶಿವಮೊಗ್ಗ : ನಗರಗಳಲ್ಲಿ ತಾಜ್ಯ ನಿರ್ವಹಣೆಗೆ ಸಂಘ ಸಂಸ್ಥೆಗಳು ಹಾಗೂ ಸ್ಥಳಿಯ ಸಾರ್ವಜನಿಕರು ಸ್ವಚತಾ ಸಿಬ್ಬಂದಿಗಳೊಂದಿಗೆ ಕೈ ಜೋಡಿಸಿದಾಗ ಮಾತ್ರ ಘನತ್ಯಾಜ್ಯವನ್ನು ಸಮರ್ಥವಾಗಿ ನಿಭಾಯಿಸಬಹುದು ಎಂದು ಟಿಸಿಫ್‌ ಇಂಡಿಯಾ ಸಂಸ್ಥೆಯ ಸಂಪನ್ಮೂಲ ತಜ್ಙಾರಾದ ಸಂಪತ್‌ ಸಿ ಎಂ ತಿಳಿಸಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ಯಿಂದ ಸ್ವಚ್ಛ ಭಾರತ ಮಿಷನ್ 2.0 ಕಾರ್ಯಕ್ರಮದ ಅಂಗವಾಗಿ, All India Institute of Local Self Government (AIILSG), ಬೆಂಗಳೂರು ಇವರ ಸಹಯೋಗದಲ್ಲಿ ಸ್ಥಳೀಯ ಸೇವಾ ಸಂಸ್ಥೆಗಳು, ಮಹಾನಗರ ಪಾಲಿಕೆಯ ವಾರ್ಡ್ ಸದಸ್ಯರು, ಸ್ವಚ್ಛತಾ ನಿರೀಕ್ಷಕರು, ಪರಿಸರ ಸೇನಾನಿಗಳು ಹಾಗೂ ನಾಗರಿಕರಿಗಾಗಿ ಒಂದು ದಿನದ ವಿಶೇಷ ಕಾರ್ಯಗಾರ ಆಯೋಜಿಸಲಾಯಿತು.

ಇದನ್ನೂ ಓದಿ : ರಾಗಿಕಣ | ಗ್ರಾಮೀಣ ಸೊಗಡು ತಿಳಿಸುವ ಸಂತೆ

ಈ ಕಾರ್ಯಗಾರದಲ್ಲಿ ಟಿ ಸಿ ಫ್ ಇಂಡಿಯ ಸಂಸ್ಥೆಯ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಮತ್ತು ಸಂರಕ್ಷಣೆಯ ತಜ್ಞ ಸಂಪತ್ ಸಿ.ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು  ಕಸನಿರ್ವಹಣೆಯಲ್ಲಿ, ನಗರ ‘ನಿವಾಸಿ ಕಲ್ಯಾಣ ಸಂಘ’ಗಳ (Resident Welfare Association) ಪ್ರಾಮುಖ್ಯತೆ, ತ್ಯಾಜ್ಯ ನಿರ್ವಹಣೆಯಲ್ಲಿ ಎಲ್ಲರ ಸಹಯೋಗ, ಬಹಳ ಮುಖ್ಯ  ಹಾಗಾಗಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸಂಘಟನೆಗಳು ಇದರಲ್ಲಿ ಪಾಲ್ಗೋಂಡಾಗ ಮಾತ್ರ ಸ್ವಚ್ಚ  ಭಾರತ ಮಿಷನ್ ಯಶಶ್ವಿಗೊಳಿಸಲು ಸಾದ್ಯ ಎಂದು ತಿಳಿಸಿದರು.

