ಹಾಸನ | ವೆನುಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೇರಿಕಾರಿಕಾ ದಾಳಿ ಖಂಡಿಸಿ ಸಿಪಿಐಎಂ ಪ್ರತಿಭಟನೆ

ಹಾಸನ : ವೆನುಜುವೆಲಾ ಮೇಲೆ ಸಾಮ್ರಾಜ್ಯಶಾಹಿ ಅಮೇರಿಕಾರಿಕಾ ದಾಳಿ ಅಂತರಾಷ್ಟ್ರೀಯ ನೀತಿಗಳಿಗೆ ವಿರುದ್ಧವಾದದ್ದು ಮಾತ್ರವಲ್ಲ ಇದು ಅತ್ಯಂತ ದುರಾಕ್ರಮಣ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್.ನವೀನ್‌ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಹಾವೀರ ವೃತ್ತದಲ್ಲಿ  ಸಿಪಿಐಎಂ ಹಾಸನ ಜಿಲ್ಲಾ ಸಮಿತಿಯು ಆಯೋಜಿಸಿದ ಪ್ರತಿಭಟನೆಯನ್ನುದ್ದೆಶಿಸಿ ಮಾತನಾಡಿದ ಅವರು  “ವೆನುಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೇರಿಕಾರಿಕಾ ದಾಳಿ ಖಂಡಿಸಿ, ವೆನುಜುವೆಲ್ಲಾದ ಅಧ್ಯಕ್ಷ ನಿಕೊಲೊಸ್ ಮಡುರೋ ಮತ್ತು ಆತನ ಹೆಂಡತಿ ಬಿಡುಗಡೆಗೆ ಆಗ್ರಹಿಸಿದರು.

ಇದನ್ನೂ ಓದಿ : ರಸ್ತೆ ಬದಿಯಲ್ಲಿ ಬಿದ್ದಿದ್ದ ಚಿನ್ನಾಭರಣಗಳನ್ನು ಪೊಲೀಸರಿಗೆ ಒಪ್ಪಿಸಿದ ಪೌರಕಾರ್ಮಿಕ ಮಹಿಳೆ

ಅಮೇರಿಕಾ ಜಗತ್ತಿಗೆ ಪ್ರಜಾಪ್ರಭುತ್ವದ ಕುರಿತು ಪಾಠ ಮಾಡುತ್ತಾ ನಾನು ಪ್ರಜಾಪ್ರಭುತ್ವ ರಾಷ್ಟ ಎಂದು ಹೇಳುತ್ತಲೇ ಅತ್ಯಂತ ಪ್ರಜಾಪ್ರಭುತ್ವ ವಿರೋಧಿಯಾಗಿ ಸರ್ವಾಧಿಕಾರಿಯಾಗಿ ನಡೆದುಕೊಳ್ಳುತ್ತಿದೆ. ವೆನುಜುವೆಲಾದಂತಹ ಒಂದು ಸ್ವತಂತ್ರ ಸಾರ್ವಭೋಮ ರಾಷ್ಟದ ಮೇಲೆ ಏಕಾಏಕಿ ನುಗ್ಗಿ ಬಾಂಬ್ ದಾಳಿ ನಡೆಸಿ ನೂರಕ್ಕೂ ಹೆಚ್ಚು ಜನರನ್ನು ಕೊಂದು ಅಲ್ಲಿ ಅಧ್ಯಕ್ಷರನ್ನು ಅಪಹರಿಸಿರುವುದು ಅತ್ಯಂತ ಖಂಡನೀಯ ಮತ್ತು ಇದರ ಹಿಂದಿನ ಅಮೇರಿಕಾದ ಉದ್ದೇಶ ಆತಂಕ ಮೂಡಿಸುವಂತಹದ್ದು. ವೆನುಜುವೆಲ್ಲಾದ ತೈಲ ಮತ್ತು ಖನಿಜ ಸಂಪತ್ತನ್ನ ತನ್ನದಾಗಿಸಿಕೊಳ್ಳಬೇಕು ಆ ಮೂಲಕ ತನ್ನ ದೇಶದ ಕಂಪನಿಗಳಿಗೆ ಲಾಭ ಮಾಡಿಕೊಡಬೇಕೆನ್ನುವ ಉದ್ದೇಶ ಇದರ ಹಿಂದಿರುವುದು ಸ್ಪಷ್ಟವಾಗುತ್ತಿದೆ ಎಂದು ದೂರಿದರು.

