ಬೆಂಗಳೂರು | ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಕ್ಯಾರಿವೋವರ್ ನೀಡಿ ಸಚಿವ ಡಾ. ಎಂ.ಸಿ ಸುಧಾಕರಗೆ ಎಸ್‌ ಫ್‌ ಐ ಮನವಿ

ಬೆಂಗಳೂರು  : ಇಂಜಿನಿಯರಿಂಗ್ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳು ದ್ವಿಗುಣಗೊಂಡಿದ್ದು ವಿದ್ಯಾರ್ಥಿಗಳ ಪರೀಕ್ಷೆ ಮಾದರಿಯನ್ನು ಸಂಪೂರ್ಣವಾಗಿ ಬದಲಿಸಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ಕಿರುಕುಳ ನೀಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿರುವುದು ಖೇದಕರ ಸಂಗತಿ ಎಂದು ಆರೋಪಿಸಿ  ಭಾರತ ವಿದ್ಯಾರ್ಥಿ ವಿದ್ಯಾರ್ಥಿ ಫೆಡರೇಷನ್ (ಎಸ್‌ ಫ್‌ ಐ) ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ಉನ್ನತ ಶಿಕ್ಷಣ ಸಚೀವರಿಗೆ ಮನವಿ ಸಲ್ಲಿಸಲಾಯಿತು. ಬೆಂಗಳೂರು

ಇದನ್ನೂ ಓದಿ : ಶಿವಮೊಗ್ಗ | ₹ 3,000 ಕೋಟಿ ವೆಚ್ಚದಲ್ಲಿ 800 ಕರ್ನಾಟಕ ‍ಪಬ್ಲಿಕ್ ಶಾಲೆ ಗೆ ಮುಖ್ಯಮಂತ್ರಿ ಚಾಲನೆ

ವಿ.ಟಿ.ಯುನ 2022ನೇ ಸಾಲಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಂತಿಮ ಸೆಮಿಸ್ಟರ್ ಪರೀಕ್ಷೆಯು ನಡೆಸಿದ್ದು ಈ ಪರೀಕ್ಷೆಯಲ್ಲಿ ಸರಿಯಾಗಿ ಮೌಲ್ಯಮಾಪನ ಮಾಡದೆ ವಿದ್ಯಾರ್ಥಿಗಳನ್ನು ಉದ್ದೇಶ ಪೂರ್ವಕವಾಗಿ ಅನುತ್ತೀರ್ಣಗೊಳಿಸುವುದು ಮತ್ತು ಮರು ಮೌಲ್ಯಮಾಪನ ಹಾಕಿದ ವಿದ್ಯಾರ್ಥಿಗಳಿಗೆ ಸರಿಯಾದ ಫಲಿತಾಂಶ ಘೋಷಣೆ ಮಾಡದೇ ಇರುವುದು ವಿಶ್ವವಿದ್ಯಾಲಯ ಲೋಪವಾಗಿದೆ. ಇದು ಪ್ರತಿ ವರ್ಷವು ಕೇಳಿಬರುತ್ತಿದೆ. ಕೋವಿಡ್ ನಂತರದಲ್ಲಿ ವಿ.ಟಿ.ಯು ಅನೇಕ ನಿಯಮಗಳ ಬದಲಿಸಿಕೊಂಡು, ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ನೀಡದೆ, ಪರೀಕ್ಷೆ ಮಾದರಿಯ ಗೊಂದಲವನ್ನು ಸೃಷ್ಟಿಸಿದೆ. ಮೌಲ್ಯ ಮಾಪನ ಶ್ಯೂನ್ಯ ಅಂಕಗಳನ್ನು ನೀಡಿ ಲೋಪವೆಸಗಿದೆ. ಇದರ ಹಿಂದೆ ದೊಡ್ಡ ಮಾಫಿಯಾ ಇದೆ ಎಂದು ಎಸ್‌ ಫ್‌ ಐ  ಆರೋಪಿಸಿದೆ. ಬೆಂಗಳೂರು

ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪರೀಕ್ಷಾ ಮಾದರಿಯನ್ನು ಸಡಿಲುಗೊಳಿಸಿ ವಿದ್ಯಾರ್ಥಿಗಳಿಗೆ ಕ್ಯಾರಿವೋವರ್ ಹೆಚ್ಚಿಸಿ ಮುಂದಿನ ಸೆಮಿಸ್ಟರ್‌ಗಳಿಗೆ ಅವಕಾಶ ಮಾಡಿಕೊಡಬೇಕು. ಹಾಗೂ ವಿದ್ಯಾರ್ಥಿಗಳ ಮೌಲ್ಯಮಾಪನ ಸರಿಯಾದ ಕ್ರಮದಲ್ಲಿ ನಡೆಯಬೇಕು. ವಿ.ಟಿ.ಯು ಅನುಸರಿಸುವ ಮೌಲ್ಯಮಾಪನದ ಮಾದರಿಯನ್ನು ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಬೇಕು. ಹಾಗೂ ಫಲಿತಾಂಶ ಪ್ರಕಟದ ಸಂದರ್ಭದಲ್ಲಿ ಆಗುವ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು.  ಲಕ್ಷಗಟ್ಟಲೆ ಹಣ ಖರ್ಚು ಮಾಡಿ ತಾಂತ್ರಿಕ ಶಿಕ್ಷಣಕ್ಕೆ ಸೇರಿದ ಸಂದರ್ಭದಲ್ಲಿ ಸರಿಯಾದ ಸ್ಪಂದನೆ ಮತ್ತು ಸರಿಯಾದ ಫಲಿತಾಂಶಗಳು ಸಿಗದೇ ಕೆಲವು ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಶಿಕ್ಷಣ ಎನ್ನುವುದು ಬದುಕನ್ನು ರೂಪಿಸುವುದಾಗಿದೆ ಹೊರತು ಪ್ರಾಣ ತೆಗೆಯುವುದಲ್ಲ. ಆದರೆ ವಿ.ಟಿ.ಯುನಲ್ಲಿ ವಿದ್ಯಾರ್ಥಿಗಳ‌ ಭವಿಷ್ಯ ಮತ್ತು ಜೀವನದ ಕುರಿತು ಯಾವುದೇ ಕಾಳಜಿ ಇಲ್ಲ. ಇಂದು ತಾಂತ್ರಿಕ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದು ಅನಿವಾರ್ಯವಾಗಿದೆ. ಹಾಗಾಗಿ ತಾವುಗಳು ಕೂಡಲೆ ವಿ.ಟಿ.ಯು ನಡುವೆ ಮಧ್ಯಪ್ರವೇಶ ಮಾಡಿ ವಿದ್ಯಾರ್ಥಿಗಳಿಗೆ ಬ್ಯಾಕ್‌ ಅಪ್‌ ಇಯರ್‌ ಸೇರಿದಂತೆ, ಕ್ಯಾರಿವೋರ್ ನೀಡಿ ಮತ್ತು ಅವರ ಉದ್ಯೋಗದ ತೊಡಕನ್ನು ನಿವಾರಿಸಬೇಕು. ಔದ್ಯೋಗಿಕ ತರಬೇತಿ(ಇಂಟ್ರೆನ್ಷಿಪ್) ಸೌಲಭ್ಯವನ್ನು ವಿಶ್ವವಿದ್ಯಾಲಯ ಮತ್ತು ಸರ್ಕಾರವೇ ರೂಪಿಸಿಬೇಕು. ಎಂದು ಭಾರತ ವಿದ್ಯಾರ್ಥಿ ಫೆಡರೇಷನ್  ಎಸ್‌ ಫ್‌ ಐ ಕರ್ನಾಟಕ ರಾಜ್ಯ ಸಮಿತಿ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಿದೆ. ಬೆಂಗಳೂರು

ಹಲವು ಹಕ್ಕೋತ್ತಾಯಗೋಂದಿಗೆ ಮನವಿ ಸಲ್ಲಿಸಲಾಯಿತು  2022ನೇ ವರ್ಷದ ಮತ್ತು ನಂತರದ ಅಧ್ಯಾಯನ ಮಾಡುವ ವಿದ್ಯಾರ್ಥಿಗಳಿಗೆ ಬ್ಯಾಕ್‌ ಅಪ್‌ ಇಯಾರ್‌ ಸೇರಿದಂತೆ, ಕ್ಯಾರಿವೋರ್ ನೀಡಿ ಮುಂದಿನ ಸೆಮಿಸ್ಟರ್‌ಗೆ ಅನುಕೂಲ ಮಾಡಿಕೊಡಬೇಕು, ಮೌಲ್ಯ ಮಾಪನದ ಲೋಪವನ್ನು ಸರಿಪಡಿಸಿ, ಸರಿಯಾದ ಕ್ರಮದಲ್ಲಿ ಮೌಲ್ಯಮಾಪನ ಮಾಡಬೇಕು,ಮರು ಮೌಲ್ಯ ಮಾಪನದಲ್ಲಿ ವ್ಯಸಗುವ ಲೋಪವನ್ನು ತಡೆಯಬೇಕು. ಮತ್ತು ಉತ್ತೀರ್ಣರಾದ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಸಬೇಕು.

ಈ ಸಂಧರ್ಭದಲ್ಲಿ ಎಸ್‌ ಫ್‌ ಐ ನ ರಾಜ್ಯ ಉಪಾಧಕ್ಷ್ಯರಾದ ಡಾ. ದೊಡ್ಡ ಬಸವರಾಜ ಗುಳೆದಾಳ, ರಾಜ್ಯ ಸಮೀತಿ ಸದಸ್ಯರಾದ ಅರ್ಪೀತಾ ಗ್ರೆಸೀ, ಬೆಂಗಳೂರು ಜಿಲ್ಲೆಯ ಮುಖಂಡರಾದ ಮಣಿ ಭಾರತಿ, ಅಂಕೀತಾ ಬ್ಲೇಸಿ, ಚಂದನ ಇದ್ದರು.

ಇದನ್ನೂ ನೋಡಿ : ಸಾರ್ವಜನಿಕ ಶಿಕ್ಷಣದ ಉಳಿವಿಗಾಗಿ, ಹಾಸ್ಟೆಲ್ ಬಲವರ್ಧನೆಗಾಗಿ SFI ರಾಜ್ಯವ್ಯಾಪಿ ಜಾಥಾ Janashakthi Media

Donate Janashakthi Media

Leave a Reply

Your email address will not be published. Required fields are marked *