ತುಮಕೂರು : ನಗರದ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಂದಿಹಳ್ಳಿ–ಮಲ್ಲಸಂದ್ರ ಬೈಪಾಸ್ ರಸ್ತೆ ನಿರ್ಮಾಣಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಬುಧವಾರ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳನ್ನು ವಾಪಸ್ ಕಳುಹಿಸಿದರು.
ವಿಶೇಷ ಭೂಸ್ವಾಧೀನಾಧಿಕಾರಿ ಧರ್ಮಪಾಲ್, ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್, ಸಿಬ್ಬಂದಿ ಕೌತಮಾರನಹಳ್ಳಿ ಗ್ರಾಮದ ಬಳಿ ಸಮೀಕ್ಷೆಗೆ ಹೋಗಿದ್ದರು. ಈ ವೇಳೆ ರೈತ ಮುಖಂಡರು, ಗ್ರಾಮಸ್ಥರು ಸಮೀಕ್ಷೆ ಕಾರ್ಯಕ್ಕೆ ಅಡ್ಡಿ ಪಡಿಸಿದರು. ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಯಾವುದೇ ಕಾರಣಕ್ಕೂ ಸಮೀಕ್ಷೆಗೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.
‘ಜಮೀನು ಸರ್ವೆ ಮಾಡುವ ಮುನ್ನ ಗ್ರಾಮ ಸಭೆ ನಡೆಸಬೇಕು. ಏಕಾಏಕಿ ಸಮೀಕ್ಷೆ ಮಾಡುವುದು ಸರಿಯಲ್ಲ. ಜಿಲ್ಲಾಧಿಕಾರಿ ರೈತರ ಜತೆಗೆ ಸಭೆ ನಡೆಸಬೇಕು’ ಎಂದು ರೈತರು ಒತ್ತಾಯಿಸಿದರು. ‘ರೈತರ ಸಮಸ್ಯೆ ಕೇಳದ ಜಿಲ್ಲಾಧಿಕಾರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಇದನ್ನೂ ಓದಿ : ಕೂಲಿ ಕೊಡದೆ ಪರಾರಿಯಾದ ಗಾರ್ಮೆಂಟ್ಸ್ ಮಾಲೀಕರ ವಿರುದ್ಧ ಕ್ರಮ: ಪ್ರತಿಭಟನೆ
ಸರ್ಕಾರದ ಬಳಿಗೂ ಒಂದು ನಿಯೋಗ ಹೋಗುತ್ತೇವೆ. ಬಹಳಷ್ಟು ರೈತರು ಈ ಯೋಜನೆ ವಿರೋಧಿಸಿದ್ದಾರೆ. ರೈತರ ಜತೆಗೆ ಸಭೆ ನಡೆಸುವಂತೆ ಒತ್ತಾಯಿಸುತ್ತೇವೆ. ಸಭೆ ನಡೆಸಿದರೆ ರೈತರಿಗೆ ಅಗತ್ಯ ಪರಿಹಾರವಾದರೂ ಸಿಗುತ್ತದೆ. ಆದರೆ, ಅಧಿಕಾರಿ ವರ್ಗ ಇದಕ್ಕೆ ಸಿದ್ಧವಿಲ್ಲ ಎಂದ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಸಂಚಾಲಕ ಸಿ.ಯತಿರಾಜು, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎ. ಗೋವಿಂದರಾಜು, ಕಾರ್ಯದರ್ಶಿ ಶಂಕರಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಬಿ.ಉಮೇಶ, ಅಖಿಲ ಭಾರತ ಕಿಸಾನ್ ಸಭಾ ಸಂಚಾಲಕ ಕೆಂಬೇಗೌಡ, ಹೋರಾಟ ಸಮಿತಿಯ ರಮೇಶ್, ಉದಯ್, ಲಿಂಗರಾಜು, ರೈತ ಮುಖಂಡರಾದ ಬೋರೆಗೌಡ, ಶಬ್ಬೀರ್, ಲೋಕೇಶ್ ಮುಂತಾದವರು ವಹಿಸಿದ್ದರು.
ಇದನ್ನೂ ನೋಡಿ : ಸಕ್ಕರೆ ಇಳುವರಿ ಆಧಾರದ ಮೇಲೆ ಪ್ರತಿ ಟನ್‌ಗೆ 5500ನೀಡಬೇಕು – ಎನ್ ಎಲ್. ಭರತ್‌ರಾಜ್ Janashakthi Media