ಅಮೇರಿಕಾದ ಬಂಡವಾಳಶಾಹಿ ವ್ಯವಸ್ಥೆ ಇಂದು ಬಿಕ್ಕಟ್ಟಿಗೆ ಸಿಲುಕಿದ್ದು ಅದರಿಂದ ಹೊರಬರಲು ಟ್ರಂಪ್ ನೇತೃತ್ವದಲ್ಲಿ ಬಂಡವಾಳಶಾಹಿ ಇಂತಹ ಕೃತ್ಯಗಳಿಗೆ ಇಳಿದಿದೆ. ಇದು ಜಾಗತಿಕವಾಗಿ ಎಲ್ಲಾ ಮಾನವ ಪರರನ್ನು ಮತ್ತು ಶಾಂತಿಪ್ರಿಯರನ್ನು ಒಂದುಗೂಡಿಸಿ ಮುಂದಾಗಬಹುದಾದ ಯುದ್ಧದಂತಹ ಅಪಾಯವನ್ನು ತಡೆಯಬೇಕಾದ ಸಂದರ್ಭ. ತನ್ನ ದೇಶದ ಎಲ್ಲಾ ಸಂಪತ್ತನ್ನು ಅಲ್ಲಿಯ ಜನರಿಗಾಗಿ ಬಳಕೆ ಮಾಡಲು ಮುಂದಾಗಿರುವ ಲ್ಯಾಟಿನ್ ಅಮೇರಿಕಾದ ವೆನುಜುವೆಲಾ, ಕ್ಯೂಬಾದಂತಹ ರಾಷ್ಟçಗಳ ಸಮಾಜವಾದಿ ನಿಲುವಿನಿಂದ ವಿಚಲಿತವಾಗಿರುವ ಅಮೇರಿಕಾ ಈ ರಾಷ್ಟçಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಆ ರಾಷ್ಟçಗಳ ಮೇಲೆ ಆರ್ಥಿಕ ದಿಗ್ಬಂದನವನ್ನು ವಿಧಿಸಿ, ಅವುಗಳನ್ನು ಸಂಕಷ್ಟಕ್ಕೆ ಈಡುಮಾಡಿ, ತನ್ನ ವಶಮಾಡಿಕೊಳ್ಳುವ ಹುನ್ನಾರ ಇದರ ಹಿಂದೆ ಅಡಗಿದೆ ಎಂದು ನವೀನ್ ಕುಮಾರ್ ಆಕ್ರೋಶ ವ್ಯಕ್ತಪಡಿಸುತ್ತಾ ಕೂಡಲೇ ವೆನುಜುವೆಲ್ಲಾದ ಅಧ್ಯಕ್ಷ ನಿಕೊಲೊಸ್ ಮಡುರೋ ಮತ್ತು ಆತನ ಹೆಂಡತಿ ಬಿಡುಗಡೆಗೆ ಆಗ್ರಹಿಸಿದರು.

ಅಮೇರಿಕಾ ಇಂದು ಜಗತ್ತಿನ ಸಂಪತ್ತಿನ ಮೇಲೆ ತನ್ನ ಹಿಡಿತ ಸಾಧಿಸಲು ಸುಂಕ ಸಮರಕ್ಕೆ ಅಣಿಯಾಗಿದ್ದು ಇದರಿಂದ ಭಾರತದ ಕೃಷಿಕರು ಮತ್ತು ಇಲ್ಲಿಯ ಉತ್ಪಾದನೆ ಸೇರಿದಂತೆ ಜಗತ್ತಿನ ಅನೇಕ ರಾಷ್ಟçಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಭಾರತದ ಉತ್ಪನ್ನಗಳ ಮೇಲೆ ಅಮೇರಿಕಾ ಶೇ ೫೦೦ ರಷ್ಟು ಆಮದು ಸುಂಕ ವಿದಿಸಿದರೆ ಭಾರತದ ಯಾವ ಉತ್ಪನ್ನಗಳನ್ನು ಅಮೇರಿಕಾದಂತಹ ದೇಶಗಳಲ್ಲಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದ ನಮ್ಮಂತಹ ದೇಶದ ಆರ್ಥಿಕತೆಯ ಮೇಲೆ ತೀರ್ವವಾದ ಹೊಡೆತ ಬೀಡುತ್ತದೆ. ಅಮೇರಿಕಾದ ಇಂತಹ ನೀತಿಗಳನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಧಿಸಬೇಕಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ.ಪೃಥ್ವಿ, ಜಿಲ್ಲಾ ಸಮಿತಿ ಸದಸ್ಯರುಗಳಾದ ಜಿ.ಪಿ.ಸತ್ಯನಾರಾಯಣ, ಅರವಿಂದ ಮತ್ತು ಜನಪರ ಸಂಘಟನೆಗಳ ಮುಖಂಡರಾದ ರಾಜಶೇಖರ್ ಹುಲಿಕಲ್, ರಾಜು ಗೊರೂರು, ಟಿ.ಆರ್.ವಿಜಯ್ ಕುಮಾರ್, ಪ್ರಕಾಶ್, ಮುಬಷಿರ್ ಅಹಮದ್, ಇರ್ಷಾದ್ ಅಹಮ್ ದೇಸಾಯಿ, ಸಿ ಸೌಭಾಗ್ಯ, ಮಮತಾಶಿವು, ಚಿನ್ನೇನಹಳ್ಳಿ ಸ್ವಾಮಿ, ಅನ್ಸರ್, ರಮೇಶ್ ಮುಂತಾದ ಪ್ರಮುಖರು ಭಾಗವಹಿಸಿದ್ದರು.

ಇದನ್ನೂ ನೋಡಿ : ವೆನೆಜುವೆಲಾ ಮೇಲೆ ಯು.ಎಸ್. ಆಕ್ರಮಣ ಖಂಡಿಸಿ ಎಡಪಕ್ಷಗಳ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *