ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಿ – ಎಸ್‌ಎಫ್‌ಐ ಆಗ್ರಹ

ಗಂಗಾವತಿ: ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲು, ವೃತ್ತಿಪರ ಹಾಸ್ಟೆಲ್ ಆರಂಭ ಮಾಡಲು ಆಗ್ರಹಿಸಿ ಎಸ್‌ಎಫ್‌ಐ ಸಂಘಟನೆ ಹಾಗೂ ವಿದ್ಯಾರ್ಥಿಗಳು ಗಂಗಾವತಿಯ ತಾಲೂಕು ಪಂಚಾಯತ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು.

2023-24 ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾರಿಗೂ ಹಾಸ್ಟೆಲ್ ಸೌಲಭ್ಯ ಕೊಡಬೇಕೆಂದು  ಇಲಾಖೆಯ ಸಚಿವರಿಗೂ ಹಾಗೂ ತಾ.ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಗಂಗಾವತಿ ತಾಲೂಕಿನ ಬಹುತೇಕ ಪಿಯುಸಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಹಾಸ್ಟೆಲ್  ಸೌಲಭ್ಯ ದೊರಕಿರುವುದಿಲ್ಲ, ಆದರೆ ಒಂದು ಹಾಸ್ಟೆಲ್‌ಗೆ ಕೇವಲ 10 ರಿಂದ 20 ವಿದ್ಯಾರ್ಥಿಗಳು  ಮಾತ್ರ ಆಯ್ಕೆಯಾಗಿದ್ದು ನೂರಾರು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಸಿಗದೇ ಇರುವುದು ವಿಪರ್ಯಾಸವಾಗಿದೆ. ಗಂಗಾವತಿ ತಾಲೂಕಿನಲ್ಲಿ ಅತಿ ಹೆಚ್ಚು ಕಾಲೇಜ್‌ಗಳು ಇದ್ದು ದೂರದ ಗ್ರಾಮಗಳಿಂದ ಸಾವಿರಾರು ಮಕ್ಕಳು ಶಿಕ್ಷಣಕ್ಕಾಗಿ  ನಗರಗಳಿಗೆ ಬರುತ್ತಿದ್ದು.  ಗ್ರಾಮಗಳಲ್ಲಿ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ  ಅಗತ್ಯವಾಗಿ ಬೇಕಾಗಿದೆ.ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ.ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳು ಹಾಸ್ಟೆಲ್‌ಗೆ ಅರ್ಜಿ ಹಾಕಿದ್ದು.ಸಮಾಜ ಕಲ್ಯಾಣ ಇಲಾಖೆಯ ಮಾದರಿಯಲ್ಲಿ ಎಲ್ಲಾರಿಗೂ ಹಾಸ್ಟೆಲ್ ಕೊಡಿ. ಅಥವಾ ವಿದ್ಯಾಸಿರಿ ಯೋಜನೆಯ ಹಣದಲ್ಲಿ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕೆಂದು  ಒತ್ತಾಯಿಸಿದ್ದಾರೆ.

ಇದನ್ನೂಓದಿ:ಹಾಸ್ಟೆಲ್‌ಗೆ ಅರ್ಜಿ ಹಾಕಿದ ಎಲ್ಲಾ OBC ವಿದ್ಯಾರ್ಥಿಗಳಿಗೆ ಸೌಲಭ್ಯ ನೀಡುವಂತೆ ಎಸ್‌ಎಫ್‌ಐ ಆಗ್ರಹ

ಗಂಗಾವತಿಯಲ್ಲಿ ಇಂಜಿನಿಯರಿಂಗ್ ಬಿ.ಎಡ್.ನರ್ಸಿಂಗ್. ಕಾನೂನು ಮಹಾವಿದ್ಯಾಲಯದಂತಹ ವೃತ್ತಿಪರ ಕಾಲೇಜುಗಳು ಆರಂಭವಾಗಿ ಸುಮಾರು ವರ್ಷಗಳು ಆದರೂ ಇಲ್ಲಿಯವರೆಗೂ ಪ್ರತ್ಯೇಕೆ ವೃತ್ತಿಪರ ಹಾಸ್ಟೆಲ್‌ಗಳಿಲ್ಲ ಎಲ್ಲಾ ವಿದ್ಯಾರ್ಥಿಗಳು  ಒಂದೇ ಹಾಸ್ಟೆಲ್‌ನಲ್ಲಿ ಇರಬೇಕಾದ ಪರಸ್ಥಿತಿ ಇದ್ದು. ಬಿ.ಸಿ ಎಮ್ ಇಲಾಖೆಯ  ಹಾಸ್ಟೆಲ್ ಹೊಸ ಕಟ್ಟಡ  ಇದೆ ಅದರಲ್ಲಿ ಪ್ರತ್ಯೇಕವಾದ ವೃತ್ತಿಪರ ಹಾಸ್ಟೆಲ್  ಆರಂಭಿಸಬೇಕು. ಎಲ್ಲಾ ವಿವಿಧ ಕೋರ್ಸಗಳ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿರುವುದರಿಂದ ಪಿಯುಸಿ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲಾರಿಗು ಹಾಸ್ಟೆಲ್ ಸೌಲಭ್ಯಸಿಗಲಿ ಹೊಸ ಹಾಸ್ಟೆಲ್ ಪ್ರಾರಂಭವಾಲಿ ಸಮಾಜ ಕಲ್ಯಾಣ ಇಲಾಖೆಯ ಮಾದರಿಯಲ್ಲಿ ಬಿಸಿಎಮ್  ಇಲಾಖೆಯವರು ಸಹ ಓ.ಬಿ.ಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕೊಡಿ, ಕೇವಲ ಶಾಸಕ ಸಚಿವರ ಶಿಪಾರಸ್ಸುಗಳ ಮೇಲೆ ಹಾಸ್ಟೆಲ್‌ಗೆ ವಿದ್ಯಾರ್ಥಿಗಳನ್ನು ತೆಗೆದುಕೊಂಡರೆ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕೊಡುವವರು  ಯಾರು ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ.

ಗಂಗಾವತಿ ತಾಲ್ಲೂಕಿನ ಇಲಾಖೆಯ ಅಧಿಕಾರಿಗಳು, ಸಂಬಂಧಿಸಿದ ಇಲಾಖೆಗಳ ಸಚಿವರು, ಕೊಪ್ಪಳ ಜಿಲ್ಲೆಯವರು ಇದ್ದು ಹೆಚ್ಚುವರಿ ಹಾಸ್ಟೆಲ್  ಅಥವಾ ಹೊಸ ಹಾಸ್ಟೆಲ್ ಮಂಜೂರಿ ಮಾಡಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ  ರಾಜ್ಯಾಧ್ಯಕ್ಷ ಅಮರೇಶ ಕಡಗದ, ತಾಲೂಕಾಧ್ಯಕ್ಷ ಗ್ಯಾನೇಶ ಕಡಗದ, ಕಾರ್ಯದರ್ಶಿ ಶಿವುಕುಮಾರ, ಮುಖಂಡರಾದ ನಾಗರಾಜ, ಸೋಮನಾಥ, ಶರೀಪ್ ,ಬಾಲಾಜಿ, ಶಂಕರ, ರಾಜಭಕ್ಷಿ, ಬಸವರಾಜ, ಮೌನೇಶ, ದುರುಗೇಶ, ವಿದ್ಯಾರ್ಥಿಗಳಾದ ಸುನೀತಾ, ಸಂಜನಾ, ದೇವರಾಜ, ಪ್ರಿಯಾಂಕ, ಶ್ರಾವಣಿ, ನಿವೇದಿತಾ, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *