- ಕುತೂಹಲ ಹೆಚ್ಚಿಸಿದ ರುದ್ರಗೌಡ ವಿಚಾರಣೆ
- ಮೃತ ವ್ಯಕ್ತಿಯ ಮೊಬೈಲ್ ಬಳಕೆ
ಕಲಬುರಗಿ: 545 ಪಿಎಸ್ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಕರಣದ ಕಿಂಗ್ಪಿನ್ ಆಗಿರುವ ರುದ್ರಗೌಡ ಪಾಟೀಲ್ ಕೊವಿಡ್‌ನಿಂದ ಮೃತಪಟ್ಟ ನೌಕರ ಲಕ್ಷ್ಮೀಪುತ್ರ ಎಂಬುವವರ ಮೊಬೈಲ್ನ ಬಳಸಿದ್ದಾನೆ. ಜೊತೆಗೆ ತನ್ನ ಬಳಿಯೇ ಮೊಬೈಲ್ನ ಇಟ್ಟುಕೊಂಡಿದ್ದ ರುದ್ರಗೌಡ ಪಾಟೀಲ್, ಅದೇ ಮೊಬೈಲ್ನಿಂದ ನೇಮಕಾತಿಯಲ್ಲಿ ಅಕ್ರಮವೆಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ಲೂಟೂತ್ ಡಿವೈಸ್ ಬಳಸಿ ನಕಲು ಮಾಡಬೇಕಾದರೆ ಎರಡು ಮೊಬೈಲ್ ಸೆಟ್ ಬೇಕೇಬೇಕು. ಇವರೆಲ್ಲರಿಗೂ ಸಂಪರ್ಕದಲ್ಲಿದ್ದ ಹಗರಣ ರೂವಾರಿಗಳು ಹೊಸ ಮೊಬೈಲ್, ಸಿಮ್ ಬೇಡ, ಹಳೆ ಮೊಬೈಲ್ ಇದ್ದರೆ ಅನುಕೂಲ ಎಂದು ಯೋಜನೆ ರೂಪಿಸಿದ್ದಾರೆ. ತಮ್ಮ ಮೊಬೈಲ್ ಬಳಸಿದರೆ ಸಿಕ್ಕಿಹಾಕಿಕೊಳ್ಳುತ್ತೇವೆ ಅಂತ ಬೇರೆಯವರ ನಂಬರ್ ಬಳಸಿದ್ದಾರೆ. ಡೀಲ್ ಮಾಡುವಾಗಲೇ ಬೇರೆಯವರ ಹೆಸರಲ್ಲಿ ಇರುವ ಸಿಮ್ ತರಬೇಕು ಅಂತ ಕಿಂಗ್‌ಪಿನ್‌ಗಳು ಷರತ್ ಹಾಕಿದ್ದರು. ಅದರಂತೆ ಗನ್ ಮ್ಯಾನ್ ಹಯ್ಯಾಳೆ ದೇಸಾಯಿ ತನ್ನ ಸ್ನೇಹಿತ ಪೇದೆ ರುದ್ರಗೌಡ ಮೊಬೈಲ್ ತಗೆದುಕೊಂಡು ಹೋಗಿದ್ದ.
ಇದನ್ನೂ ಓದಿ : ಪಿಎಸ್ಐ ನೇಮಕಾತಿ ಅಕ್ರಮ: ತಲೆಮರೆಸಿಕೊಂಡಿದ್ದ ರುದ್ರಗೌಡ ಪಾಟೀಲ್ ಬಂಧನ
ಪೇದೆ ರುದ್ರಗೌಡ ಮತ್ತು ಗನ್ ಮ್ಯಾನ್ ಹಯ್ಯಾಳಿ ದೇಸಾಯಿ ಆತ್ಮೀಯ ಸ್ನೇಹಿತರು. ಪೇದೆ ರುದ್ರಗೌಡ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ. ಆಗ ಹಯ್ಯಾಳಿ ದೇಸಾಯಿ ರುದ್ರಗೌಡನ ಮೊಬೈಲ್ ತಗೆದುಕೊಂಡು ಹೋಗಿದ್ದ. ರುದ್ರಗೌಡ ” ಲಕ್ಷ್ಮಿಪುತ್ರ” ಎಂಬ ವ್ಯಕ್ತಿಯ ಹೆಸರಿನಲ್ಲಿದ್ದ ಮೋಬೈಲ್ ಬಳಸಿದ್ದ. ಆ ವ್ಯಕ್ತಿ ಕೊವಿಡ್‌ನಿಂದ ಮೃತ ಪಟ್ಟಿದ್ದ. ರುದ್ರಗೌಡನ ವಿಚಾರಣೆ ಇನ್ನೂ ನಡೆಯುತ್ತಿದ್ದು ಇನ್ನಷ್ಟು ಸ್ಪೋಟಕ ಮಾಹಿತಿ ಗೊತ್ತಾಗಲಿದೆ.
ಈ ಪ್ರಕರಣದಲ್ಲಿ ಸದ್ಯ ಸುಮಾರು 15 ಜನರು ಬಂಧನವಾಗಿದ್ದಾರೆ. ಇಂದು ಸಿಐಡಿ ಡಿಜಿ ಪಿಎಸ್ ಸಂದು ಕಲಬುರಗಿಗೆ ಆಗಮಿಸುತ್ತಾರೆ. ತನಿಖೆಯ ಬಗ್ಗೆ ಸಿಐಡಿ ಡಿಜಿ ಸಂಪೂರ್ಣ ವಿವರ ಪಡೆಯುತ್ತಿದ್ದಾರೆ.