ಭಾರತದ ಅತಿದೊಡ್ಡ ಐಟಿ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ನ ಸಾಮೂಹಿಕ ರಿಟ್ರೆಂಚ್‌ಮೆಂಟ್ ಯೋಜನೆ ಲಜ್ಜೆಗೆಟ್ಟ ಮತ್ತು ವಿನಾಶಕಾರಿ ನಡೆ ಎಂದು ಸಿಐಟಿಯು ಬಲವಾಗಿ ಖಂಡಿಸಿದೆ, ಇದು ಜಾಗತಿಕವಾಗಿ ಅದರ ಉದ್ಯೋಗಿಗಳ 2% ರಷ್ಟು – ಭಾರತದಾದ್ಯಂತ 12,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಬಾಧಿಸಲಿದೆ.
ಇಂತಹ ಯೋಜನೆಗಳು ಟಿಸಿಎಸ್‌ಗೆ ಮಾತ್ರ ಸೀಮಿತವಾಗಿಲ್ಲ – ಹಲವಾರು ಇತರ ಕಂಪನಿಗಳು ಸಹ ಉದ್ಯೋಗಿಗಳ ರಿಟ್ರೆಂಚ್‌ಮೆಂಟ್ ಮತ್ತು ಲೇ-ಆಫ್‌ಗಳನ್ನು ಪ್ರಾರಂಭಿಸುತ್ತಿವೆ.
ಸುಂಕ ಸಮರ ಮತ್ತು ಇತರ ಬಾಹ್ಯ ಅಂಶಗಳಿAದಾಗಿ ಹೊರಗುತ್ತಿಗೆ-ಅವಲಂಬಿತ ಐಟಿ ವಲಯ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಐಟಿ ಕಂಪನಿಗಳು, ಕಾರ್ಮಿಕ ಸಂಘಗಳು ಮತ್ತು ಸೂಕ್ತ ಸರ್ಕಾರಿ ಅಧಿಕಾರಿಗಳ ನಡುವೆ ತ್ರಿಪಕ್ಷೀಯ ಸಭೆಗಳನ್ನು ಕರೆಯಬೇಕೆಂದು ಸಿಐಟಿಯು ಒತ್ತಾಯಿಸುತ್ತಿದೆ.
ಈ ಹಿನ್ನೆಲೆಯಲ್ಲಿ, ಸಿಐಟಿಯು ತನ್ನ ಸಂಯೋಜಿತ ಸಂಘಟನೆಗಳು ಮತ್ತು ಎಲ್ಲಾ ಐಟಿ ನೌಕರರು ಆಗಸ್ಟ್ 19, 2025 ರಂದು ದೇಶಾದ್ಯಂತ ಟಿಸಿಎಸ್ ಕಚೇರಿಗಳ ಮುಂದೆ ಪ್ರತಿಭಟನಾ ಕ್ರಮಗಳನ್ನು ಸಂಘಟಿಸಬೇಕು ಎಂದು ಕರೆ ನೀಡಿದೆ.