ಪರಿಸರ ಸಂರ್ವಕ್ಷಣೆ ಭಾಗವಾಗಿಯೇ, ಈ ತ್ಯಾಜ್ಯ ನಿರ್ವಹಣೆ ಇದೇ, ಇದರಲ್ಲಿ ಪ್ರತಿಯೊಬ್ಬ ಪ್ರಜೆ ತನ್ನದೇ ರೀತಿಯಲ್ಲಿ ಜೊತೆಯಾಗುವ ಜಾವದ್ದಾರಿ ಹೊಂದಿದ್ದು, ಸ್ವಯಂ ಸೇವಕರಾಗಿ ಕೆಲಸಮಯ ಮೀಸಲಿಟ್ಟರೆ ಕೆಲವೇ ದಿನಗಳಲ್ಲಿ ಕಸಮುಕ್ತ ಸಮಾಜ ಮತ್ತು ಮನಸ್ಸನ್ನು ಹೊಂದಲು ಸಾಧ್ಯ ಎಂಬುದನ್ನು, ಮನವರಿಕೆ ಮಾಡಿದರು.  ಉದಾಹರಣೆ, ಚಟುವಟಿಕಗಳ ಮುಖೇನ, ಸ್ವಚ್ಚ ಭಾರತ ಮಿಷನ್ ಒಂದು ಮತ್ತು ಎರಡರ ಮುಖ್ಯ ಉದ್ದೇಶವನ್ನು ವಿವರಿಸುತ್ತ, ಕಡಿಮೆ ತ್ಯಾಜ್ಯ ಬದುಕಿನ ಶೈಲಿಯನ್ನು ನಮ್ಮದಾ ಗಿಸಿಕೊಳ್ಳುವ ನಿಟ್ಟಿನಲ್ಲಿ ಏನೆಲ್ಲಾ ರೀತಿ ಇದೇ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಕಾರ್ಯಗಾರದಲ್ಲಿ ಭಾಗವಹಿಸಿದ ಮಹಾನಗರ ಪಾಲಿಕೆಯ ವಾರ್ಡ್ ಸದಸ್ಯರು, ಸ್ವಚ್ಛತಾ ನಿರೀಕ್ಷಕರು, ಪರಿಸರ ಸೇನಾನಿಗಳು ಹಾಗೂ ನಾಗರಿಕರಿಗೆ ತರಬೇತಿ ನೀಡಿದರು.

 

ಕಾರ್ಯಕ್ರಮದಲ್ಲಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಮಹಾನಗರ ಪಾಲಿಕೆಯ ಸದಸ್ಯರು ಪ್ರಭಾಕರ್ ಮತ್ತು ಧೀರಜ್ ಹೊನ್ನವಿಲೆ, Town Vending Committee ಸದಸ್ಯ ಚನ್ನವೀರಪ್ಪ ಗಾಮನಗಟ್ಟಿ, ಪರಿಸರ ವಾದಿ  ಮಹದೇವಸ್ವಾಮಿ, ಸಮುದಾಯ ಸಂಘಟನಾ ಅಧಿಕಾರಿ ಅನುಪಮಾ, ಶಿವಮೊಗ್ಗ ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪುಷ್ಪಾವತಿ ಹೆಚ್.ಎಸ್.  AIILSG ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ರವಿಕಿರಣ್ , ಸಹಾಯಕ ಅಭಿಯಂತರರಾದ ಹರೀಶ್, ಲೋಹಿತ್ ಯಾದವ್, ವಿಕಾಸ್ R, ಆರೋಗ್ಯ ನಿರೀಕ್ಷಕರಾದ ಶೈಲಜಾ, ಶಿವಮೂರ್ತಪ್ಪ ಲಕ್ಕಣ್ಣನವರ್, ಪ್ರಭುರಾಜ್, ಕೃಷ್ಣಮೂರ್ತಿ, ವಸಂತ್ ಕುಮಾರ್, ಸುರೇಶ್, ರವಿ ಉಪಸ್ಥಿತರಿದ್ದರು.

ಇದನ್ನೂ ನೋಡಿ : ಕಡಲೆಕಾಯಿ ಪರಿಷೆಗೆ ಶೃಂಗಾರಗೊಳ್ಳುತ್ತಿದೆ ಬಸವನಗುಡಿ |17 ರಿಂದ 21 | Janashakthi Media| #kadalekaiparishe

Donate Janashakthi Media

Leave a Reply

Your email address will not be published. Required fields are marked *