ಕಲಬುರಗಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ನೀಡಿದ ಹೇಳಿಕೆ ಖಂಡಿಸಿ ದಲಿತ ಪರ ಸಂಘಟನೆಗಳು ಇಂದು ಕಲಬುರಗಿ ಮತ್ತು ಗದಗ-ಬೆಟಗೇರಿ ಬಂದ್ಗೆ ಕರೆ ನೀಡಲಾಗಿದ್ದು, ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಬೇಡ್ಕರ್ ಅಂತಾ ಹೇಳುವುದು ಕೆಲವರಿಗೆ ಫ್ಯಾಷನ್ ಆಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು. ರಾಜ್ಯಾದ್ಯಂತ ಅಂಬೇಡ್ಕರ್ ಕುರಿತಾಗಿ ಅಮಿತ್ ಶಾ ನೀಡಿದ ಹೇಳಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಇಂದು ಕಲಬುರಗಿ ಹಾಗೂ ಗದಗ-ಬೆಟಗೇರಿ ಬಂದ್ಗೆ ದಲಿತ ಸಂಘಟನೆಗಳು ಕರೆ ನೀಡಿವೆ.
ಇದನ್ನೂ ಓದಿ: ಶ್ಯಾಮ್ ಬೆನೆಗಲ್ ನೆನಪು | ಆಂಕುರ್ (ಬೀಜಾಂಕುರ) – ರೂಪಕಗಳ ಸಮರ್ಥ ಅಭಿವ್ಯಕ್ತಿ
ವಿವಿಧ ದಲಿತಪರ ಸಂಘಟನೆಗಳಿಂದ ಗದಗ -ಬೆಟಗೇರಿ ಬಂದ್ ಗೆ ಕರೆ ನೀಡಲಾಗಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿ ಕೂಡ ಬೆಂಬಲ ಸೂಚಿಸಿದೆ. ರೋಣಾ ಶಾಸಕ ಜೆ.ಎಸ್. ಪಾಟೀಲ್ ಬಂದ್ ಬೆಂಬಲಿಸಿ ಪತ್ರ ಬರೆದಿದ್ದಾರೆ.
ಅಮಿತ್ ಶಾ ಹೇಳಿಕೆ ಖಂಡಿಸಿ ವಿವಿಧ ದಲಿತ ಪರ ಸಂಘಟನೆಗಳಿಂದ ಇಂದು ಕಲಬುರಗಿ ಬಂದ್ಗೆ ಕರೆ ನೀಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜಿಗೆ ಡಿಡಿಪಿಐ ಸೂರ್ಯಕಾಂತ್ ರಜೆ ಘೋಷಿಸಿದ್ದಾರೆ. ಬಂದ್ ಹಿನ್ನೆಲೆ ಇಂದು ಮದ್ಯ ಮಾರಾಟ ಕೂಡ ನಿಷೇಧಿಸಲಾಗಿದೆ.
ಇದನ್ನೂ ನೋಡಿ: ಪಿಚ್ಚರ್ ಪಯಣ – 154 , ಎಮಿಲಿಯಾ ಪೆರೇಝ್, ನಿರ್ದೇಶನ : ಜಾಕ್ ಆಡಿಯಾರ್ಡ್ , ವಿಶ್ಲೇಷಣೆ : ಮ.ಶ್ರೀ.ಮುರಳಿ ಕೃಷ್ಣ