ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ದರ್ಶನ್‌ ಗೌಡನನ್ನು ಬಂಧಿಸಿದ ಸಿಐಡಿ ತಂಡ

  •    ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ದರ್ಶನ್ ಗೌಡನನ್ನು ಬಂದಿಸಿದ ಸಿಐಡಿ
  •  ನೇಮಕಾತಿಗೆ  80ಲಕ್ಷ  ರೂ ನೀಡಿರುವ  ದರ್ಶನ್ ಗೌಡ 

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.  ರಾಮನಗರ ಜಿಲ್ಲೆಯ ಮಾಗಡಿ ಮೂಲದ ದರ್ಶನ್ ಗೌಡ ನನ್ನು ಈ ಹಿಂದೆ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಆತ ಸಚಿವ ಡಾ. ಅಶ್ವತ್ಥ ನಾರಾಯಣ ಹೆಸರು ಹೇಳಿದ್ದ ಎಂಬ ಕಾರಣಕ್ಕೆ ಆತನನ್ನು ಸಿಐಡಿ ಅಧಿಕಾರಿಗಳು ಬಿಟ್ಟು ಕಳುಸಿದ್ದರು. ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಹಾಗಾಗಿ  ನಿನ್ನೆ ದರ್ಶನ್‌ಗೌಡನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದು, ಇಂದು ಅಧಿಕೃತವಾಗಿ ಬಂಧಿಸಿದ್ದಾರೆ.

ದರ್ಶನಗೌಡ ಜೊತೆ  ಹೊಸದಾಗಿ ಇಬ್ಬರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪ್ರತ್ಯೇಕವಾಗಿ ಮೂರು ಕೇಸ್ ದಾಖಲಿಸಿ ಆರೋಪಿಗಳನ್ನ  ಬೆಂಗಳೂರಿನ ರಾಮಮೂರ್ತಿನಗರ, ಕೋರಮಂಗಲ ಠಾಣೆ, ಯಲಹಂಕ ನ್ಯೂಟೌನ್ ಠಾಣೆಯಲ್ಲಿ ಪ್ರತ್ಯೇಕ ಕೇಸ್ ದಾಖಲು ಮಾಡಲಾಗಿದೆ.

ಅಭ್ಯರ್ಥಿಯ ವಿಚಾರಣೆಯಲ್ಲಿ ಸ್ಫೋಟಕ ಸತ್ಯ ಬಹಿರಂಗವಾಗಿದ್ದು, ಪ್ರಭಾವಿ ಮಂತ್ರಿಯೊಬ್ಬರ ಹೆಸರು ಬಂದಿದೆ. ಮಂತ್ರಿಯೊಬ್ಬರ ತಮ್ಮನಿಗೆ 80 ಲಕ್ಷ ರೂ, ನೀಡಿದ್ದಾಗಿ ಸಿಐಡಿಗೆ ದರ್ಶನ್‌ಗೌಡ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ, ಮಂತ್ರಿಯ ತಮ್ಮನನ್ನು ಸಿಐಡಿ ವಿಚಾರಣೆಗೆ ಕರೆದಿದೆ.

 

Donate Janashakthi Media

Leave a Reply

Your email address will not be published. Required fields are marked *