ರೋಣ : ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಡಾ ಬಿ ಆರ್ ಅಂಬೇಡ್ಕರ್ ಬಾಲಕರ ಮೆಟ್ರೀಕ್ ನಂತರದ ವಸತಿ ನಿಲಯದಲ್ಲಿ ಸುಮಾರು 120 ವಿದ್ಯಾರ್ಥಿಗಳು ಇರುವ ವಸತಿ ನಿಲಯವಿದು. ಇಲ್ಲಿ ದಿನನಿತ್ಯ ಸುಮಾರು ನೂರಾರು ಜನ ವಿದ್ಯಾರ್ಥಿಗಳು ಸೌಲಭ್ಯ ಪಡೆಯುತ್ತಿದ್ದಾರೆ ಆದರೆ ಸರಿಯಾದ ಮೂಲಭೂತ ಸೌಕರ್ಯಗಳು ಇಲ್ಲ, ಸೋಪ್ ಕೀಟ್ ,ಹಾಸಿಗೆ ಹೋದಿಕೆ, ನೀರು, ಆಟದ ಸಾಮಗ್ರಿಗಳು, ಸೌಚಾಲಯ ಸ್ವಚ್ಛತೆ, ಗ್ರಂಥಾಲಯ ಪುಸ್ತಕ , ಬಿಲ್ಡಿಂಗ್ ಸೋರಿಕೆ ತಡೆಗಟ್ಟಲು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ಗದಗ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸಿದರು. ರೋಣ
ಈ ಸಂದರ್ಭದಲ್ಲಿ ಎಸ್ ಎಫ್ ಐ ಗದಗ ಜಿಲ್ಲಾ ಅಧ್ಯಕ್ಷರಾದ ಚಂದ್ರು ರಾಠೋಡ ಮಾತನಾಡಿ ಶೈಕ್ಷಣಿಕ ವರ್ಷ ಆರಂಭವಾಗಿ ಸುಮಾರು ಆರು ತಿಂಗಳು ಗತಿಸಿದರೂ ಕೂಡ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳು ಸಿಗದೇ ಇರುವುದು ಖೇದಕರ. ರೋಣ ಶಾಸಕರು ಸ್ಥಳೀಯರು ಆದ ಮಾನ್ಯ ಶ್ರೀ ಜಿ ಎಸ್ ಪಾಟೀಲ್ ಅವರಿಗೆ ಗ್ರಾಮೀಣ ಭಾಗದಿಂದ ಬಂದ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆಗಳ ಕೂಗು ಕೇಳಲಿಲ್ಲ ಅನಿಸುತ್ತದೆ ಆದರೆ ಎಸ್ ಎಫ್ ಐ ಸಂಘಟನೆ ಅವುಗಳನ್ನು ಖಂಡಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುತ್ತದೆ ಅದರ ಭಾಗವಾಗಿ ಇಂದು ಸಮಸ್ಯೆಗಳನ್ನು ಆಗ್ರಹಿಸಿ ಹಾಸ್ಟೆಲ್ ವಿದ್ಯಾರ್ಥಿಗಳು ಎಸ್ ಎಫ್ ಐ ನೇತೃತ್ವದಲ್ಲಿ ಹೋರಾಟ ಮಾಡಿದ್ದಾರೆ. ಸಂಬಂಧಪಟ್ಟ ಇಲಾಖೆಯ ಜಿಲ್ಲಾಧಿಕಾರಿಗಳು ಹಾಗೂ ತಾಲೂಕಾ ಅಧಿಕಾರಿಗಳು ವಸತಿ ನಿಲಯಕ್ಕೆ ಬಾಲಕರ ಮೆಟ್ರಿಕ್ ನಂತರದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಅಗ್ರಹಿಸಿದರು.
ಹೋರಾಟ ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಗೀತಾ ಆಲೂರ ಅವರು ಮಾತನಾಡಿ ಸಮಯದ ಅವಕಾಶ ಕೇಳಿದರು ಅದನ್ನು ವಿದ್ಯಾರ್ಥಿಗಳು ತಿರಸ್ಕರಿಸಿದು ಮತ್ತೆ ಮದ್ಯ ಪ್ರವೇಶಿಸಿ ತಕ್ಷಣಕ್ಕೆ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಮುಂದಾದರು ಸೋಪ್ ಕೀಟ್, ಹಾಸಿಗೆ ಹೋದಿಕೆ, ನೀರು ಶೌಚಾಲಯ ಸ್ವಚ್ಛತೆ, ಆಟದ ಸಾಮಗ್ರಿಗಳು, ಸ್ನಾನಕ್ಕೆ ಬಕೆಟ್ ಇವುಗಳನ್ನು ಕಲ್ಪಿಸಿದರು, ಹಾಗೂ ಇನ್ನೂ ಕೆಲವು ಬೇಡಿಕೆಗಳಾದ ಕಟ್ಟಡ ಸೋರಿಕೆ, ಕೀಟಕಿ ರೀಪೇರಿ, ಸೋಳ್ಳೇ ಪರದೆ, ಕಂಪ್ಯೂಟರ್ ಲ್ಯಾಬ್ ಇವುಗಳನ್ನು ಒಂದು ತಿಂಗಳ ಅವಧಿಯಲ್ಲಿ ಸರಿಪಡಿಸಲು ಮುಂದಾಗುತ್ತೆವೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ಗಜೇಂದ್ರಗಡ ಎಸ್ ಎಫ್ ಐ ತಾಲೂಕ ಅಧ್ಯಕ್ಷರಾದ ಅನಿಲ್ ಆರ್ ಹಾಸ್ಟೆಲ್ ಉಪ ಸಮಿತಿಯ ಸಹ ಸಂಚಾಲಕರಾದ ಶರಣು ಮಾಟರಂಗಿ ಹಾಗೂ ದುರಗಪ್ಪ ಮಾದರ, ಸುನೀಲ್ ರಾಠೋಡ. ಪರಶುರಾಮ ಲಮಾಣಿ ಮಹಾಂತೇಶ, ಹನುಮಂತಪ್ಪ ನೆಲ್ಲೂರ ಸಂಗಪ್ಪ ಮಾದರ ಮಾಂತೇಶ್ ದ್ಯಾಮಣ್ಣವರ, ರಾಜೇಶ ಮದರ್ ದರ್ಶನ್ ಚಲವಾದಿ ಗಂಗಾಧರ್ ಲಮಾಣಿ , ಹಾಸ್ಟೆಲನ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
